spot_img
spot_img

ಮೂಡಲಗಿ: ತಾಲೂಕಾ ಆಡಳಿತದಿಂದ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

Must Read

- Advertisement -

ಮೂಡಲಗಿ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಾ ಆಡಳಿತದಿಂದ ಜರುಗಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ 601ನೇ ಜಯಂತಿಯನ್ನು ಚುನಾವಣಾ ನಿಮಿತ್ತ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರ ಅಧ್ಯಕ್ಷತೆಯಲ್ಲಿ ಹೇಮರೆಡ್ಡಿ ಮಲ್ಲಮ್ಮಳ ಭಾವ ಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸುವದರೊಂದಿಗೆ ಸರಳ ರೀತಿಯಲ್ಲಿ ಆಚರಿಸಲ್ಲಾಯಿತು.

ಪ್ರೊ.ಸುರೇಶ ಲಂಕೆಪ್ಪನವರ ಮಾತನಾಡಿ, ನಿಸ್ವಾರ್ಥ ಭಕ್ತಿಗೆ ಹೆಸರಾಗಿದ್ದ ಮಹಾಸಾಧ್ವಿಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜೀವನ ಆದರ್ಶಮಯವಾಗಿದೆ. ಹೇಮರಡ್ಡಿ ಮಲ್ಲಮ್ಮ ಕುಟುಂಬದ ಸದಸ್ಯರ ಕಿರುಕುಳ ಸಹಿಸಿ ಅವರ ಅವಗುಣಗಳನ್ನು ಪ್ರೀತಿ, ಸಹನೆಯಿಂದ ತಿದ್ದಿ ತೀಡಿ ಅವರನ್ನು ಸರಿದಾರಿಗೆ ತರಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ ಏಕೈಕ ಮಹಿಳೆ, ಸ್ತ್ರೀಕುಲ ರತ್ನ, ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದರು. 

ಬೆಳಗಾವಿ ಲೇಕವ್ಯೂ ಆಸ್ಪತ್ರೆಯ ವೈದ್ಯ ಡಾ. ಗಿರೀಶ ಸೋನವಾಲಕರ ಮಾತನಾಡಿ, ಪ್ರತಿಯೊಬ್ಬರು ಹೇಮರಡ್ಡಿ ಮಲ್ಲಮ್ಮ ನವರ ಮೇಲೆ ಶೃದ್ಧೆ ಮತ್ತು ಭಕ್ತಿ ಇಟ್ಟು ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.

- Advertisement -

ಕಾರ್ಯಕ್ರಮದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಪ್ರದೀಪ ಲಂಕೆಪ್ಪನವರ, ರಂಗಣ್ಣ ಸೋನವಾಲ್ಕರ, ಅಶೋಕ ಹೊಸುರ, ವೆಂಕಟೇಶ ಸೋನವಾಲ್ಕರ, ಪುಲಕೇಶ ಸೋನವಾಲ್ಕರ, ಅನೀಲ ಸತರಡ್ಡಿ, ಬಿ.ಬಿ.ಸೋನವಾಲ್ಕರ, ರಮೇಶ ಪಾಟೀಲ, ಸುರೇಶ ಚಿಪ್ಪಲಕಟ್ಟಿ, ಸಂದೀಪ ಸೋನವಾಲ್ಕರ, ಗೋಪಾಲ ಲಂಕೆಪ್ಪನವರ, ವೆಂಕಣ್ಣ ಜಿ.ಸೋನವಾಲ್ಕ, ವೀರಣ್ಣ ಸೋನವಾಲ್ಕರ, ಶ್ರೀನಿವಾಸ ಗಿರೆಣ್ಣವರ, ತಹಶೀಲ್ದಾರ ಕಚೇರಿಯ ಎಮ್.ಎಲ್.ಮಾಸಮರಡ್ಡಿ ಮತ್ತಿತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group