spot_img
spot_img

ಶಾಲಾ ಪ್ರಾರಂಭೋತ್ಸವಕ್ಕೆ ಅದ್ದೂರಿ ಚಾಲನೆ

Must Read

- Advertisement -

ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಕಣಬರ್ಗಿ ಶಾಲೆಯಲ್ಲಿ ಸನ್ 2023 – 24ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಬೆಳಗಾವಿ ಉತ್ತರ ಮತಕ್ಷೇತ್ರದ ನೂತನ ಶಾಸಕ ಆಸೀಫ್ ಸೇಠ್ ರವರಿಂದ ನೆರವೇರಿಸಲಾಯಿತು.

ಶಾಸಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಶಾಲಾ ಬ್ಯಾಗ್ ವಿತರಿಸಿ ಪ್ರಸಕ್ತ ಸಾಲಿನಲ್ಲಿ ಚೆನ್ನಾಗಿ ಓದಿ ಒಳ್ಳೆಯ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಶಾಲೆಯ ಬೇಕು ಬೇಡಿಕೆಗಳ ಕುರಿತು ಮನವಿಯನ್ನು ಆಲಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾ ರವಿ ಭಜಂತ್ರಿ, ಪ್ರಸಕ್ತ ಸಾಲಿನ ಸಮಗ್ರ ಶೈಕ್ಷಣಿಕ ಚಟುವಟಿಕೆಗಳ ಪೂರ್ವ ಸಿದ್ಧತೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

- Advertisement -

ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ ಬೆಳಗಾವಿ ಇವರು ಶಾಲೆಯ 625 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಿದರು.

ಪ್ರಧಾನ ಗುರುಗಳಾದ ಡಿ ಎಸ್ ಪೂಜಾರ್  ಅವರು ಶಾಲೆಗೆ ಸುಮಾರು 25 ಸಾವಿರ ರೂಪಾಯಿ ವೆಚ್ಚದಲ್ಲಿ ಫೋಟೋಗಳನ್ನು ಸ್ಮರಣ ಕಾಣಿಕೆಯಾಗಿ ನೀಡಿದರು.

ಇಂದು ಸೇವಾ ನಿವೃತ್ತಿ ಹೊಂದಿದ ಶಾಲೆಯ ಪ್ರಧಾನ ಗುರುಗಳು ಡಿ ಎಸ್ ಪೂಜಾರ ಅವರನ್ನು ಶಾಸಕರು, ಕ್ಷೇತ್ರಶಿಕ್ಷಣಾಧಿಕಾರಿಗಳು, ನಗರ ಸೇವಕರು, ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ ಬೆಳಗಾವಿಯ ಅಧಿಕಾರಿಗಳು, ಎಸ್ ಡಿ ಎಮ್ ಸಿ ಪದಾಧಿಕಾರಿಗಳು ಸನ್ಮಾನಿಸಿದರು.

- Advertisement -

ಈ ಸಂದರ್ಭದಲ್ಲಿ ಸ್ಥಳೀಯ ನಗರಸೇವಕರು ಶ್ರೀಮತಿ ಅಸ್ಮಿತಾ ಭೈರಗೌಡ ಪಾಟೀಲ ಕಣಬರ್ಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ರೇಖಾ ನಾಯಕ್, ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ಸಲೀಂ ನದಾಫ್ ,ಬಿ ಆರ್ ಪಿ  ರಿಜ್ವಾನ್ ನಾವಗೇಕರ್,ಸಿ ಆರ್ ಪಿ ವಿ ಎಸ್ ಲೋಕುರ, ಎಲ್ಲ ಶಾಲೆಗಳ ಶಿಕ್ಷಕರು ಪಾಲಕ ಪೋಷಕರು ಬಹಳಷ್ಟು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಿದ ಕುರಿತು ನೂತನ ಶಾಸಕರು ಹರ್ಷ ಸಂತಸ ವ್ಯಕ್ತಪಡಿಸಿದರು

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group