ಪ್ರೇಮ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

0
462

ಕಲೆ -ಸಾಹಿತ್ಯ -ಸಾಂಸ್ಕೃತಿಕ ವೇದಿಕೆ ‘ಸಮ್ಮಿಲನ’ ವತಿಯಿಂದ 252ನೇ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 13, ಭಾನುವಾರ ದಂದು ನಗರದ ಶೇಷಾದ್ರಿಪುರ ಅಂಚೆ ಕಚೇರಿ ಪಕ್ಕದ ಕೆನ್ ಕಲಾ ಶಾಲೆಯಲ್ಲಿ ಬೆಳಿಗ್ಗೆ 11.00 ಗಂಟೆಗೆ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿರಿಯ ಪತ್ರಕರ್ತ ರು.ಬಸಪ್ಪ ರವರು ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ‘ಶಾರದಾ ಸುಪುತ್ರ ಪ್ರಶಸ್ತಿ’ ಹಾಗು ಕಲಾವಿದ ಕೆ.ಜಿ.ಸಂಪತ್ಕುಮಾರ್ ರವರಿಗೆ ‘ಗಾಯಕ ಎಸ್.ಯಲ್ಲಪ್ಪ ಸ್ಮಾರಕ ಪ್ರಶಸ್ತಿ’ ನೀಡಿ ಗೌರವಿಸುವರು. ಬೆಂ.ನ.ಕಸಾಪ ನಿಕಟಪೂರ್ವ ಗೌ.ಕಾರ್ಯದರ್ಶಿ ಬಿ.ಶೃಂಗೇಶ್ವರ್ ಅಧ್ಯಕ್ಷತೆ ವಹಿಸುವರು ಹಾಗು ಕವಿಗೋಷ್ಠಿ ಹಾಗೂ ಗಾಯನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರಾದ ಕನ್ನಡ ಪುಸ್ತಕ ಪರಿಚಾರಕ ಕುವರ ಯಲ್ಲಪ್ಪ ತಿಳಿಸಿದ್ದಾರೆ. ವಿವರಗಳಿಗೆ : 9972652804