ಕವನ

Must Read

ಗಜರಾಜನ ಆಕ್ರಂದನ…

ಓ ಸ್ವಾರ್ಥಿ ಮನುಜಾ…
ಕಾಡು ಕಡಿದೆ,ಬೆಟ್ಟಗುಡ್ಡಗಳ ದೋಚಿದೆ,
ಮನಬಂದಂತೆ ರಸ್ತೆಗಳ ನಿರ್ಮಿಸಿದೆ,
ಕಾನನದೊಳಗೆ ಮೋಜು-ಮಸ್ತಿಗಾಗಿ,
ವಸತಿ ಗೃಹಗಳ ,ಹೋಟೆಲ್ ಗಳ ಕಟ್ಟಿದೆ….

ನನ್ನ ನಾಡಿಗೆ ಕನ್ನ ಹಾಕಿದೆ,
ನಾನು ತಿನ್ನುವುದೆಲ್ಲವ ದೋಚಿದೆ,
ಹಿಂದೊಮ್ಮೆ ಇಂಪು-ತಂಪಾಗಿದ್ದ ನನ್ನ ಕಾಡು
ಮರುಭೂಮಿಯಾಯ್ತು;ಮಸಣ ಸದೃಶವಾಯ್ತು……

ಗಜರಾಜನಾದ ನಾನು ಭಿಕಾರಿಯಾದೆ,
ನಿರಾಶ್ರಿತ ನಾದೆ,ಆಹಾರ-ನೀರು ಅರಸಿ,
ಕಾಡು ಬಿಟ್ಟು ನಾಡಿಗೆ ಬಂದೆ,
ಮನುಜಾ,ತಿನ್ನುವ ಹಣ್ಣಿಗೆ
ಬಾಂಬಿಟ್ಟು ನನ್ನನ್ನೇ ಸಾಯಿಸಿಬಿಟ್ಟೆಯಲ್ಲೋ?
ಬರೀ ಬೆದರಿಸಿದರೆ ಸಾಕಿತ್ತಲ್ಲೋ..
ನಾವು ಓಡುತ್ತಿದ್ದೆವಲ್ಲೋ!!!

ನಿನ್ನ ಪತ್ನಿ, ಪುತ್ರಿ, ಸಹೋದರಿ
ಗರ್ಭಿಣಿ ಯಾದಾಗ ಖುಷಿ ಪಡುತ್ತೀ..,
ಸೀಮಂತ ಮಾಡುತ್ತೀ,ಆರೈಕೆ ಗೆ ಹಾತೊರೆಯುತ್ತೀ,
ನನ್ನ ಕಾಡು ಕಡಿದು, ಆಹಾರ ಕಸಿದು,
ನಾನು ತಿನ್ನುವ ಆಹಾರದಲಿ ಸ್ಫೋಟಕವಿಟ್ಟು,
ತಾಯಿ-ಮಗು ಇಬ್ಬರ ಕಗ್ಗೊಲೆ ಮಾಡಿಬಿಟ್ಟೆಯಲ್ಲೋ???

ಕಾಡು ನಶಿಸದಿದ್ದರೆ,
ಹಸಿರು ಕಣ್ಮರೆಯಾಗದಿದ್ದರೆ,
ವೃಕ್ಷಗಳು ನಳಿ-ನಳಿಸುತ್ತಿದ್ದರೆ,
ನಾನೇಕೋ ನಿಮ್ಮ ನಾಡಿಗೆ ಬರುತಿದ್ದೆ;
ನಾನೇಕೋ ನಿಮ್ಮ ಜಮೀನಿಗೆ ಧಾಳಿ ಇಡುತ್ತಿದ್ದೆ???

ನಿನ್ನ ಪಾಪದ ಫಲಕೆ
ನಾನು -ನನ್ನ ಮಗು ಬಲಿಯದೆವಲ್ಲೋ?
ಓ ಸ್ವಾರ್ಥಿ ಮನುಜಾ..ನಿನ್ನ ರಕ್ಕಸತನಕೆ
ನನ್ನ ಸಾವಿರ-ಸಾವಿರ ಧಿಕ್ಕಾರ,

ಓ ಮನುಜಾ,ಇನ್ನಾದರೂ
ಕಾಡು ಕಡಿವುದು ಬಿಡು,
ಹಸಿರಾಗಿ,ತಂಪಾಗಿ,ಸೊಂಪಾಗಿ
ಕಾನನ ಬೆಳೆಯಲಿ ಬಿಡು,
ನನ್ನಂತ ಮುಗ್ಧ ಪ್ರಾಣಿಗಳು
ನಗುನಗುತ್ತಾ ಕಾನನದಿ
ಸುಖವಾಗಿ ಬಾಳಲಿ ಬಿಡು…

ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group