Homeಸುದ್ದಿಗಳುಕ್ರಿಯಾಶೀಲ ಶಿಕ್ಷಕರ ಸನ್ಮಾನ ಕಾರ್ಯಕ್ರಮ

ಕ್ರಿಯಾಶೀಲ ಶಿಕ್ಷಕರ ಸನ್ಮಾನ ಕಾರ್ಯಕ್ರಮ

ಬೆಳಗಾವಿ: ಅರಬಿಂದೋ ಸೊಸೈಟಿ ಮತ್ತು ಡಯಟ್ ಮಣ್ಣೂರ್ ಬೆಳಗಾವಿ ಇವರ ಸಹಯೋಗದಲ್ಲಿ ಅರಬಿಂದೋ ಸೊಸೈಟಿಯವರಿಂದ ನಡೆದ 40 ಅವಧಿ ಅಂತರ್ಜಾಲ ತಾಣದಲ್ಲಿ ಜರುಗಿದ ತರಬೇತಿ ಯಲ್ಲಿ ಪಾಲ್ಗೊಂಡು ಅನೇಕ ಚರ್ಚೆ ಮಾಡಿದ ಹಿನ್ನೆಲೆಯಲ್ಲಿ ಇಂದು ಅಂತಹ ಶಿಕ್ಷಕರಿಗೆ ಮತ್ತು ಸಂಪನ್ಮೂಲ ವ್ಯಕ್ತಿ ಗಳಿಗೆ ಸತ್ಕಾರ ಹಾಗೂ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎಂ ಎಂ ಸಿಂಧೂರ್ ಸರ್ ವಹಿಸಿದ್ದರು.ರಾಜ್ಯಮಟ್ಟದ ಅರಬಿಂದೋ ಸೊಸೈಟಿಯ ಸಮನ್ವಯಾಧಿಕಾರಿಗಳಾದ ನವೀನ್ ಹಾಗೂ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀಮತಿ ಮಂಗಲ ಕೊರಬು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ತರಬೇತಿಯ ರಾಜ್ಯಮಟ್ಟದ ಸಮನ್ವಯಾಧಿಕಾರಿಗಳಾದ ನವೀನ್ ಅವರು, ಮನಸ್ಸನ್ನು ಹೆಚ್ಚಿನ ವಿಶಾಲತೆಗೆ ಮತ್ತು ಸ್ವಯಂ ಮತ್ತು ಅನಂತತೆಯ ಅರ್ಥಕ್ಕೆ ತೆರೆಯುವುದು,ತನ್ಮೂಲಕ ಶಿಕ್ಷಕರು ಬೋಧನೆಯಲ್ಲಿ ತೊಡಗುವ ಮೂಲಕ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದ ಶಿಕ್ಷಕರನ್ನು ಗುರುತಿಸಿ ಗೌರವ ನೀಡುತ್ತಿರುವುದು ಶ್ಲಾಘನೀಯ ಎಂದರು.

ನಂತರ ಭಾಗವಹಿಸಿದ ಎಲ್ಲಾ ಶಿಕ್ಷಕರಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.ಅದರಂತೆ ಪ್ರತಿ ಶಾಲೆಗೂ ಕೂಡ ಒಂದೊಂದು ರೋಲ್ ಮಾಡೆಲ್ ಬ್ಯಾನರ್ ಗಳನ್ನು ನೀಡಲಾಯಿತು. ಪ್ರಾಂಶುಪಾಲರು ಮಾತನಾಡಿ, ವರ್ಗಕೋಣೆಯಲ್ಲಿ ಮಕ್ಕಳಿಗೆ ಉತ್ತಮವಾದಂತಹ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವೆಂದು ಹೇಳುತ್ತಾ ತರಬೇತಿಯಲ್ಲಿ ತೆಗೆದುಕೊಂಡಂತಹ ವಿಷಯಗಳನ್ನು ತರಗತಿಗಳಿಗೆ ತೆಗೆದುಕೊಂಡು ಹೋಗಲು ಸೂಚಿಸಿದರು.13 ಟಾಪಿಕ್ ಗಳನ್ನು ನಾಲ್ವತ್ತು ಅವಧಿಗಳಲ್ಲಿ ತರಬೇತಿಯನ್ನು ನೀಡಲಾಗಿತ್ತು.ಈ ಕಾರ್ಯಕ್ರಮವು ಜುಲೈ 12 2020 ರಿಂದ ಪ್ರಾರಂಭವಾಗಿತ್ತು. ತರಬೇತಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ಚಟುವಟಿಕೆಗಳ ಕುರಿತು ಸಾಕಷ್ಟು ವಿವರಣೆಯನ್ನು ನೀಡಲಾಗಿದ್ದು, ಇದನ್ನು ಶಿಕ್ಷಕರು ಅರಿತು ವರ್ಗಕೋಣೆಯಲ್ಲಿ ಹೊಸ ಮಾರ್ಪಾಟನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು.

RELATED ARTICLES

Most Popular

error: Content is protected !!
Join WhatsApp Group