ಸಿಂದಗಿ: ಜಿಲ್ಲೆಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಪ್ರಯಕ್ತ ಏ.2 ಮತ್ತು 3 ರಂದು ಸಿಂದಗಿ ಮತಕ್ಷೇತ್ರದ ಏ. 2 ರಂದು ಬೆಳಿಗ್ಗೆ 10 ಗಂಟೆಗೆ ಕನ್ನೋಳ್ಳಿ, ಮಧ್ಯಾಹ್ನ 1 ಗಂಟೆಗೆ ಯಂಕಂಚಿ, 4 ಗಂಟೆಗೆ ಮೋರಟಗಿ, ಸಾಯಂಕಾಲ 6 ಗಂಟೆಗೆ ದೇವಣಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಅಲ್ಲದೆ ಏ. 3 ರಂದು ಮಧ್ಯಾಹ್ನ 1 ಗಂಟೆಗೆ ತಾಂಬಾ, ಮಧ್ಯಾಹ್ನ 4 ಗಂಟೆಗೆ ಚಾಂದಕವಠೆ ಜಿಲ್ಲಾ ಪಂಚಾಯತಗಳ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ ಕಾರಣ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಕರೆ ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಲೋಕಸಭಾ ಚುನಾವಣೆಯ ಗಾಳಿ ಪ್ರಾರಂಭವಾಗಿದ್ದು ಬೇರೆ ಪಕ್ಷದಲ್ಲಿ ಟಿಕೇಟ ಹಂಚಿಕೆಯಲ್ಲಿ ಕಚ್ಚಾಟ ನಡೆದಿದ್ದರೆ ವಿಜಯಪುರ ಜಿಲ್ಲೆಯ ಸಚಿವರ ಹಾಗೂ ಸರ್ವ ಶಾಸಕರ ಒಮ್ಮತದ ಅಭ್ಯರ್ಥೀಯಾಗಿ ಸರ್ವಾನುಮತದಿಂದ ಟಿಕೇಟ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹುರುಪು ಹುಮ್ಮನಸ್ಸಿನಿಂದ ಚುನಾವಣೆಗೆ ಸನ್ನದ್ಧರಾಗಿದ್ದಾರೆ ಏಕೆಂದರೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳ ಭಾಗ್ಯಗಳನ್ನು ಪಡೆಯುತ್ತಿರುವ ಫಲಾನುಭವಿಗಳು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ಚಲಾಯಿಸಲಿದ್ದಾರೆ ಎನ್ನುವ ಭರವಸೆ ನಮ್ಮಲ್ಲಿದೆ. ಕಳೆದ 2 ಅವಧಿಗಳಲ್ಲಿ ಜಿಲ್ಲೆಯಲ್ಲಿ ಅಧಿಕಾರ ನಡೆಸಿದ ಸಂಸದರು ಯಾವುದೇ ಅಭಿವೃದ್ದಿ ಕೆಲಸಗಳು ಮಾಡಿಲ್ಲ ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದ್ದು. ಇದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೋ. ರಾಜು ಆಲಗೂರ ಅವರು ಅತ್ಯಧಿಕ ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತಾರೆ ಎಂದು ಅಭಿಮತ ವ್ಯಕ್ತಪಡಿಸಿದರು.
ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಗೆಲವು ಸುಲಭವಾಗಿದ್ದರು ಕೂಡಾ ಜಿಲ್ಲೆಯ ಸಚಿವರ ಹಾಗೂ ಶಾಸಕರು, ಕಾರ್ಯಕರ್ತರ ಬಾಂಧವ್ಯ ಜಟಿಲಗೊಳಿಸಲು ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದ್ದು ಭೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಸರಕಾರದ 5 ಗ್ಯಾರೆಂಟಿಗಳ ಬಗ್ಗೆ ಮನವರಿಕೆ ಮಾಡಲಿದ್ದಾರೆ ಕಾರಣ ಕಾರ್ಯಕರ್ತರು ವಿದಾನ ಸಭೆ ಚುನಾವಣೆಯ ಶ್ರಮದಂತೆ ಈ ಚುನಾವಣೆಯಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಅರವಿಂದ ಹಂಗರಗಿ, ಮಹ್ಮದಪಟೇಲ ಬಿರಾದಾರ, ಪ್ರವೀಣ ಕಂಠಿಗೊಂಡ, ಕೆಡಿಪಿ ಸದಸ್ಯ ನಿಂಗಣ್ಣ ಬುಳ್ಳಾ ಸೇರಿದಂತೆ ಅನೇಕರಿದ್ದರು.