spot_img
spot_img

ಆರೋಗ್ಯವಾಗಿರಲು ವೈದ್ಯರ ಸಲಹೆ ಅವಶ್ಯಕ

Must Read

- Advertisement -

ಮೂಡಲಗಿ: ಪ್ರತಿಯೊಬ್ಬರಿಗೂ ಮೂಲಭೂತವಾಗಿ ಶಿಕ್ಷಣ, ಆಹಾರ ಹಾಗೂ ಆರೋಗ್ಯದ ಕಾಳಜಿ ಅತ್ಯವಶ್ಯಕವಾಗಿದೆ. ಸದೃಢವಾದ ಶರೀರ ಹೊಂದಲು ವೈದ್ಯರುಗಳ ಸಲಹೆ ಸೂಚನೆಗಳು ಅವಶ್ಯಕ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ಎಸ್.ಎಸ್ ಪಾಟೀಲ ಹೇಳಿದರು.

ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಸಭೆ ಮತ್ತು ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ವಿನೂತನ ರೋಗ ರುಜಿನಗಳು ಉಂಟಾಗುತ್ತಿದ್ದು, ಕೆಲವೊಂದು ಕಾಯಲೆಗಳು ವೈದ್ಯ ರಂಗಕ್ಕೆ ಸವಾಲೆಸೆಯುವಂಥವುಗಳಾಗಿವೆ. ಸ್ಥಳೀಯವಾಗಿ ಉಲ್ಬಣಿಸುವಂತಹ ಸಾಂಕ್ರಾಮಿಕ ರೋಗಗಳನ್ನು ಮುಂಜಾಗೃತಾ ಕ್ರಮವಾಗಿ ಹತೋಟಿಗೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಸರಕಾರ ಒದಗಿಸುವ ಆರೋಗ್ಯ ಪರ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಆರ್ಥಿಕ ಹೊರೆ ಕಡಿಮೆಗೊಳಿಸುವದರ ಜೊತೆಗೆ ಉತ್ತಮ ದೇಹಾರೋಗ್ಯ ಹೊಂದಲು ಸಹಾಯ ಮಾಡಬೇಕೆಂದರು.

ಮೂಡಲಗಿ ಪಿಎಸ್‍ಐ ಎಚ್ ವೈ ಬಾಲದಂಡಿ, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಚಿದಾನಂದ ಮುಗಳಖೋಡ ಮಾತನಾಡಿ, ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವದು. ಪುರಸಭೆಯಿಂದ ಕಸ ವಿಲೇವಾರಿ ಮತ್ತು ಸ್ವಚ್ಛತೆಗಾಗಿ ಸಿಬ್ಬಂದಿಯ ಸಯೋಗದೊಂದಿಗೆ ಸಹಕಾರ ನೀಡುವುದಾಗಿ ಹೇಳಿದರು.

- Advertisement -

ಸಭೆಯಲ್ಲಿ ಆರೋಗ್ಯ ರಕ್ಷಾ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಡಾ. ಎಸ್ ಎಸ್ ಪಾಟೀಲ, ರವಿ ಸೋನವಾಲಕರ, ಈಶ್ವರ ಕಂಕಣವಾಡಿ, ಮಲ್ಲು ಯಾದವಾಡ ಇವರುಗಳನ್ನು ಸತ್ಕರಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕ ಪಂಚಾಯತ ಇಒ ಎಫ್ ಜಿ ಚಿನ್ನನವರ ವಹಿಸಿದ್ದರು. ಡಾ. ಭಾರತಿ ಕೋಣಿ, ಬಿಇಒ ಕಛೇರಿಯ ಆರ್ ವಿ ಯರಗಟ್ಟಿ, ಡಾ. ದೀಪಾ ಮಾಚಪ್ಪನವರ ಶಿವಲಿಂಗ ಪಾಟೀಲ,  ಸದಸ್ಯ ಕಾರ್ಯದರ್ಶಿ ಹಾಗೂ ಆಡಳಿತ ವಿದ್ಯಾಧಿಕಾರಿಗಳು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group