ಗೋಕಾಕ್‌ನಲ್ಲಿ ದಿನಾಂಕ ಇತ್ತೀಚೆಗೆ ನಡೆದ 21ನೇ ಶೂನ್ಯ ಸಂಪಾದನಾ ಮಠದ ಶರಣ ಸಂಸ್ಕೃತಿ ಉತ್ಸವದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ತಮ್ಮ ಅಂಗರಕ್ಷಕರಾದ ಆಂಜನೇಯ ಪಿ. ದುರ್ಗಣ್ಣವರ ಅವರ ನಿವಾಸಕ್ಕೆ ಭೇಟಿ ನೀಡಿದರು.
ಗೋಕಾಕ್ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ನಿವಾಸಿಯಾಗಿರುವ ಆಂಜನೇಯ ಪಿ. ದುರ್ಗಣ್ಣವರ ಅವರು ನ್ಯಾಯಮೂರ್ತಿಗಳ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಮನೆಗೆ ನ್ಯಾಯಮೂರ್ತಿಗಳ ಭೇಟಿ ಕುಟುಂಬದವರಿಗೆ ಅಪಾರ ಸಂತೋಷ ತಂದಿತು. ನ್ಯಾಯಮೂರ್ತಿ ಶ್ರೀಶಾನಂದ ಅವರ ಸರಳತೆ, ಆತ್ಮೀಯತೆ ಹಾಗೂ ಗೌರವಪೂರ್ಣ ವರ್ತನೆಯ ಕುರಿತು ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಈ ಭೇಟಿ ಗ್ರಾಮದಲ್ಲಿ ವಿಶೇಷ ಗೌರವ ಮತ್ತು ಸಂತಸದ ವಾತಾವರಣವನ್ನು ಸೃಷ್ಟಿಸಿತು.

