ಬೀದರ – ಬಸವಕಲ್ಯಾಣ ಉಪ ಚುನಾವಣೆಯ ಬಿಜೆಪಿ ಟಿಕೆಟನ್ನು ಸ್ಥಳೀಯ ನಾಯಕರಿಗೆ ಕೊಡಬಹುದು ಇತ್ತು.ನಾವು ಹದಿನೆಂಟು ಜನರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು.ಇವರಲ್ಲಿ ಒಬ್ಬರಿಗೆ ಮಾತ್ರ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬಹುದಿತ್ತು. ಸ್ಥಳೀಯ ನಾಯಕರನ್ನು ಬಿಟ್ಟು ಹೊರ ಜಿಲ್ಲಾ ಅಭ್ಯರ್ಥಿ ಆಯ್ಕೆ ಮಾಡಿದ್ದು ಯಾಕೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ರಾಜ್ಯ ನಾಯಕರ ವಿರುದ್ಧ ಆಕ್ರೋಶಪೂರಿತ ಪ್ರಶ್ನೆ ಕೇಳಿದರು.
ಬಸವಕಲ್ಯಾಣ ನಲ್ಲಿ ಅಕ್ಕಮಹಾದೇವಿ ಕಾಲೇಜು ಗ್ರೌಂಡ್ ನಲ್ಲಿ ಬಿಜೆಪಿ ಪಕ್ಷದ ವಿರುದ್ಧ ಕಾರ್ಯಕರ್ತರು ಸಮಾವೇಶದಲ್ಲಿ ಮಲ್ಲಿಕಾರ್ಜುನ ಖೂಬಾ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಸವಕಲ್ಯಾಣ ಉಪ ಚುನಾವಣೆ ಉಸ್ತುವಾರಿ ವಹಿಸಿಕೊಂಡ ಸಂಸದ ಭಗವಂತ ಖೂಬಾ ವಿರುದ್ಧ ಬಿಜೆಪಿಯಿಂದ ಶರಣು ಸಲಗಾರ ಗೆ ಟಿಕೆಟ್ ಘೋಷಣೆಯಾಗಿದೆ ಸ್ಥಳೀಯರಿಗೆ ಟಿಕೇಟ ಕೊಡದ ಕಾರಣ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆ ನಡಸಿದ್ದು ..ಬಿಜೆಪಿ ಟಿಕೇಟ ಮಾರಿಕೊಂಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದರು ಮಲ್ಲಿಕಾರ್ಜುನ ಖೊಬಾ.
ಕಾರ್ಯಕರ್ತರು ಒಂದೆಡೆ ಸೇರಿ ಸಾಮೂಹಿಕವಾಗಿ, ‘ನಾವು ದೇಶದ ಅಭಿಮಾನಿ ನಾವು ಮೋದಿ ಅಭಿಮಾನಿ ವಿಶ್ವಗುರು ಬಸವಣ್ಣನ ಮೇಲೆ ಆಣೆ ತಂದೆ ತಾಯಿಯ ಮೇಲೆ ಆಣೆ .ನಾವು ಈ ಸಾರಿ ಬಿಜೆಪಿಗೆ ಮತ ಹಾಕೋದಿಲ್ಲ ನಮಗೆ ಬೇಕಾದ ವ್ಯಕ್ತಿ ಹಾಗು ಬೇರೆ ಪಕ್ಷಕ್ಕೆ ಮತ ಹಾಕುತ್ತೇವೆ ‘ ಎಂದು ವಿಶ್ವಗುರು ಬಸವಣ್ಣನ ಮೇಲೆ ಆಣೆ ಮಾಡಿದರು.
ಇತ್ತಲಿನ ಬೆಳವಣಿಗೆಗಳ ಕಡೆಗೆ ಸ್ವಲ್ಪವೂ ಗಮನ ಕೊಡದಂತೆ ಬಿಜೆಪಿ ನಾಯಕರು ಇದ್ದು ಬೇರೆ ಕಡೆಗೆ ಕಾರ್ಯಕರ್ತರ ಸಮಾವೇಶ ಮಾಡಿ ಅನಂತರ ಪಾದಯಾತ್ರೆಯ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ