spot_img
spot_img

ಆರ್ಥಿಕ ಹೊರೆಯಾದ ಹೆಚ್ಚುವರಿ ವಿಶ್ವ ವಿದ್ಯಾಲಯಗಳು

Must Read

- Advertisement -

ಹಿಂದಿನ ಸರಕಾರ ಇದ್ದ ಸಮಯದಲ್ಲಿ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ರೀತಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಿ ಯಾವುದೇ ಮೂಲಭೂತ ಸವಲತ್ತು ಸೌಕರ್ಯ ಇಲ್ಲದ ಅತ್ಯಂತ ಕಳಪೆ ಗುಣಮಟ್ಟದ ಕಟ್ಟಡದಲ್ಲಿ ವಿಶ್ವ ವಿದ್ಯಾಲಯಗಳನ್ನು ತರಾತುರಿಯಲ್ಲಿ ಸ್ಥಾಪಿಸಿ ಅನೇಕ ಕುಲ ಸಚಿವರನ್ನು ಶೈಕ್ಷಣಿಕ ಹಾಗೂ ಸೇವಾ ಜೇಷ್ಠತೆ ಅರ್ಹತೆಯನ್ನು ನೋಡದೆ ನೇಮಕಾತಿ ಮಾಡಿ ಸ್ನಾತಕೊತ್ತರ ಪ್ರವೇಶವಿಲ್ಲದ ಕ್ಯಾಂಪಸ್ ಒಂದು ವಿಶ್ವ ವಿದ್ಯಾಲಯವೆ?

ಕಚೇರಿ ಸಿಬ್ಬಂದಿಯ ಕೊರತೆ, ಕಟ್ಟಡ ನಿರ್ವಹಣೆಯ ಕ್ಷೇತ್ರದಲ್ಲಿ ಸಂಪೂರ್ಣ ವಿಫಲಗೊಂಡವು ಹೊಸ ವಿಶ್ವ ವಿದ್ಯಾಲಯಗಳು. ಅದೆಷ್ಟೋ ತಿಂಗಳು ಕುಲಪತಿ ಕುಲಸಚಿವ
ಮೌಲ್ಯಮಾಪಕರ ಸಂಬಳ ಇಲ್ಲದೆ ಒಂದು ರೀತಿಯ ಅಸಹ್ಯ ರೀತಿಯಲ್ಲಿ ವಿಶ್ವ ವಿದ್ಯಾಲಯ ನಡೆಸುವುದು ಯಾವ ಪುರುಷಾರ್ಥಕ್ಕೆ?

ಸರಕಾರ ಈ ಹಿಂದೆ ತೆಗೆದುಕೊಂಡ ವಿಶ್ವ ವಿದ್ಯಾಲಯಗಳ ಪುನರ್ ವಿಲಿನೀಕರಣದ ಆದೇಶ ಇನ್ನೂ ದೊರೆತಿಲ್ಲ.
ಕೆಲವರು ಖೋಟಾ ಶೈಕ್ಷಣಿಕ ಅರ್ಹತೆಯನ್ನು ತೋರಿಸಿ
ಕುಲಸಚಿವ ಹುದ್ದೆ ಪಡೆದಿದ್ದಾರೆ.

- Advertisement -

ವಸೂಲಿ ಲಾಬಿ ಬೇಕಾ ಬಿಟ್ಟಿ ವರ್ಗಾವಣೆ ಮಾಡುವ ಸರಕಾರದ ಕಾರ್ಯ ಬೇಜಾವಾಬ್ದರಿಯಿಂದ ಕೂಡಿದೆ.
ನಿಯಂತ್ರಣ ಇಲ್ಲದ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯಕ್ಕೆ ಆರ್ಥಿಕ ಹೊರೆ ಅಲ್ಲವೆ?

ಈ ಕೂಡಲೇ ಸರಕಾರ ಇಂತಹ ಅನಗತ್ಯವಾದ ಹೆಚ್ಚುವರಿ ವಿಶ್ವ ವಿದ್ಯಾಲಯಗಳಾದ ಹಾವೇರಿ ಜಮಖಂಡಿ ಹಾಸನ ಬೆಂಗಳೂರು ಬಾಗಲಕೋಟೆ ಮತ್ತು ಇತರ ಬೇರೆ ಬೇರೆ ಹೆಚ್ಚುವರಿ ವಿಶ್ವ ವಿದ್ಯಾಲಯಗಳು ತಮ್ಮ ತಮ್ಮ ಮೂಲ ವಿಶ್ವ ವಿದ್ಯಾಲಯಗಳಿಗೆ ಮರು ಜೋಡಣೆ ಮಾಡಲು ಕೂಡಲೇ ಆದೇಶ ಹೊರಡಿಸಬೇಕು.

ಆಸಕ್ತ ಪ್ರಾಮಾಣಿಕ ಗುಣಮಟ್ಟದ ಕುಲಪತಿಗಳನ್ನು
ನಿಯಮಿಸ ಬೇಕು. ಬೇರೆ ಸರಕಾರಿ ಅಥವಾ ಅನುದಾನಿತ ಸಂಸ್ಥೆಗಳ ನಿವೃತ್ತ ಪ್ರಾಧ್ಯಾಪಕರನ್ನು ವಿಶ್ವ ವಿದ್ಯಾಲಯಕ್ಕೆ ಕುಲಪತಿ ನಿಯಮಿಸುವುದು ಯಾವ ನ್ಯಾಯಕ್ಕೆ?
ಈ ಬಗ್ಗೆ ಘನ ಸರ್ಕಾರದ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು  ಗಮನ ಹರಿಸಲು ಕೋರಿಕೆ,

- Advertisement -

ಡಾ ಶಶಿಕಾಂತ ರುದ್ರಪ್ಪ ಪಟ್ಟಣ
ರಾಮದುರ್ಗ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group