ಸತ್ಯ ಶುದ್ಧ ಕಾಯಕ ಮಾಡುವ ವ್ಯಕ್ತಿ ಮಾತ್ರ ನಿಜವಾದ ದೇವರು: ಗುರು ಮಹಾಂತ ಶ್ರೀ

Must Read

ಹುನಗುಂದ: ಬಸವಾದಿ ಶರಣರು ಜಗತ್ತಿಗೆ ಕೊಟ್ಟ ವಚನ ಸಾಹಿತ್ಯವು ಕಾಯಕದ ಮಹಿಮೆಯು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಸತ್ಯ ಶುದ್ಧ ಕಾಯಕಮಾಡಿದ ವ್ಯಕ್ತಿ ಮಾತ್ರ ನಿಜವಾದ ದೇವರು ಎಂದು ಬಸವಾದಿ ಶರಣರು
ತಮ್ಮ ವಚನಗಳ ಮೂಲಕ ಅರಿವು ಮೂಡಿಸಿದ್ದಾರೆ ಎಂದು ಚಿತ್ತರಗಿ ಇಲಕಲ್ ಸಂಸ್ಥಾನಮಠದ ಗುರು ಮಹಾಂತ
ಸ್ವಾಮಿಗಳು ಹೇಳಿದರು.

ಇತ್ತೀಚೆಗೆ ಹುನಗುಂದ ನಗರದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ತಾಲೂಕಾ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಇವುಗಳ ಸಹಯೋಗದಲ್ಲಿ ಶರಣಿ ಡಾ.ಶಿವಗಂಗಾ ಶರಣ ಅರಣೋದಯ ದುದ್ದಗಿ ಅವರ ಮನೆಯಲ್ಲಿ ನಡೆದ 37 ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಇಂದು ಸಮಾಜದಲ್ಲಿ ಕಸಿದುಕೊಂಡು ಉಣ್ಣುವವರು ಹಾಗೂ ಪರರಿಂದ ಇಸಿದುಕೊಂಡು ಉಣ್ಣುವವರಿದ್ದಾರೆ. ಇವರೀರ್ವರಿಗಿಂತ ಯಾರು ಶ್ರಮದಿಂದ, ಸತ್ಯ ಶುದ್ಧ ಕಾಯಕ ಮಾಡಿ ಬಂದ ಹಣದಿಂದ ದಾಸೋಹ ಮಾಡುವ ವ್ಯಕ್ತಿ ಮಾತ್ರ ನಿಜವಾದ ದೇವರಾಗಿ
ಕಾಣುತ್ತಾನೆ ಎಂದರು.

ಸಭೆಯಲ್ಲಿ ಅನುಭಾವ ನುಡಿಗಳನ್ನಾಡಿದ ಪ್ರೊ. ಎಂ.ಡಿ.
ಚಿತ್ತರಗಿ ಬಸವಾದಿ ಶರಣರ ವಚನಗಳಲ್ಲಿ ಕಾಯಕ ನಿಷ್ಠೆ ವಿಷಯ ಕುರಿತು ಮಾತನಾಡಿ ಶರಣರ ವಚನಗಳಲ್ಲಿ ಎಲ್ಲ ಮಾನವರೂ ತಮ್ಮ ಕಾಯಕ ಯಾವುದಾದರೂ ಆಗಿರಲಿ
ಕಾಯಕದಲ್ಲಿ ನಿರತರಾದರೆ ಗುರು ದರ್ಶನ, ಲಿಂಗಪೂಜೆ,ಜಂಗಮ ದರ್ಶನ ಮರೆತು ಕಾಯಕವನ್ನು
ಏಕಾಗ್ರತೆಯಿಂದ ಮಾಡುವ ಮೂಲಕ ಅದೇ ಲಿಂಗ ಪೂಜೆ
ಎಂದು ಬಸವಾದಿ ಶರಣರು ವಚನ ಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಎಸ್.ಎನ್.ಹಾದಿಮನಿ
ವಹಿಸಿ ಮಾತನಾಡಿ ಬಸವಾದಿ ಶರಣರ ವಚನಗಳಲ್ಲಿ ಕೆಲಸ ಹಾಗೂ ಕಾಯಕಗಳಲ್ಲಿ ಭಿನ್ನತೆ ಇದೆ ದಿನಪ್ರಂತಿ ನಾವು ದುಡಿದು ಗಳಿಸಿದ ಹಣವನ್ನು ನಮಗಾಗಿ ಉಪಯೋಗ ಮಾಡುವದು ಕೆಲಸವಾದರೆ ಅದೇ ಹಣದಲ್ಲಿ ತನಗಾಗಿ ಉಪಯೋಗದೊಂದಿಗೆ ಅದರಲ್ಲಿ ಪರರಿಗಾಗಿ ದಾಸೋಹ ಸೇವೆ ಮಾಡಿದಾಗ ಅದು ಕಾಯಕ ವಾಗುತ್ತದೆ ಎಂದರು.

ಸಭೆಯಲ್ಲಿ ಡಾ.ಬಸವಲಿಂಗ ಸ್ವಾಮಿಗಳು, ಶ್ರೀ ಮಹಾಂತಯ್ಯ ಗಚ್ಚಿನಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಕ್ತಿ ಸೇವೆ ಮಾಡಿದ ಅರಣೋದಯ ದುದ್ದಗಿ ಶರಣ ದಂಪತಿಗಳನ್ನು ಪೂಜ್ಯರು ಗೌರವಿಸಿದರು.ಸಭೆಯ ಪ್ರಾರಂಭದಲ್ಲಿ ಕುಮಾರಿ ವಸ್ತ್ರದ ಅವರಿಂದ ವಚನ ಪ್ರಾರ್ಥನೆ
ನಡೆಯಿತು. ತಾಲೂಕಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭು ಮಾಲಗಿತ್ತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಕೊನೆಗೆ ಡಾ.ಶಿವಗಂಗಾ ದುದ್ದಗಿ ಶರಣು ಸಮರ್ಪಣೆ ಮಾಡಿದರು. ಕಾರ್ಯಕ್ರಮದ
ನಿರೂಪಣೆಯನ್ನು ಶಿಕ್ಷಕಿ ಗೀತಾ ತಾರಿವಾಳ ಮಾಡಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group