ಕಲ್ಲ ಮೇಲೆ ಬೆಳೆದ ಮರಕ್ಕೆ
ನೀರು ಪೋಷಕಾಂಶ ನೀಡಿದ
ಮಹಾಮಹಿಮ ಯಾರು?
ಕಲ್ಲಮದ್ಯೆ ಜೀವಿಪ ಮಂಡೂಕಕ್ಕೆ
ಆಹಾರ ನೀಡಿಪನಾರು?
ಬಿಸಲು ಬೆಳಕು ನೀಡಿ
ನಮ್ಮಪೋರೇವ ಸೂರ್ಯಗೆ
ಬೆನ್ನೆಲುಬಾಗಿ ನಿಂತವನಾರು?
ಬೆಳದಿಂಗಳ ಚಂದ್ರ ನಿಗೆ ತಂಪನೆರೆದವನಾರು?
ಜೀವಜಲವಾಗಿ ನಮ್ಮ ದಾಹನಿಗುವ ಗಂಗಾಮಾತೆ ಯಾರ ಕೇಳಿ ಪ್ರವಹಿಸುವಳು?
ಪ್ರಾಣವಾಯು ವಾಗಿ ಬಂದು
ನಮ್ಮ ಉಸಿರು ಕಟ್ಟದಂತೆ ಗಾಳಿ ಬೀಸುವ ಮಹಾಮಹಿಮ ಯಾರು?
ಆಹಾರ ಬೇಯಿಸಲೆಂದು ಬೆಂಕಿ (ಅಗ್ನಿ) ನೀಡಿಪನಾರು ?
ಅಗ್ನಿ ,ವಾಯು, ಭೂತಾಯಿ, ವರುಣಗೆ ಜಗದ ಸೇವೆಗೆ
ಆಜ್ಞೆ ಮಾಡಿದ ಪುಣ್ಯಪುರುಷನಾರು?
ಅವನಲ್ಲವೆ…………..
ಮಹಾಮಹಿಮ ಸದ್ಗುರು
ಭಗವಂತ.
ಬಸವರಾಜ ಹಣಮಂತಗೋಳ,
ಶಿಕ್ಷಕ, ಸಾಹಿತಿ
ಗೋಕಾಕ
ಚೆನ್ನ-ಚೆನ್ನಿ
ನಿನ್ನ ಕಂಡ್ಹಾಂಗಿಂದ
ನಾನು ಮರುಳಾ..
ಹ್ಯಾಂಗ ಕಳಿಲ್ಹೇಳ?
ನಾ ಹಗಲಿರುಳಾ…
ನಿದ್ದ್ಯಾಗೂ ಬರೀ
ನಿಂದೇ ಕನಸಾ….
ನೀ ಕೊಡ್ತಿ ಯಾವಾಗ?
ನಿನ್ನ ಮನಸಾ….
ಹುಚ್ಚ ಹಿಡಿಸೇತಿ
ತಲಿಯ ಕೆಡಿಸೇತಿ
ನಿನ್ನಂದ ಚಂದಾ…
ನಮ್ದು ಏಳೇಳು
ಜನುಮದ ಬಂಧಾ…
ಹೂಂ ಅಂದರ
ನೀನು ಬಂದರ
ಆಗತುನು ಲಗ್ನ….
ಊಹುಂ ಅಂದರ
ಕನಸೆಲ್ಲ ಭಗ್ನ….
ನಾನು ನೀನಾಗಿ
ನೀನು ನಾನಾಗಿ
ಸವಿಯೋಣ ಜೇನ…
ಯಾರ ಏನಾದ್ರ
ನನಗ ನಿನಗೇನ?….
ಚಿಂತಿ ಚೂರಿಲ್ಲ
ಸಂತಿ ದೂರಿಲ್ಲ
ಚೆನ್ನ ಚೆನ್ನಿದೇ ಎಲ್ಲ ಬಾಜಾರ…
ಮೂರ ದಿನದಾಗ
ಮೂರು ಗಂಟ್ಹೋಳಗ
ಐತಿ ಕೇಳ ಬಾಳ ಮಜಕುರ….
ಎಮ್ಮಾರ್ಕೆ