ಕುರಿ ಕಳೆದುಕೊಂಡವರಿಗೆ ಧನಸಹಾಯ ನೀಡಿದ ಮನಗೂಳಿ

0
571

ಸಿಂದಗಿ: ಇತ್ತೀಚೆಗೆ ಗೋಲಗೇರಿ ಗ್ರಾಮದಲ್ಲಿ ಬಸಪ್ಪ ಯಲ್ಲಪ್ಪ ಪೂಜಾರಿ ರವರ 48 ಕುರಿಗಳು ಸಾವನಪ್ಪಿದ ಘಟನೆ ನಡೆದಿದ್ದು. ಘಟನಾ ಸ್ಥಳಕ್ಕೆ ಸಿಂದಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಯವರು ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕವಾಗಿ 25 ಸಾವಿರ ರೂಗಳನ್ನು ನೀಡಿ ಅವರ ಕುಟುಂಬಕ್ಕೆ ದೈರ್ಯ ತುಂಬಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಣ್ಣ ಸಾಲಿ ರವರ ಪರವಾಗಿ ಅವರ ಸುಪುತ್ರ ಸಂತೋಷ ಸಾಲಿ ರವರು 25000 ರೂ ನೀಡಿದರು.

ಸ್ಥಳೀಯ ಮುಖಂಡರಾದ ರವಿ ಸಾಹುಕಾರ ದೇವರಮನಿ, ಬಸವರಾಜ ಮಾರಲಭಾವಿ, ಬಾಬುಗೌಡ ಸರ್ ಸಸಾಬಾಳ, ಶಿವು ಹತ್ತಿ, ಮಹಬೂರಿ ಹಳಿಮನಿ, ಪ್ರಕಾಶ ಬಿರಾದಾರ, ಕುಮಾರ್ ಗೋಂದಳಿ, ಶಿವಯೋಗಿ ಹತ್ತರಕಿ, ಮಡು ನಾಯ್ಕೊಡಿ, ನಿಂಗನಗೌಡ ಬಿರಾದಾರ್ ಡವಳಾರ, ಶರಣಗೌಡ ಡಂಬಳ, ವಿಶ್ವನಾಥ ಮಠ, ರಾಜು ಹತ್ತರಕಿ, ಪ್ರಭು ವಂದಾಲ, ಶ್ರೀಶೈಲ ಜಾಲವಾದಿ, ರೇವಣಪ್ಪ ಪೂಜಾರಿ, ಅಭು ಶಾಬಾದಿ ಹಾಗೂ ಕಾರ್ಯಕರ್ತರು ಇತರರು ಇದ್ದರು.