ಸಿಂದಗಿ: ಜೆಡಿಎಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ರೈತರಿಗೆ ನೀಡಿದ ಸೌಲಭ್ಯಗಳನ್ನು ನೋಡಿ ಎಚ್.ಡಿ.ಕುಮಾರಸ್ವಾಮಿಯವರ ಕೈ ಬಲಬಡಿಸಬೇಕು ಎಂದು ಆಲಹಳ್ಳಿ ಗ್ರಾಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶಿವಾನಂದ ಪಟೀಲ ಸೋಮಜ್ಯಾಳ ಮಾತನಾಡಿ, ಕಳೆದ 18 ತಿಂಗಳ ಜೆಡಿಎಸ್ ಪಕ್ಷದ ಸಮ್ಮಿಶ್ರ ಸರಕಾರದ ಕಾಲಾವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಪ್ರಾದೇಶಿಕ ಜೆಡಿಎಸ್ ಪಕ್ಷಕ್ಕೆ ತರುವ ನಿಟ್ಟಿನಲ್ಲಿ ವಿವಿಧ ಪಕ್ಷಗಳಿಂದ ತಂಡೋಪತಂಡವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೆಂಪೇಗೌಡ ಮಡಿವಾಳ ಪಾಟೀಲ, ಯಲ್ಲಾಲಿಂಗ ಪಾಟೀಲ, ಶರಣಗೌಡ ಉಡುಗಿ, ಸಿದ್ದು ಶಾಬಾದಿ, ಈರಣ್ಣ ಬೊಮ್ಮನಹಳ್ಳಿ, ಭೀಮು ಸಾತಲಗಾಂವ, ಚಿದು ಮಾರ್ಸನಹಳ್ಳಿ, ವುದಾಲಸಾಬ ಭೈರವಾಡಗಿ, ನಾನಾಗೌಡ ಬಿರಾದಾರ, ಜೆಟಪ್ಪ ಪೂಜಾರಿ, ಮಲ್ಲು ಬೊಮ್ಮನಹಳ್ಳಿ, ಯಶವಂತ್ರಾಯಗೌಡ ಸಾತಲಗಾಂವ, ಭೀಮು ಪಾಟೀಲ, ದತ್ತು ತಳವಾರ, ಸಿದ್ದು ಸ್ವಾಡಗಿ, ಈರಣ್ಣ ಚಾವರಗಿ, ರೇವಣ್ಣಸಿದ್ದ ಪಾಟೀಲ, ಶರಣು ಅಲಹಳ್ಳಿ, ಯಲ್ಲು ಅಲಹಳ್ಳಿ, ಮಹಾದೇವಪ್ಪ ಪೂಜಾರಿ, ಹಣಮಂತ ತಳವಾರ, ಕಾಳು ಶಾಬಾದಿ, ಶ್ರೀಶೈಲ ಕನ್ನೋಳ್ಳಿ ಸೇರಿದಂತೆ ವಿವಿದ ಪಕ್ಷಗಳ ಕಾರ್ಯಕರ್ತರು ಹಾಗೂ ಊರಿನ ಪ್ರಮುಖರು ಜೆಡಿಎಸ್ ಪಕ್ಷ ಸೇರ್ಪಡೆಯಾದರು.