- Advertisement -
ಬೀದರ – ಬಸವಕಲ್ಯಾಣ ದ ಉಪಚುನಾವಣೆಯ ಕಾವು ಜೋರಾಗಿದ್ದು ಬಿಜೆಪಿಯ ಅಭ್ಯರ್ಥಿ ಶರಣು ಸಲಗರ ವೇದಿಕೆಯ ಮೇಲೆ ನಿಂತು ಭಾವುಕರಾಗಿದ್ದಾರೆ.
ನಿಮ್ಮ ಸಲುವಾಗಿ ನಾನು ಪ್ರಾಣ ಕೊಡಲು ಸಿದ್ಧನಿದ್ದು ನಾನು ಸತ್ರೂ ಬಸವಕಲ್ಯಾಣದಲ್ಲಿ ಯೇ ಮಣ್ಣು ಮಾಡಬೇಕು ಎಂದು ಅವರು ಕಣ್ಣೀರು ಹಾಕಿದ ಘಟನೆ ನಡೆದಿದೆ.
ನಾನು ಮಜಾ ಮಾಡಲಿಕ್ಕೆ ರಾಜಕೀಯಕ್ಕೆ ಬಂದಿಲ್ಲ. ಸಮಾಜಸೇವೆ ಮಾಡಲು ಬಂದಿದ್ದೇನೆ ಎಂದು ಅವರು ಹೇಳಿದರು.
- Advertisement -
ಇನ್ನೊಂದು ಕಡೆ ಬಿಜೆಪಿ ಬಂಡಾಯ ಅಭ್ಯರ್ಥಿ ಎನಿಸಿಕೊಂಡಿರುವ ಮಲ್ಲಿಕಾರ್ಜುನ ಖೂಬಾ ಅವರು, ತಾವು ಬಸವಕಲ್ಯಾಣದ ಮಣ್ಣಿನ ಮಗ ಎಂಬ ಹೆಸರಿನಿಂದ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಪರವಾಗಿ ಬಂಡೆಪ್ಪ ಖಾಶೆಂಪೂರ, ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ