- Advertisement -
ಸಿಂದಗಿ: 21ನೆಯ ಕರ್ನಾಟಕ ರಾಜ್ಯಮಟ್ಟದ ಟೇಕ್ವಾಂಡೋ ಕರಾಟೆ ಸ್ಪರ್ಧೆಯಲ್ಲಿ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸ್ಪರ್ಧೆಗೆ ಒಟ್ಟು 4 ವಿದ್ಯಾರ್ಥಿಗಳಲ್ಲಿ ಅನುಶ್ರೀ ಅವಟಿ ಚಿನ್ನದ ಪದಕ, ವೇದಾಂತ ಹೊಸಮನಿ ಬೆಳ್ಳಿ ಪದ, ಸುಲೇಮಾನ ಬೆಳ್ಳಿ ಪದಕ, ಸಿದ್ಧಾರ್ಥ ಚಿವುಟೆ ಕಂಚಿನ ಪದಕವನ್ನು ಗಿಟ್ಟಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕೊಳೂರು ಅವರು ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಗೆಲ್ಲುವುದರ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಶುಭ ಕೋರಿದರು. ಶಾಲೆಯ ಪ್ರಾಂಶುಪಾಲರು ಮಕ್ಕಳ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದರು, ಶಾಲಾ ಆಡಳಿತ ನಿರ್ದೇಶಕರು ಮಕ್ಕಳ ಸಾಧನೆಗೆ ಶ್ಲಾಘಿಸಿದರು.