ಭೀಕರ ಅಪಘಾತ; ಅಣ್ಣ ತಂಗಿ ದುರ್ಮರಣ

Must Read

ಮೂಡಲಗಿ: ಎದುರಿಗೆ ಬರುತ್ತಿದ್ದ ಎರ್ಟಿಗಾ ಕಾರಿಗೆ ಆಗಬಹುದಾದ ಅಪಘಾತವನ್ನು ತಪ್ಪಿಸಲು ತಮ್ಮ ಕಾರನ್ನು ಪಕ್ಕದ ಹೊಲದೊಳಗೆ ನುಗ್ಗಿಸಿದ ಪರಿಣಾಮ ಉಂಟಾದ ಭೀಕರ ಅಪಘಾತದಲ್ಲಿ ರಾಯಬಾಗ ತಾಲೂಕಿನ ಅಣ್ಣ ತಂಗಿ ಸಾವನ್ನಪ್ಪಿರುವ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಾಲೂಕಾ ಪಂಚಾಯತ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ದುಂಡಪ್ಪ ಅಡಿವೆಪ್ಪ ಬಡಿಗೇರ (೩೨) ಹಾಗೂ ಅವರ ಸಹೋದರಿ ಭಾಗ್ಯಶ್ರೀ ಕಂಬಾರ (೨೮) ಅಪಘಾತದಲ್ಲಿ ಮೃತಪಟ್ಟವರು.

ದುಂಡಪ್ಪ ಅವರು ತಮ್ಮ ಸಹೋದರಿಯ ಸೀಮಂತ ಕಾರ್ಯ ಮುಗಿಸಿಕೊಂಡು ಅವರನ್ನು ಕಾರಿನಲ್ಲಿ ಕರೆದುಕೊಂಡು ಬರುವಾಗ ಮೂಡಲಗಿ ಸಮೀಪ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಎದುರಿಗೆ ಬಂದ ಎರ್ಟಿಗಾ ಕಾರು ತಪ್ಪಿಸಲು ತಮ್ಮ ಕಾರನ್ನು ಹೊಲದತ್ತ ತಿರುಗಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಅಣ್ಣ ತಂಗಿಯರಿಬ್ಬರೂ ಮೃತಪಟ್ಟಿದ್ದು ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group