ಬೈಲಹೊಂಗಲ- S S L C ಯಲ್ಲಿ 625/625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದೇವಲಾಪುರ ಸರ್ಕಾರಿ ಪ್ರೌಢ ಶಾಲೆಯ ರೂಪಾ ಚನಗೌಡಾ ಪಾಟೀಲ ಇವರಿಗೆ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿಯವರು ಸಾಧಕಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ 18-5-2025 ರಂದು ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಚನ ಪ್ರಾರ್ಥನೆಯನ್ನು ಶರಣೆಯರಾದ ಸುನಿತಾ ನಂದೆಣ್ಣವರ , ಶೋಭಾ ಶಿವಳ್ಳಿ, ಮತ್ತು ಲಲಿತಾ ರುದ್ರೇಗೌಡರ ನಡೆಸಿಕೊಟ್ಟರು ಮಹಿಳೆಯರ ವಚನ ಗಾಯನದ ನಂತರ ಸಾಧಕಿ ರೂಪಾ ಚನಗೌಡ ಪಾಟೀಲ ಅವರಿಗೆ ಶಾಲು, ಗ್ರಂಥ, ಪುಷ್ಪ ಹಾಗೂ ಧನ ಸಹಾಯ ಮಾಡಿ ಗೌರವ ಸಲ್ಲಿಸಲಾಯಿತು,
ಅವರ ಜೊತೆಯಲ್ಲಿ ಅವರ ದೊಡ್ಡಪ್ಪ ಗಂಗನಗೌಡ ಪಾಟೀಲರನ್ನು ಗೌರವಿಸಲಾಯಿತು. ಪ್ರೊ, ಶ್ರೀಕಾಂತ್ ಶಾನವಾಡವರು ಮಾತನಾಡಿ, ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ಇಂತಹ ಮಕ್ಕಳನ್ನು ಗುರುತಿಸಿ ಸನ್ಮಾನಿಸುವುದರ ಮುಖಾಂತರ ಮಕ್ಕಳಿಗೆ ಪ್ರೂತ್ಸಾಹ ಮತ್ತು ಧನಸಹಾಯವನ್ನು ಮಾಡುತ್ತಾ ಬಂದಿದೆ. ಇದರ ಸದುಪಯೋಗ ಪಡೆದುಕೊಂಡು ಮುಂದೆ ಚೆನ್ನಾಗಿ ಓದಿ ಆ ಮಕ್ಕಳು ಮುಂದೆ ಉನ್ನತ ಹುದ್ದೆಯನ್ನು ಪಡೆದು ಸಮಾಜಕ್ಕೆ ನಾಡಿಗೆ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಈ ರೀತಿಯಾದ ಸಾಧನೆ ಮೊತ್ತೊಬ್ಬರಿಗೂ ಮಾದರಿಯಾಗಬೇಕು ಇದರಿಂದ ಇನ್ನಿತರ ಮಕ್ಕಳಲ್ಲಿ ಸಾಧನೆ ಭಾವನೆಗಳು ಹುಟ್ಟಿ ಉತ್ತಮ ಸಾಮಾಜ ನಿರ್ಮಿಸಲು ಸಾಧ್ಯ ಎಂದರು.
ಶಿಕ್ಷಕಿ ದಾನಮ್ಮ ಝಳಕಿ ಮಾತನಾಡುತ್ತಾ ಬಹಳಷ್ಟು ಜನರಿಗೆ ಸರಕಾರಿ ಶಾಲೆಗಳೆಂದರೆ ತಿರಸ್ಕಾರ ಭಾವನೆ ಇದೆ ಆದರೆ ಈ ಮಗು ಸರಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿರುವುದು ಶಿಕ್ಷಕರೆಲ್ಲರಿಗೂ ಹೆಮ್ಮೆಯ ವಿಷಯ ಸರಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರಿದ್ದು ಉತ್ತಮ ಶಿಕ್ಷಣ ದೊರಕುತ್ತದೆ ಅದನ್ನು ಅರ್ಥಮಾಡಿಕೊಳ್ಳಬೇಕು ಗ್ರಾಮೀಣ ಪ್ರದೇಶದ ಮಕ್ಕಳು ಇವತ್ತು ಸರಕಾರಿ ಶಾಲೆಯಿಂದಲೇ ಸಾಧನೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಏಣಗಿ ಮಠ ಗುರುಗಳು ಮಾತನಾಡಿದರು. ಅಧ್ಯಕ್ಷರು ಎಸ್ ಜಿ ಸಿದ್ನಾಳರು ಮಾತನಾಡಿ ಸಾಧಕಿ ರೂಪಾಳಿಗೆ ಅಭಿನಂದಿಸುತ್ತಾ ಹೀಗೆ ಮುಂದೆಯ ಸಾಧನೆ ಮಾಡುತ್ತಾ ಸಾಗಲಿ ಬಸವಾದಿ ಶರಣರ ಆಶಿರ್ವಾದ ಅವಳ ಮೇಲೆ ಸದಾ ಇರಲಿ ಸಮಾಜಕ್ಕೆ ಅವಳಿಂದ ಉತ್ತಮೋತ್ತಮವಾದ ಕಾರ್ಯಗಳು ಆಗಲಿ ಎಂದು ಶುಭ ಹಾರೈಸಿದರು
ನಿರೂಪಣೆ ಶರಣ ಕಟ್ಟಿಮನಿಯವರು ನಡೆಸಿಕೊಟ್ಟರು, ಕಾರ್ಯದರ್ಶಿ ಶಂಕರ ಶೆಟ್ಟಿ ಅವರು ಹಾಗೂ ಸಂಘದ ಎಲ್ಲ ಶರಣೆ ಶರಣೆಯರು ಇದ್ದು ಆ ಬಾಲಕಿಗೆ ಶುಭ ಹಾರೈಸಿ ಆಶಿರ್ವದಿಸಿದರು.