ಶರಣರ ಕುರಿತು ಚಿಂತನ ಮಂಥನ ಕಾರ್ಯಕ್ರಮ

Must Read

ಶರಣರು ಮೆಟ್ಟಿದ ನೆಲ ಅದೇ ಅನುಭವ ಮಂಟಪ

ಶರಣರು ಆಡಿದ ಮಾತುಗಳವೇ ನುಡಿಮುತ್ತುಗಳು 

ಶರಣರ ಚಿಂತನೆಗಳೇ ಆಧ್ಯಾತ್ಮಿಕ ಅನುಭವಗಳು 

ಶರಣರ ಒಡನಾಟವೇ ಮನಕಾನಂದವು…..

ದಿನಾಂಕ 31.12. 2023 ರ ರವಿವಾರದಂದು ಪ್ರತಿ ವಾರದಂತೆ ಲಿಂಗಾಯತ ಸಂಘಟನೆಯಿಂದ ಹಳಕಟ್ಟಿ ಭವನದಲ್ಲಿ ಬಸವಾದಿ ಶರಣರ ಕುರಿತು ಚಿಂತನ ಮಂಥನ ಕಾರ್ಯಕ್ರಮ ಜರುಗಿತು.    

ಶರಣೆ ಮಹಾದೇವಿ ಅರಳಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶರಣೆ ಜಯಕ್ಕ , ಮೀನಾಕ್ಷಿ ನಾಡಗೌಡ, ಶ್ವೇತಾ ಮುಂಗರವಾಡಿ, ಬಿ ಪಿ ಜೇವನಿ ದೊಡ್ಡಬಂಗಿ ಸರ್ ಇವರುಗಳ ವಚನ ಗಾಯನದಿಂದ ಪ್ರಾರಂಭವಾಗಿ,ಮುಖ್ಯ ಅತಿಥಿಯಾಗಿ ಶರಣೆ ಮಂಗಲಾ ಕಾಗತಿಕರ,ಉಪನ್ಯಾಸಕರಾಗಿ ಡಾ.ದಾನಮ್ಮ ಜಗದೀಶ ಚಿನಿವಾರ ಇವರು ಹಿಮೋಗ್ಲೋಬಿನ್ ಎಂಬ ವಿಷಯವಾಗಿ ಮಾನವನಿಗೆ ಅತ್ಯಗತ್ಯವಾದಂತಹ ಈ ರಕ್ತದೊತ್ತಡ ಮತ್ತು ರಕ್ತದ ಪರಿಚಲನೆ, ರಕ್ತದ ಒತ್ತಡ, ರಕ್ತಹೀನತೆಯಿಂದ ಆಗುವ ಅಪಾಯಗಳು ಬಿಟರೂಟ್ ಮತ್ತು ಕಿವಿ ಹಣ್ಣುಗಳನ್ನು ತಿನ್ನುವುದರಿಂದ ರಕ್ತಹೀನತೆ ನೀಗುತ್ತದೆ ಎಂದು ಹೇಳುತ್ತಾ ಲಿಂಗಾಯತ ಸಂಘಟನೆಗೆ ಪ್ರಾರ್ಥನೆಗೆ ಬಂದವರಲಿ ಸುಮಾರು 68 ಜನರಿಗೆ ರಕ್ತ ತಪಾಸಣೆ ಮಾಡಿದರು ಆರೋಗ್ಯದ ಕುರಿತು ಸಾಮಾನ್ಯರಿಗೂ ತಿಳಿಯುವಂತೆ ಅತ್ಯಂತ ಉತ್ತಮವಾದ ವೈಜ್ಞಾನಿಕ ಉಪನ್ಯಾಸವನ್ನು ಮಂಡಿಸಿದರು. ಮತ್ತು ಸಂಗಮೇಶ ಅರಳಿ ಶರಣರು ಕಾರ್ಯಕ್ರಮ ನಿರೂಪಣೆ ಮಾಡಿದರ.

ಮಹಾಂತೇಶ ಮೆಣಸಿನಕಾಯಿಯವರು ಅತಿಥಿಗಳ ಪರಿಚಯ ಮಾಡಿಕೊಟ್ಟರು ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ  ಮಾತನಾಡಿದರು.ಶರಣ  ದೇವರಮನಿ, ವಿ ಕೆ ಪಾಟೀಲ ಇವರುಗಳು ಕಾರ್ಯಕ್ರಮ ಕುರಿತು ಮಾತನಾಡಿದರು.

ವಚನ ಪ್ರಾರ್ಥನೆಯೊಂದಿಗೆ ವಚನ ಚಿಂತನ ಮಂಥನ ಇಂದಿನ ಸಮಾಜಕ್ಕೆ ಬೇಕಾದ ಶಾಂತಿ ಸಮಾಧಾನದ ಮಹತ್ವ ಈ ವಾರದ ಪ್ರಾರ್ಥನೆಯ ಉದ್ದೇಶ. 12ನೇ ಶತಮಾನದ ಬಸವೇಶ್ವರನ ಸಮಾಜ ಸುಧಾರಣಾ ವಿಚಾರಗಳ ಚಿಂತನ ಮಾಡುವುದು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group