ಮಧ್ಯಾಹ್ನದ ಬಿಸಿಯೂಟ ಸೇವಿಸಿ ೫೦ ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

Must Read

ಬೀದರ – ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆ ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ೫೦ ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಶಾಲೆಯಲ್ಲಿ ನಡೆದಿದೆ.

ಅಸ್ವಸ್ಥಗೊಂಡ ಮಕ್ಕಳನ್ನು ಔರಾದ್ ತಾಲೂಕಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಕ್ಕಿಯಲ್ಲಿ ಹುಳು‌ ಇದ್ದ ಪರಿಣಾಮ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದು
ಮಧ್ಯಾಹ್ನದ ಬಿಸಿಯೂಟದ ಅಡುಗೆ ಪದಾರ್ಥಗಳನ್ನು ಸ್ವಚ್ಚಗೊಳಿಸದೇ ಹಾಕಿದ್ದಕ್ಕೆ ಈ ಅವಾಂತರ ಸಂಭವಿಸಿದೆ.
ಆಸ್ಪತ್ರೆಯಲ್ಲಿ ಮಕ್ಕಳಿಗೆ ಗ್ಲುಕೋಸ್ ಹಚ್ಚಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು

ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಪ್ರಭು ಚವ್ಹಾಣ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಆಸ್ಪತ್ರೆಗೆ ದೌಡಾಯಿಸಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯಿಂದ ಚಿಕಿತ್ಸೆಯ ವಿವರ ಪಡೆದು, ಮಕ್ಕಳಿಗೆ ಅಗತ್ಯವಿರುವ ಎಲ್ಲ ರೀತಿಯ ಉತ್ತಮ ಚಿಕಿತ್ಸೆ ಒದಗಿಸುವಂತೆ ಸೂಚಿಸಿದರು.

ವರದಿ : ನಂದಕುಮಾರ ಕರಂಜೆ, ಬೀದರ

LEAVE A REPLY

Please enter your comment!
Please enter your name here

Latest News

ಕವನ ವಿಶ್ಲೇಷಣೆ ; ಸಕಾರಾತ್ಮಕತೆಯ ಹೊಳಹು ಬಿಂಬಿಸುವ ಕವನ

ಜೀವಕಳೆ ಚಿಮ್ಮಿರಲಿನೂರು ನೋವಿನ ಮಧ್ಯೆ ಕಿರುನಗೆಯು ಹುಟ್ಟಿರಲಿ ದುಃಖ ಕಡಲಿನ ನಡುವೆ ಹುಟ್ಟು ಹಾಕುವ ದೋಣಿಕಷ್ಟಗಳ ಜಡಿಮಳೆಯು ನಂಬಿಕೆಯ ಕೊಡೆಯಿರಲಿ ಶೋಕದ ಮನೆಯಲ್ಲಿ ಪ್ರೀತಿ ಮೂಡಿರಲಿಕತ್ತಲೆಯ ದಾರಿಯಲಿ ಮಿಣುಕು ಬೆಳಕೊಂದಿರಲಿ ಇರುಳು ಬವಣೆಯ ಸರಿಸಿ ಹೊಸ ಬೆಳಕು ಉದಯಿಸಲಿನಲುಗಿ...

More Articles Like This

error: Content is protected !!
Join WhatsApp Group