ಹಳ್ಳೂರ – ಸಂವಿದಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೇಳಿದಂತೆ ಸಂಘಟನೆ, ಹೋರಾಟ, ಶಿಕ್ಷಣ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಮುಂದುವರೆಯಲು ಸಾಧ್ಯವಾಗುವುದು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ಮಹತ್ವದ್ದು ಆಸೆ ಆಮಿಷಗಳಿಗೆ ಬಲಿಯಾಗದೆ ಸಂಘಟನೆಯಿಂದ ಸಮಾಜಕ್ಕೇ ಒಳ್ಳೆಯದನ್ನು ಮಾಡಿ ಅನ್ಯಾಯವಾದರೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಭೀಮ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಲವಿತ್ ಮೇತ್ರಿ ಹೇಳಿದರು .
ಅವರು ಗ್ರಾಮದಲ್ಲಿ ನಡೆದ ಭಿಮ್ ಆರ್ಮಿ ಮೂಲ ನಿವಾಸಿ ಏಕತಾ ಏಕತಾ ಪರಿಷತ್ ಕರ್ನಾಟಕ ಹಳ್ಳೂರ ಗ್ರಾಮ ಘಟಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸಮಾಜದಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಸಹಕಾರ ನೀಡಿ ಮುಖ್ಯ ವಾಹಿನಿಗೆ ತರುವವುದೇ ಭೀಮ್ ಆರ್ಮಿ ಸಂಘಟನೆ ಉದ್ದೇಶವಾಗಿದೆಯೆಂದರು.
ದಲಿತ ಸಮಾಜದ ಮುಖಂಡರಾದ ಸಂತೋಷ ದೊಡಮನಿ ಮಾತನಾಡಿ ಅಕ್ಷರದ ಕ್ರಾಂತಿ ಮಾಡಿದವರು ಸಾವಿತ್ರಿ ಬಾಯಿ ಪುಲೆಯವರು, ಸಂಘಟನೆಯಲ್ಲಿ ತೂಕಬದ್ಧತೆ ಪ್ರಾಮಾಣಿಕತೆ ಪ್ರಬುದ್ಧತೆ ಹೊಂದಿರಬೇಕು. ಅಂಬೇಡ್ಕರ್ ಅವರು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು ಕೋರ್ಟು ಕಚೇರಿಗೆ ಹೋಗದೆ ನೇರವಾಗಿ ಸತ್ಯಕ್ಕೆ ನ್ಯಾಯ ಒದಗಿಸುವ ಕೆಲಸ ಕಾರ್ಯ ಮಾಡಿದ್ದಾರೆ. ಅಂಬೇಡ್ಕರ ತತ್ತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಅನುಯಾಯಿಗಳಾಗಲು ಸಾಧ್ಯ ಆಸೆ ಆಮಿಷಗಳಿಗೆ ಬಲಿಯಾಗಬೇಡಿ. ರಮಾಬಾಯಿ ಅವರಲ್ಲಿ ಸತ್ಯ ನಿಷ್ಠುರತೆ ಅವರಲ್ಲಿತ್ತು ಬೇರೆಯವರ ಹಣಕ್ಕೆ ಆಸೆ ಪಡುತ್ತಿರಲಿಲ್ಲ ನೀವೂ ಕೂಡ ಸ್ವತಃ ಸತ್ಯದ ಕಾಯಕ ಮಾಡಿ ಹಣ ಸಂಪಾದನೆ ಮಾಡಿರೆಂದು ಹೇಳಿದರು
ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ಸಂಘಟನೆಯಿಂದ ವ್ಯಯಕ್ತಿಕ ಲಾಭ ವಿಚಾರಿಸದೆ ಸಮಾಜದ ಏಳ್ಗೆಗೆ ಪ್ರಾಮಾಣಿಕ ಪ್ರಯತ್ನ ಪಟ್ಟರೆ ತಕ್ಕ ಪಲ ದೊರೆಯುತ್ತದೆ.ಶಿಕ್ಷಣ ಎಂಬುದು ಹುಲಿ ಹಾಲು ಇದ್ದಂತೆ ಕುಡಿದವ ಗರ್ಜಿಸಲೇಬೇಕೆಂದು ಹೇಳಿದರು.
ಸುನೀಲ ಹರಿಜನ ಹಾಗೂ ರವಿ ಬೆಳಗಲಿ ಮಾತನಾಡಿ ಭೀಮ್ ಅರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಘಟನೆಯಿಂದ ಸಮಾಜಕ್ಕೇ ಒಳ್ಳೆಯ ಸಂದೇಶ, ಕೊಡುಗೆಗಳನ್ನು ನೀಡುವಂತಾಗಬೇಕು ಸಮಾಜ ಬಾಂಧವರು ಗ್ರಾಮ ಪಂಚಾಯತಿಯಿಂದ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾರಂಭದಲ್ಲಿ ಗ್ರಾಮ ಪಂಚಾಯತಿಯಿಂದ ಜಾಥಾ ಮೂಲಕ ಆಗಮಿಸಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ನಾಮ ಫಲಕ ಉದ್ಘಾಟನೆ ನೆರವೇರಿಸಿದರು.
ಚೇತನ ಪೂಜೇರಿ, ಗಣೇಶ ಹೀರ್ಲಕ್ಕಿ, ವಿಠ್ಠಲ ಜುನ್ನೂರ ಸಂಘಟನೆ ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಮಯದಲ್ಲಿ ಪ್ರಕಾಶ ಕೆಳಗಡೆ ಅನೀಲ ಬರ್ಗಿ, ಶಿವಪ್ಪ ಹರಿಜನ, ಹನಮಂತ ಬಾಳವ್ವಗೋಳ, ಶಂಭುಲಿಂಗ ವೆಂಕಟಾಪುರ, ಭರಮಪ್ಪ ದೊಡಮನಿ, ಶ್ರೀಶೈಲ ಹರಿಜನ, ಬಾಬು ಹರಿಜನ, ಶಂಕರ ಹರಿಜನ, ಸುರೇಶ ಹರಿಜನ, ವಿಠ್ಠಲ ದೊಡಮನಿ, ಪ್ರಭು ಹರಿಜನ, ಸದಾಶಿವ ಕೆಳಗಡೆ, ಶ್ರಿಶೈಲ ದೊಡಮನಿ, ಪಾಂಡುರಂಗ ದೊಡಮನಿ, ಪಾಂಡುರಂಗ ವೆಂಕಟಾಪುರ,ಯಲ್ಲಪ್ಪ ಮ್ಯಾಗಾಡಿ,ರಾಮಪ್ಪ ದೊಡಮನಿ ಸೇರಿದಂತೆ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಘಟಕರು ಗ್ರಾಮಸ್ಥ ರಿದ್ದರು.

