ಆಕಳ ಕರುವಿಗೆ ನಾಮಕರಣ ಮಾಡಿದ ಗೋ ಪ್ರೇಮಿ ಇಡೀ ರಾಜ್ಯದಲ್ಲಿ ಸಂತಸದ ಸುದ್ದಿ

Must Read

ಬೀದರ – ಮನೆಯಲ್ಲಿ ಮಗು ಹುಟ್ಟಿದರೆ ಸಂಭ್ರಮದಿಂದ ನಾಮಕರಣ ಮಾಡುತ್ತಾರೆ ಮತ್ತು ಮನೆಯಲ್ಲಿ ಹಬ್ಬದ ವಾತಾವರಣ ಇರುವುದು ಸಹಜ. ಆದರೆ, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಗೋ ಪ್ರೇಮಿಯೊಬ್ಬ ತಮ್ಮ ಮನೆಯಲ್ಲಿ ಕರುವಿಗೆ ಮಗುವಿನಂತೆ ತೊಟ್ಟಿಲು ಇಟ್ಟು ನಾಮಕರಣ ಮಾಡಿದರು.

ನಂತರ ಊರ ಜನರಿಗೆ ಊಟದ ವ್ಯವಸ್ಥೆ ಮಾಡಿದ ಗೋ ಪ್ರೇಮಿ ಸಚಿನ್ ಮೇಳಕುಂದೆ:

ಕರುವಿಗೆ ಹೊಸ ಬಟ್ಟೆಗಳನ್ನು ತೊಡಿಸಿ, ಕಾಲಿನಲ್ಲಿ ಬೆಳ್ಳಿಯ ಕಡಗಗಳನ್ನು ಹಾಕುವ ಮೂಲಕ ಮುದ್ದಾದ ಮಗುವಿನಂತೆ ಕರುವನ್ನು ಸಿಂಗಾರಗೊಳಿಸಿ ನಾಮಕರಣ ಮಾಡುವ ಮೂಲಕ ಗೋ ಪ್ರೇಮ ಮೆರೆದಿದ್ದಾರೆ.

ಮನೆಯಲ್ಲಿ ಹೋಮ-ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ. ಇದಷ್ಟೇ ಅಲ್ಲದೆ, ನಾಮಕರಣಕ್ಕೆ ಬಂದ ಜನರಿಗೆ ರುಚಿ ರುಚಿಯಾದ ಊಟದ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾತಂಬ್ರಾ ಗ್ರಾಮದ ಸಚಿನ‌ ಮೇಳಕುಂದೆ ಅವರ ಗೋಪ್ರೇಮಕ್ಕೆ ಎಲ್ಲರೂ ಮನಸೋತಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group