ಹುಲಿ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಬೀದರ – ರಾಷ್ಟ್ರೀಯ ಪ್ರಾಣಿ ಹುಲಿಯ ಚರ್ಮವು ಜಿಲ್ಲೆಯ ಸಂಗೊಳ್ಳಿ ಗ್ರಾಮದ ಅಶೋಕ ಪಾಟೀಲ ಎಂಬುವವರ ಮನೆಯ ಜಗುಲಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಚರ್ಮ ವಶಪಡಿಸಿಕೊಂಡಿರುವ ಪ್ರಕರಣ ನಡೆದಿದೆ.
ಬೀದರ ಜಿಲ್ಲೆಯಲ್ಲಿ ಮೊಟ್ಟಮೊದಲ ಪ್ರಕರಣ ಎಂದು ಹೇಳಬಹುದಾದ ಈ ಪ್ರಕರಣದಲ್ಲಿ ಅಶೋಕ ಪಾಟೀಲ ಅವರು ತಮ್ಮ ಮನೆ ದೇವರ ಜಗಲಿ ಮೇಲೆ ಹುಲಿ ಚರ್ಮ ಇಟ್ಟು ಪೂಜೆ ಮಾಡತ್ತಾ ಇದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಹುಲಿ ಚರ್ಮ ವಶಪಡಿಸಿಕೊಂಡು ಅಶೋಕ ಪಾಟೀಲ ಅವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ ಪಾಟೀಲ ; ನಮ್ಮ ಮನೆಗೆ ಒಬ್ಬ ಸ್ವಾಮಿ ವರ್ಷಕ್ಕೆ ಒಂದು ಸಲ ಊಟಕ್ಕೆ ಬರುತ್ತಾರೆ ಅವರು ನನಗೆ ಹುಲಿ ಚರ್ಮ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದು ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
ಅರಣ್ಯ ಅಧಿಕಾರಿ.ವನಿತಾ ಎಂ ಎಂ.ಅವರ ಹೇಳಿಕೆ ಪ್ರಕಾರ; ರಾಷ್ಟ್ರೀಯ ಪ್ರಾಣಿ ಹುಲಿಯ ಚರ್ಮವನ್ನು ನಾವು ಬೀದರ ಜಿಲ್ಲೆಯ ಸಂಗೋಳಗಿ ಗ್ರಾಮದ ಅಶೋಕ ಪಾಟೀಲ ಮನೆ ಮೇಲೆ ಖಚಿತ ಮಾಹಿತಿ ಪ್ರಕಾರ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದು.ಅವರು ಮೂವತ್ತು ವರ್ಷಗಳಿಂದ ದೇವರ ಜಗಲಿ ಮೇಲೆ ಇಟ್ಟುಕೊಂಡು ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ.
ಆದರೆ ಹುಲಿ ಚರ್ಮ ಯಾವುದೇ ಒಂದು ಬಾಗ ಹಲ್ಲು ಆಗಲಿ ಉಗುರು ಅಥವಾ ಚರ್ಮ ಯಾವುದೇ ಬಿಡಿ ಭಾಗಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನು ಬಾಹಿರ. ಆದ್ದರಿಂದ ಅಶೋಕ ಪಾಟೀಲ ಅವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲೆ ಮಾಡಿಕೊಂಡು ವಶಕ್ಕೆ ಪಡೆದಿದ್ದೇವೆ ಎಂದರು.
ಅಶೋಕ ಪಾಟೀಲ ದಕ್ಷಿಣ ಕ್ಷೇತ್ರದ ಪ್ರಭಾವಿ ನಾಯಕ ಹಲವು ವರ್ಷಗಳಿಂದ ಜೆಡಿಎಸ ಶಾಸಕ ಬಂಡೆಪ್ಪಾ ಖಾಶೆಂಪುರ ಅವರ ಆಪ್ತಮಿತ್ರ ಆಗಿದ್ದು..ಜೆಡಿಎಸ ಪಕ್ಷದಿಂದ ಒಂದು ಬಾರಿ ತಾಪಂ ಗೆ ಆಯ್ಕೆಯಾಗಿ, ಒಂದು ಬಾರಿ ಜಿಲ್ಲಾ ಪಂಚಾಯತ ಸ್ಪರ್ಧೆ ಮಾಡಿದ್ದರು. ಇತ್ತೀಚೆಗೆ ಜೆಡಿಎಸ ಪಕ್ಷ ಬಿಟ್ಟು ಬಂಡೆಪ್ಪಾ ಖಾಶೆಂಪುರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅವರಿಂದ ದೊರ ಆಗಿದ್ದರು.
ಅಶೋಕ ಪಾಟೀಲ ದಕ್ಷಿಣ ಕ್ಷೇತ್ರದ ಲಿಂಗಾಯತ ನಾಯಕರ ಒಂದು ಗುಂಪು ಮಾಡಿಕೊಂಡು ಲಿಂಗಾಯತ ಜನರನ್ನು ಸೇರಿಸುವ ಮೂಲಕ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದ ಅಶೋಕ ಪಾಟೀಲ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತದಂತೆ ಬೀದರ ಸೆಂಟ್ರಲ್ ಜೈಲು ಪಾಲಾಗಿದ್ದು ವಿಪರ್ಯಾಸವೆಂದು ಹೇಳಬಹುದು.
ಇನ್ನು ಅರಣ್ಯಾಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲೆ ಮಾಡಿಕೊಂಡು ತನಿಖೆ ಮಾಡಿ ಅಶೋಕ ಪಾಟೀಲ ಅವರಿಗೆ ಹುಲಿ ಚರ್ಮ ತಂದು ಕೊಟ್ಟ ಸ್ವಾಮಿ ಯಾರು, ಎಲ್ಲಿಂದ ತಂದು ಕೊಟ್ಟ ಎಂಬುದನ್ನು ತನಿಖೆ ಮಾಡಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ