ಕಾಂಗ್ರೆಸ್ ಶಾಸಕರ ಮಾತುಗಳು ಹೇಸಿಗೆ ತರಿಸುತ್ತವೆ – ಭಗವಂತ ಖೂಬಾ

Must Read

ಬೀದರ – ಪ್ರಸಕ್ತ ಮುಖ್ಯಮಂತ್ರಿ ಗಳು, ಮಂತ್ರಿಗಳು, ಶಾಸಕರು ಸದನದಲ್ಲಿ ಆಡುವ ಭಾಷೆ ಹೇಸಿಗೆ ತರುವಂತಿದೆ. ನನ್ನ ರಾಜಕೀಯ ಜೀವನದಲ್ಲಿ ಇಂಥಾ ಭಾಷೆಯನ್ನು ನೋಡಿಲ್ಲ. ಒಬ್ಬ ಸಿಎಂ ಶಾಸಕರನ್ನು ಉದ್ರೇಕಿಸಿ ಗಲಾಟೆ ಮಾಡಿಸುತ್ತಿದ್ದಾರೆ ಅಂದರೆ ಏನಿದು ? ಸಿಎಂ ಸೇರಿದಂತೆ ಎಲ್ಲರು ನಿಯಂತ್ರ ಕಳೆದುಕೊಳ್ಳಲು ಏನು ಕಾರಣ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಕೇಳಿದರು.

ವಿಧಾನ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡರ ಮಾತುಗಳನ್ನು ಪ್ರಸ್ತಾಪಿಸಿ ಅವರು ತೀವ್ರವಾಗಿ ಖಂಡಿಸಿದರು.

ನಗರದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಪ್ಪ ಚರ್ಮದ ಸರ್ಕಾರವಿದೆ. ಶಾಸಕರು ಯಾರೂ ನಿಯಂತ್ರಣದಲ್ಲಿ ಇಲ್ಲ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಮುಖ್ಯಮಂತ್ರಿ ಬರೀ ಕಾಲಹರಣ ಮಾಡುತ್ತಿದ್ದಾರೆ ಎಂದರು.

ಭಾರತದ ಮೇಲೆ ತೆರಿಗೆ ಕಡಿಮೆ ಮಾಡಿದ ಟ್ರಂಪ್ ವಿಚಾರ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಗಟ್ಟಿ ನಾಯಕತ್ವದ ಫಲ ಇದಾಗಿದೆ ಆದರೆ ಕಾಂಗ್ರೆಸ್ ನವರು ಮೋದಿ ಮಾತನಾಡಲ್ಲ ಎನ್ನುತ್ತಿದ್ದರು

ಹೀಗಾಗಿ ಕಾಂಗ್ರೆಸ್ ನವರಿಗೆ ಮೋದಿ ರಾಜನೀತಿ ಏಳು ಜನ್ಮವಾದರೂ ಗೊತ್ತಾಗುವುದಿಲ್ಲ. ಟ್ರಂಪ್ ಬೇರೆ ದೇಶಗಳಿಗೆ ಎದುರಿಸುವ ರೀತಿ ಭಾರತವನ್ನು ಎದುರಿಸಲು ಸಾಧ್ಯವಿಲ್ಲ. ಸ್ವತಃ ಟ್ರಂಪ್ ಮೋದಿ ನನ್ನ ಆತ್ಮೀಯ ಸ್ನೇಹಿತ ಎಂದು ಹೇಳಿದ್ದಾರೆ ಎಂದು ಭಗವಂತ ಖೂಬಾ ನುಡಿದರು

LEAVE A REPLY

Please enter your comment!
Please enter your name here

Latest News

ಕವನ : ಡಂಬಾಚಾರಿಗಳು

ಡಂಬಾಚಾರಿಗಳುಧರ್ಮ- ದೇವರ ಹುಟ್ಟಿಸಿ ಸುಳ್ಳು ಪವಾಡ ಸೃಷ್ಟಿಸಿ ಮುಗ್ಧ ಜನರನು ವಂಚಿಸಿ ಮೋಸ ಮಾಡಿ ದುಡ್ಡು ಗಳಿಸಿ ಮಡೆ ಎಡೆ ಸ್ನಾನದ ಹೆಸರಿನಲ್ಲಿ ಎಂಜಲಲೆಯ ಮೇಲೆ ಹೊರಳಾಡಿಸಿ ಮಂಡೆ ಬೋಳಿಸುವ ಡಂಬಾಚಾರಿಗಳು ಮೂಢಾಚರಣೆಗಳ ದಾಸರಾಗಿಸಿ ಜ್ಯೋತಿಷ್ಯ- ಭವಿಷ್ಯ ಕೇಳಿ ಮಾಟ-ಮಂತ್ರವ ಮಾಡಿಸಿ ಹೋಮ...

More Articles Like This

error: Content is protected !!
Join WhatsApp Group