Homeಸುದ್ದಿಗಳುಯಶಸ್ವಿಯಾದ ಇಂಡಿ ಸಾಹಿತ್ಯ ಸೌರಭ ಕಾರ್ಯಕ್ರಮ

ಯಶಸ್ವಿಯಾದ ಇಂಡಿ ಸಾಹಿತ್ಯ ಸೌರಭ ಕಾರ್ಯಕ್ರಮ

ಡಾ ಪಂಡಿತ್ ಪುಟ್ಟರಾಜ ಸೇವಾ ಸಮಿತಿ (ರಿ)ಗದಗ ತಾಲ್ಲೂಕು ಘಟಕ ಇಂಡಿ ಸಾಹಿತ್ಯ ಸೌರಭ ಕಾರ್ಯಕ್ರಮ ಅತ್ಯಂತ ಸರಳ ಹಾಗೂ ಸುಂದರವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಸರೋಜಿನಿ ಮಾವಿನಮರ( ಝಳಕಿ )ತಾಲ್ಲೂಕು ಸಂಚಾಲಕರಾದ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಇಂಡಿ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಮಿತಿಯ ಗುರಿ ಉದ್ದೇಶಗಳು ಹಾಗೂ ಕಾರ್ಯ ಯೋಜನೆಗಳನ್ನು ಸವಿಸ್ತಾರವಾಗಿ ತಿಳಿಸಿದರು.

ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಗಂಗಾಬಾಯಿ ಗಲಗಲಿ ಕದಳಿ ವೇದಿಕೆ ಅಧ್ಯಕ್ಷರು ಪುಟ್ಟರಾಜರ ಜೀವನ ಅವರ ಬಾಲ್ಯ ಅವರ ಸಾಧನೆ ಅವರ ಸಾಮಾಜಿಕ ಕೊಡುಗೆಗಳನ್ನು ವಿವರಿಸಿದರು.

ಮುಖ್ಯ ಅತಿಥಿ ಸ್ಥಾನದಲ್ಲಿರುವ ಆರ್ .ವಿ .ಪಾಟೀಲ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಪುಟ್ಟರಾಜರ ಸೇವೆ ನಮಗೆ ದೊರಕಿದ್ದು ಪುಣ್ಯ ಎಂದರು.

ಸಂಗೀತ ಗುರುಗಳಾದ ಮುರಳೀಧರ ಭಜಂತ್ರಿ ಗುರುಗಳು ಮಾತನಾಡುತ್ತಾ, ಪುಟ್ಟರಾಜರ ಸೇವೆ ಮಾಡಲು ಸದಾ ಹಾತೊರೆಯುತ್ತಿರುವ ನಾವು ಸಂಗೀತ ಗುರುಗಳಾಗಿ ನನ್ನ ಸೇವೆಯನ್ನು ಪುಟ್ಟರಾಜರಿಗೆ ಅರ್ಪಿಸುತ್ತೇನೆ ಎಂದು ನುಡಿದರು.

ವೇದಿಕೆಯಲ್ಲಿ ರಾಜಶ್ರೀ ಛತ್ರಿ ,ಜಿ.ಜಿ .ಬರಡೊಲ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಲ್ಲದೆ ಸಾಕಷ್ಟು ಜನ ವಚನ ವಾಚನ ,ಕವನ ವಾಚನ, ಭಕ್ತಿ ಗೀತೆ ಗಾಯನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪುಂಡಲೀಕ ಸಣ್ಣಾರ ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀಶೈಲ ಕಂಬಾರ ಸ್ವಾಗತಿಸಿದರು ವಿಜಯ್ ಕುಮಾರ ಸರ್ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group