spot_img
spot_img

ಶಿಕ್ಷಣ ಸಿಬ್ಬಂದಿಯಲ್ಲಿ ಪರಸ್ಪರ ಸಹಕಾರ ಪ್ರಜ್ಞೆ ಅಗತ್ಯ – ಪಾಂಡುರಂಗ ಒಂಟಿ

Must Read

- Advertisement -

ಮೂಡಲಗಿ: ಸರಕಾರದ ನೌಕರನಾಗಿ ಇಲಾಖೆ ಜೊತೆಯಾಗಿ ಸಿಬ್ಬಂದಿಗಳ ಸಹಕಾರದೊಂದಿಗೆ ಶ್ರಮಿಸಿ ಕರ್ತವ್ಯ ಪ್ರಜ್ಞೆಯನ್ನು ತೋರಬೇಕು. ಶಿಕ್ಷಣ ಇಲಾಖೆಯಲ್ಲಿಯ ಬೋಧಕ ಸಿಬ್ಬಂದಿ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುವಲ್ಲಿ ಬೋಧಕೇತರ ಸಿಬ್ಬಂದಿಗಳ ಪಾತ್ರ ಮಹತ್ವ ಪೂರ್ಣವಾಗಿದೆ. ಒಂದೆ ನಾಣ್ಯದ ಎರಡು ಮುಖಗಳಾಗಿ ಕರ್ತವ್ಯ ಪಾಲಿಸಿದಾಗ ಇಲಾಖೆಯ ಗೌರವ ಎತ್ತಿಹಿಡಿಯಲು ಯಶಸ್ವಿಯಾಗುವುದಾಗಿ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಪಾಂಡುರಂಗ ಒಂಟಿ ಹೇಳಿದರು.

ಅವರು ಪಟ್ಟಣದ ಬಿಇಒ ಕಛೇರಿಯಲ್ಲಿ ಜರುಗಿದ ವಯೋ ನಿವೃತ್ತಿ ನಿಮಿತ್ತ ಹಮ್ಮಿಕೊಂಡ ಅಭಿನಂದನೆ ಮತ್ತು ಸತ್ಕಾರ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬ ನೌಕರರಿಗೂ ಸೇವಾ ಸೌಲಭ್ಯಗಳು ಅತ್ಯವಶ್ಯಕವಾಗಿರುತ್ತವೆ. ಅವುಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಿದಾಗ ಅವರ ಸೇವಾ ಕಾರ್ಯ ಯಶಸ್ವಿಗೊಳಿಸಲು ಸಹಾಯಕವಾಗುವದು. ಕಛೇರಿಯಿಂದ ಆಗುವ ಇಲಾಖೆ ಹಾಗೂ ಇಲಾಖೆಯೇತರ ಕಾರ್ಯಗಳಿದ್ದು ಅದರಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸೇರಿದ್ದು ಅಂತಹವುಗಳನ್ನು ಸಮರ್ಪಕವಾಗಿ ಕಾಲಮಿತಿಯೊಳಗೆ ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಸುಧೀರ್ಘ 38 ವರ್ಷಗಳ ಸೇವಾವಧಿಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿರುವದು ಸಂತಸವು ಹಾಗೂ ತಮ್ಮ ಸಹಕಾರಯುಕ್ತ ಶೈಲಿಯು ನನಗೆ ತುಂಬಾ ಸಂತೋಷವನ್ನಿಡಿದೆ. ನಿವೃತ್ತಿಯಾದರು ಸಹ ಸದಾ ತಮ್ಮ ಸೇವೆಯನ್ನು ಮಾಡಲು ಬಯಸುವದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ಸೇವಾ ಭಾಗ್ಯ ಪಡೆದ ನಾವೆಲ್ಲರೂ ಧನ್ಯರು, ಸಿಕ್ಕಂತಹ ಅವಕಾಶಗಳನ್ನು ಯಶಸ್ವಿಯಾಗಿ ಪೂರೈಸಿ ಕರ್ತವ್ಯ ನಿಷ್ಠೆ ತೋರಬೇಕು. ಇಲಾಖೆಯ ಮಾನದಂಡಗಳನುಸಾರ ಪ್ರತಿಯೊಬ್ಬ ನೌಕರರ ಹಿತದೃಷ್ಟಿಯಿಂದ ಕೆಲಸಗಳನ್ನು ಮಾಡಿದಾಗ ಕೈಗೊಂಡ ಪ್ರತಿಯೊಂದು ಕಾರ್ಯಗಳು ಯಶಸ್ವಿಯಾಗಲು ಸಾಧ್ಯವಾಗುವದು. ಶಿಕ್ಷಣ ಇಲಾಖೆಯು ಬಹು ಮುಖ್ಯ ಇಲಾಖೆಯಾಗಿದ್ದು ಇಲ್ಲಿರುವ ಶಿಕ್ಷಕ ಸಮುದಾಯದ ಸೇವಾ ಭದ್ರತೆ ಅವರ ಕುಂದು ಕೊರತೆಗಳಿಗೆ ಸ್ಪಂದಿಸಿದಾಗ ಮಾತ್ರ ಇಲಾಖೆಯ ಆಶೋತ್ತರಗಳು ಈಡೇರುವಲ್ಲಿ ಸಹಕಾರಿಯಾಗುತ್ತವೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರ ಸಂಘಟನೆಯ ಸಿದ್ರಾಮ ಲೋಕನ್ನವರ, ಎಡ್ವಿನ್ ಪರಸನ್ನವರ, ನಿವೃತ್ತ ಪ್ರಧಾನಗುರು ರುದ್ರಪ್ಪ ಮಹಾಲಿಂಗಪೂರ ಮಾತನಾಡಿ,  ಪತ್ರಾಂಕಿತ ವ್ಯವಸ್ಥಾಪಕರಾಗಿ ಕಛೇರಿಯಲಿದ್ದು ಪ್ರತಿಯೊಂದು ದಾಖಲೆಗಳನ್ನು ಹಾಗೂ ಮಾಹಿತಿಗಳನ್ನು ಕಾಲಕಾಲಕ್ಕೆ ನೀಡುವ ಮೂಲಕ ಯಶಸ್ವಿ ಸೇವಾ ಕಾರ್ಯಮಾಡಿರುವದು ಪ್ರಶಂಸಾರ್ಹವಾಗಿದೆ. ವೃತ್ತಿ ಜೀವನದಲ್ಲಿ ಸಂತೃಪ್ತಿಯ ಕೆಲಸ ಮಾಡಿದಾಗ ನಿವೃತ್ತಿಯ ಜೀವನ ಸುಗಮವಾಗಿರುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಜುನೇದಿಅಹ್ಮದ ಪಟೇಲ, ಇಸಿಒಗಳಾದ ಟಿ.ಕರಿಬಸವರಾಜು, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ, ಶಿಕ್ಷಕರ ಸಂಘಟನೆಯ ಸುಭಾಸ ಭಾಗೋಜಿ, ಎಲ್.ಎಮ್ ಬಡಕಲ್, ಬಿ.ಎ ಡಾಂಗೆ, ಬಿ.ಎಲ್ ನಾಯಿಕ, ಶಂಕರ ಗುಡಗುಡಿ, ಎಸ್.ಎ ಕುರಣಗಿ, ಎನ್.ಜಿ ಹೆಬ್ಬಳ್ಳಿ, ಪಿ.ಜಿ ಪಾಟೀಲ, ಗೋಪಾಲ ಭಸ್ಮೆ, ಕೆ.ಎಲ್ ಮೀಶಿ, ಎಸ್.ಎಲ್ ಪಾಟೀಲ, ಎಸ್.ಎಮ್ ದಬಾಡಿ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group