ಕಲ್ಲೋಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Must Read

ಮೂಡಲಗಿ – ಇದೇ ದಿ. ೧೪ ರಂದು ಕಲ್ಲೋಳಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ -Intervention neuro radiology  ಅಡಿಯಲ್ಲಿ ಕೆಲವೇ ಗಂಟೆಗಳಲ್ಲಿ ಲಕ್ವವನ್ನು ಗುಣಪಡಿಸುವ ಚಿಕಿತ್ಸೆಯನ್ನು  ಪರಿಚಯ ಮಾಡಿಕೊಡಲಾಗುವುದು ಎಂದು ಡಾ. ಅಲ್ಲಮಪ್ರಭು ಕುಡಚಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೆಎಲ್ಈ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ೭೫ ನೇ ಹುಟ್ಟು ಹಬ್ಬದ ನಿಮಿತ್ತ ಕೆಎಲ್ಈ ವಿಶ್ವವಿದ್ಯಾಲಯ, ಜವಾಹರಲಾಲ ನೆಹರೂ ವೈದ್ಯಕೀಯ ಮಹಾವಿದ್ಯಾಲಯ, ಹಾಗೂ ಡಾ. ಪ್ರಭಾಕರ ಕೋರೆ ಸಂಶೋಧನಾ ಕೇಂದ್ರ, ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಪ್ರಿಯದರ್ಶಿನಿ ಪತ್ತಿನ ಸಂಘ ಕಲ್ಲೋಳಿ ಇವರ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿ. ೧೪ ರಂದು ಕಲ್ಲೋಳಿಯಲ್ಲಿ  ಹಮ್ಮಿಕೊಳ್ಳಲಾಗಿದ್ದು  ಅಂಗಾಂಗ ಕಸಿ ಸೌಲಭ್ಯ ಇದೆ. ಎಲ್ಲವೂ ಉಚಿತ ಇರುತ್ತದೆ.

ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಪತ್ರ ನೀಡಲಾಗುವುದು. ಇಲ್ಲಿ ಎಲ್ಲಾ ವೈದ್ಯಕೀಯ ಕಾರ್ಡ್ ಗಳ ಅನುಕೂಲ ಇದೆ. ಎಲ್ಲರೂ ಶಿಬಿರದ ಉಪಯೋಗ ತೆಗೆದುಕೊಳ್ಳಬೇಕು ಎಂದರು.

ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ರಮೇಶ ಈ ಬೆಳಕೂಡ ಮಾತನಾಡಿ, ನಮ್ಮ ಸಂಸ್ಥೆಯಿಂದ ಇದು ಮೂರನೇ ವರ್ಷದ ಶಿಬಿರ. ಸುಮಾರು ೧೫೦ ಜನ ವೈದ್ಯರು ಬರುತ್ತಾರೆ.

೫ ಸಾವಿರ ಜನ ಸೇರುತ್ತಾರೆ ಅದರಲ್ಲಿ ಅಂದಾಜು ೪೫೦೦ ಜನ ರೋಗಿಗಳಿಗೆ ನಾವು ಔಷಧ ಕೊಡುತ್ತೇವೆ. ಶಿಬಿರದಲ್ಲಿ ಅಲೋಪಥಿ, ಆಯುರ್ವೇದಿಕ ಹಾಗೂ ಹೋಮಿಯೋಪಥಿ ಸೇರಿದಂತೆ ಎಲ್ಲ ಪದ್ಧತಿಗಳನ್ನೂ ಅಳವಡಿಸಿಕೊಳ್ಳಲಾಗುವುದು.

ಈ ಹಿಂದೆ ೫೦೦ ಕ್ಕೂ ಹೆಚ್ಚು ಆಪರೇಶನ್ ಮಾಡಿದ್ದೇವೆ ಈ ವರ್ಷವೂ ಹೆಚ್ಚಿನ ನಿರೀಕ್ಷೆಯಿದೆ ಎಂದು ಹೇಳಿ, ನಮ್ಮ ಸಂಸ್ಥೆಯ ಈ ಕಾರ್ಯ ನೋಡಿದ ವಿಧಾನ ಪರಿಷತ್ ಸದಸ್ಯ ಪ್ರಭಾಕರ ಕೋರೆಯವರು ಕಲ್ಲೋಳಿಯನ್ನು ದತ್ತು ತೆಗೆದುಕೊಂಡು ಸಕಲ ವೈದ್ಯಕೀಯ ಸೌಲಭ್ಯ ನೀಡುವುದಾಗಿ ಹೇಳಿದ್ದಾರೆ ಎಂದರು.

ದಿ. ೧೪ ರಂದು ಕಲ್ಲೋಳಿಯಲ್ಲಿ ನಡೆಯಲಿರುವ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನರ ಸಂಬಂಧಿ, ಹೃದಯ ಸಂಬಂಧಿ, ಮೂತ್ರ ರೋಗಗಳು, ಸರ್ಜಿಕಲ್ ಆನ್ ಕೊಲಾಜಿ, ಎಲುಬು ಕೀಲುಗಳು, ಶಸ್ತ್ರ ಚಿಕಿತ್ಸೆ, ವೈದ್ಯಕೀಯ, ರಕ್ತ ತಪಾಸಣೆ, ಸ್ತ್ರೀ ರೋಗಗಳು, ಚಿಕ್ಕ ಮಕ್ಕಳ ತಪಾಸಣೆ, ಕಣ್ಣಿನ ತಪಾಸಣೆ, ಕಿವಿ ಮೂಗು ಗಂಟಲು ತಪಾಸಣೆ, ದಂತ ಚಿಕಿತ್ಸೆ, ಭೌತ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆಗಳಲ್ಲದೆ ಉಚಿತವಾಗಿ ಹೃದಯ ಪರೀಕ್ಷೆ, ಈಸಿಜಿ, ಉಚಿತ ಔಷಧ ವಿತರಣೆ ಮಾಡಲಾಗುವುದು.

ಜೊತೆಗೆ ಅಂಗಾಂಗ ಕಸಿ ಯೋಜನೆಗಳ ಸೌಲಭ್ಯ,  ಕಸಿ ಚಿಕಿತ್ಸೆ ಕುರಿತು ಸಲಹೆ ನೀಡಲಾಗುವುದು ಉಳಿದಂತೆ ಎಲ್ಲವೂ ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಬಿಪಿಎಲ್ ಕಾರ್ಡುದಾರರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಹಳದಿ ಮತ್ತು ಕೇಸರಿ ಕಾರ್ಡುದಾರರಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಆರೋಗ್ಯ ಯೋಜನೆ, KSRTC/HESCOM, ಶಿಕ್ಷಕರು, ಕದಾಯ ಇಲಾಖೆಯ ನೌಕರರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಯೋಜನೆ, Star, Bajaj, Reliance ಹೆಲ್ತ್ ಕೇರ್ ಗಳ ಆರೋಗ್ಯ ಭಾಗ್ಯ ಯೋಜನೆ ಹಾಗೂ ಯಶಸ್ವಿನಿ ಯೋಜನೆಗಳ ಲಾಭಗಳೂ ಈ ಶಿಬಿರದಿಂದ ಸಿಗಲಿವೆ ಎಂದು ಸಂಘಟಿತ ಪ್ರಕಟಣೆಯಲ್ಲಿ ಕೋರಲಾಗಿದೆ.

ಆಸಕ್ತರು ಆಧಾರ ಕಾರ್ಡ್, ರೇಶನ್ ಕಾರ್ಡ್ ಝರಾಕ್ಸ್ ತರಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9972691578/ 9449000623/ 8960277723 ಇವುಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಡಾ. ಮಂಜುನಾಥ ದೊಡ್ಡಹಟ್ಟಿ, ರಾಜು ಹಾದಿಮನಿ ಇದ್ದರು

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group