Homeಸುದ್ದಿಗಳುಮತದಾನ ಒಂದು ಹಬ್ಬವಿದ್ದಂತೆ - ಈರಣ್ಣ ಕಡಾಡಿ

ಮತದಾನ ಒಂದು ಹಬ್ಬವಿದ್ದಂತೆ – ಈರಣ್ಣ ಕಡಾಡಿ

ಮೂಡಲಗಿ: ಚುನಾವಣೆ  ಪ್ರಜಾಪ್ರಭುತ್ವ ವ್ಯವಸ್ಥೆಯ  ದೊಡ್ಡ ಹಬ್ಬವಿದ್ದಂತೆ, ಮತದಾನ ಮಾಡುವ ಮೂಲಕ ಪ್ರತಿಯೊಬ್ಬ ನಾಗರಿಕ  ತನ್ನ ಕರ್ತವ್ಯವನ್ನು ನಿಭಾಯಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಬುಧವಾರ ಮೇ-10 ರಂದು ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಲ್ಲೋಳಿ ನಗರದ ಪಟ್ಟಣ ಪಂಚಾಯತ ಕಾರ್ಯಾಲಯ  ಬೂತ್ ನಂಬರ್ 101 ರಲ್ಲಿ ತಂದೆ- ತಾಯಿ ಅವರ ಶ್ರೀಮತಿ, ಸಹೋದರ ಮತ್ತು ಮಕ್ಕಳೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತ  ಚಲಾವಣೆ ಮಾಡಿದ ನಂತರ ಅವರು ಮಾತನಾಡಿದರು.

ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಆ ಮೂಲಕ ಒಳ್ಳೆಯ ಸರ್ಕಾರವನ್ನು ರಚನೆ ಮಾಡಲು ಸಾಧ್ಯವಿದೆ. ಸ್ಪಷ್ಟ ಬಹುಮತವಿಲ್ಲದೇ ಕಳೆದ ಹಲವಾರು ವರ್ಷಗಳಿಂದ ಯಾವ ರೀತಿ ಆಡಳಿತ ವ್ಯವಸ್ಥೆ ತೊಂದರೆಗೊಳಗಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ ಈ ಸಲ ಆ ತೊಂದರೆಯಾಗದ ರೀತಿಯೊಳಗೆ ನಾವೆಲ್ಲ ನೂರಕ್ಕೆ ನೂರು ಮತದಾನ ಮಾಡುವ ಮೂಲಕ ಪೂರ್ಣ ಬಹುಮತದ ಸರ್ಕಾರ ರಚಿಸಲು ಕಾರಣಿಭೂತರಾಗಬೇಕೆಂದು ಈರಣ್ಣ ಕಡಾಡಿ ಹೇಳಿದರು.

RELATED ARTICLES

Most Popular

error: Content is protected !!
Join WhatsApp Group