- Advertisement -
ಮೂಡಲಗಿ: ಕೇಂದ್ರ ಸರಕಾರ ಜಾರಿಗೆ ತಂದ ರೈತ ವಿರೋಧಿ ಕಾನೂನುಗಳ ಖಂಡಿಸಿ ದೆಹಲಿಯ ಜಂತರ ಮಂತರದಲ್ಲಿ ಅಖಿಲ ಭಾರತೀಯ ಕಿಸಾನ್ ಕಾಂಗ್ರೆಸ್ ನಡೆಸಿದ ರೈತ ಆಕ್ರೋಶ ಪ್ರದರ್ಶನದಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸತೀಸ ಜಾರಕಿಹೊಳಿ ಆದೇಶದಂತೆ ಕೇಂದ್ರ ಕಾಂಗ್ರೆಸ್ ಮುಖಂಡ ಸಚಿನ್ ಮೀಗಾ ಅವರೊಂದಿಗೆ ಬೆಳಗಾವಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೂಡಲಗಿ ತಾಲೂಕಿನ ಯರಗುದ್ರಿಯ ಕಲ್ಲಪ್ಪಗೌಡ ಲಕ್ಕಾರ ನೇತೃತ್ವದಲ್ಲಿ ಭಾಗವಹಿಸಿದರು.
ಜಿಲ್ಲೆಯ ಕಾಂಗ್ರೇಸ್ ಮುಖಂಡರಾದ ವಿವೇಕ ಜತ್ತಿ, ರಮೇಶ ಮೋಖಾಶಿ, ಸುನೀಲ ಯತ್ತಿನಮನಿ, ಲಗಮನ್ನ ಕಳಸನ್ನವರ, ಅಶೋಕ ಹುದ್ದಾರ, ಬಸವರಾಜ ಗುರನ್ನವರ ಸೇರಿದಂತೆ ಸುಮಾರು ಐವತ್ತು ಜನರು ಆಕ್ರೋಶ ಪ್ರದರ್ಶನದಲ್ಲಿ ಬಾಗಿಯಾಗಿದ್ದರು.