ಕಾರ್ಮಿಕನ ಮೇಲೆ ಹಲ್ಲೆ ಖಂಡಿಸಿ ಮನವಿ

0
218

ಸಿಂದಗಿ : ಇತ್ತೀಚೆಗೆ  ವಿಜಯಪುರದ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರ ಮೇಲಾದ ಹಲ್ಲೆಯನ್ನು ಖಂಡಿಸಿ ದಲಿತ ಸೇನೆಯ ಕಾರ್ಯಕರ್ತರು ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರವಿ ಹೋಳಿ ಮಾತನಾಡಿ ಈ ಒಂದು ಘಟನೆ ಅಮಾನವೀಯವಾಗಿದ್ದು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ ಬಡ ಕೂಲಿ ಕಾರ್ಮಿಕರಿಗೆ ಹೊಡೆದಿರುವ ರೀತಿ ನೋಡಿದರೆ ಮನುಷ್ಯತ್ವ ಇಲ್ಲದ ರಾಕ್ಷಸರಂತೆ ವರ್ತಿಸಿದ್ದಾರೆ ಅಪರಾಧಿಗೆ ಉಗ್ರವಾದ ಶಿಕ್ಷೆ ಆಗಬೇಕು ಮತ್ತು ಪೊಲೀಸ್ ಇಲಾಖೆ ಅವರನ್ನು ಬಂಧಿಸುವ ಕಾರ್ಯ ಮಾಡಿ ಇದರಲ್ಲಿ ಕಾಣದ ಕೆಲವು ರಾಜಕೀಯ ಕೈಗಳು ಮತ್ತು ಜಿಲ್ಲೆಯ ಪ್ರಭಾವಿ ನಾಯಕರು ಆರೋಪಿ ಪರವಾಗಿದ್ದು ಆರೋಪಿಗಳಿಗೆ ಬಚಾವ ಮಾಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಅಧ್ಯಕ್ಷ ಆಗ್ತೀನಿ ಮುಖ್ಯಮಂತ್ರಿ ಆಗ್ತೀನಿ ವಿರೋಧ ಪಕ್ಷದ ನಾಯಕನಾಗ್ತಿನಿ ಅಂತೆಲ್ಲ ಹೇಳಿ ಜಂಬ ಕೊಚ್ಚಿಕೊಳ್ಳುವ ನಮ್ಮ ಜಿಲ್ಲೆಯ ನಾಯಕರಿಗೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಪೋಲಿಸ್ ಇಲಾಖೆ ಇದ್ಯಾವುದನ್ನು ಪರಿಗಣಿಸದೆ ಇನ್ನೊಮ್ಮೆ ಎಲ್ಲಿಯೂ ಇಂತ ಘಟನೆಗಳು ಆಗದಂತೆ ಆರೋಪಿಗಳಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಜಗದೀಶ್ ಕಲಬುರ್ಗಿ ಮಾತನಾಡಿ, ಈ ಒಂದು ಕೃತ್ಯ ನೋಡಿದರೆ ಬಡವರು ಕೂಲಿಕಾರ್ಮಿಕರ ಕರಳು ಕಿತ್ತು ಬರುತ್ತದೆ. ಕೂಲಿ ಕಾರ್ಮಿಕರು ಎಂದರೆ ಅಮಾಯಕರು ಅಣ್ಣ ಬಸವಣ್ಣನವರ ನಾಡಿನಲ್ಲಿ ಈ ರೀತಿಯ ಕೃತ್ಯ ಮಾಡಿರುವ ವ್ಯಕ್ತಿಗೆ ಹೆಡೆಮುರಿ ಕಟ್ಟಿ ಪೋಲಿಸ್ ಇಲಾಖೆ ಒದ್ದು ಒಳಗೆ ಹಾಕಬೇಕು ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ಶಬ್ಬೀರ್ ಪಟೇಲ್ ಬಿರಾದಾರ್ ಮಾಜಿ ಸೈನಿಕರು , ಉಪಾಧ್ಯಕ್ಷ ಚಂದ್ರಶೇಖರ್ ದೇವುರ ಗೌರವಾಧ್ಯಕ್ಷ ನೂರ ಹಮ್ಮದ್ ಕಣ್ಣಿ, ಗೌರವಾಧ್ಯಕ್ಷ ಚಂದ್ರಾಮ ಮೇಲಿನಕೇರಿ (ಮಾಜಿ ಸೈನಿಕರು) ಗೌರವಾಧ್ಯಕ್ಷ
ಸೋಮನಿಂಗ್ ಭಾವಿಕಟ್ಟಿ ಗೌರವಾಧ್ಯಕ್ಷ ಅಲ್ಲಾಭಕ್ಷ ಮಿರ್ಜಿ (ಮಾಜಿ ಸೈನಿಕರು) ಸಂಘಟನಾ ಕಾರ್ಯದರ್ಶಿ ರಾಜು ಗುಬ್ಬೆವಾಡ ಮಹಿಳಾಘಟಕ ದ ಅಧ್ಯಕ್ಷ ನಾಗಮ್ಮ ಎಮ್ಮಿ ಸುನಂದಾ ಯಂಪುರೆ ಉಪಾಧ್ಯಕ್ಷ ಪ್ರಕಾಶ್ ಹಾಲಳ್ಳಿ, ಅಧ್ಯಕ್ಷ ಸಿದ್ದು ದ್ವಾರಿ, ಮಾಳಪ್ಪ ಕಕ್ಕಳಮೇಲಿ, ಸದ್ದಾಂ ಮುಲ್ಲಾ ರಾಜು ಜಮಾದಾರ, ಸಿದ್ಧಾರೂಢ ವಾಲಿಕಾರ್. ಸಚಿನ್ ಹೋಳಿ, ಹಣಮಂತ ಹೊಸಮನಿ ಬಸವರಾಜ್ ರಾಥೋಡ್ ಸಂಜು ಮಾನಸುಣಗಿ, ಶಿವು ಪವಾರ್, ಶ್ರೀದೇವಿ ವಾಲಿ,
ಸುನಂದ ಸಾಲೋಟಗಿ, ಸರಸ್ವತಿ ರೂಗಿ ಸೇರಿದಂತೆ ಅನೇಕ ದಲಿತ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.