ಸಿಂದಗಿ – ಇದೇ ದಿ. ೧೪ ರಂದು ಜಿಲ್ಲೆಯಲ್ಲಿ ಗುತ್ತಿಗೆದಾರರ ಬೃಹತ್ ಪ್ರತಿಭಟನೆ ನಡೆಯಲಿದೆ.ಒಂದು ತಿಂಗಳ ಗಡುವು ನೀಡುತ್ತೇವೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಅರುಣ ಮಠ ಹೇಳಿದರು.
ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ದಿ. ೧೪ ರಂದು ನಡೆಯುವ ಬೃಹತ್ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಗುತ್ತಿಗೆದಾರರಿಗೆ ಯಾವುದೇ ಇಲಾಖೆಯಿಂದ ಮಾಡಿರುವ ಕಾಮಗಾರಿಗೆ ಹಣ ಸಂದಾಯ ವಾಗುತ್ತಿಲ್ಲ ಕಾಮಗಾರಿ ಪೂರ್ಣ ಗೊಳಿಸಿದ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಅದರಿಂದ ಜಿಲ್ಲಾಧಿಕಾರಿಗಳಿಗೆ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಯು ಸಿದ್ದೇಶ್ವರ ಗುಡಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಜರುಗುವುದು. ಬೃಹತ್ ಪ್ರತಿಭಟನೆಯಲ್ಲಿ ಸಿಂದಗಿಯ ಜನರು ಭಗಿಯಾಗುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಹಿರಿಯ ಗುತ್ತಿಗೆದಾರ ಮಹಾದೇವಪ್ಪ ಗುಡ್ಲಿಮನಿ ಯಾರದ್ದೋ ವೈಯಕ್ತಿಕ ಅಥವಾ ರಾಜಕೀಯ ಕಾರಣದಿಂದ ಪ್ರತಿಭಟನೆ ಮಾಡುತ್ತಿಲ್ಲ ಕಳೆದ ಮೂರು ವರ್ಷಗಳಿಂದ ಸರಕಾರ ಹಣ ಸಂದಾಯ ಮಾಡುತ್ತಿಲ್ಲ ಹತ್ತ-ಹತ್ತು ಪ್ರತಿಶತ ಕಾಮಗಾರಿ ಬಿಲ್ ಪಾವತಿ ಮಾಡಿದರು ಸಹಿತ ಯಾವುದೇ ಗುತ್ತಿಗೆದಾರರ ಬಿಲ್ ಬಾಕಿ ಉಳಿಯುತ್ತಿರಲಿಲ್ಲ. ಗುತ್ತಿಗೆದಾರರು ಸಂಕಷ್ಟದಲ್ಲಿರುವ ಕಾರಣ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.
ಸಭೆಯಲ್ಲಿ ಸಿ.ಆರ್. ರೋಡಗಿ ಜಿಲ್ಲಾ ಅಧ್ಯಕ್ಷರು, ತಾಂತ್ರಿಕ ಸಲಹೆಗಾರ ಎಲ್.ಡಿ.ಮಡಗೊಂಡ, ಎಸ್.ಆಯ್.ಡೋಣುರ ಉಪಾಧ್ಯಕ್ಷ ಆಯ್.ಎಮ್.ಪಟ್ಟಣಶೆಟ್ಟಿ, ಎಸ್.ಎಮ್.ಉಳ್ಳಾಗಡಿ, ಆರ್,ಎಮ್,ಮಾವಿನಗಿಡದ, ಆರ್.ಬಿ.ಅಸ್ಕಿ, ಸಿಂದಗಿ ತಾಲೂಕಾ ಅಧ್ಯಕ್ಷ ಮುತ್ತು ಮುಂಡೇವಾಡಗಿ, ಉಪಾದ್ಯಕ್ಷ ಬಿ.ಆಯ್.ಬಿಜ್ಜರಗಿ, ರಾಮನಗೌಡ ಬಿರಾದಾರ, ಹಾಗೂ ಪುಂಡಲೀಕ ಬಿರಾದಾರ, ಮಹಾಂತೇಶ ಕೋರಿ, ಗುತ್ತಿಗೆದಾರರಾದ ವ್ಹಿ.ಎಸ್.ಗಂಗನಳ್ಳಿ, ವಿ.ಎಮ್.ಸಿಂದನಕೇರಿ, ಎಸ್.ಸಿ.ಕರ್ನಾಳ, ಬಿ.ಎಮ್.ಪಾಟೀಲ, ಸತೀಶಗೌಡ ಬಿರಾದಾರ, ದಯಾನಂದ ಬಿರಾದಾರ, ಸಿದ್ದು ಶೀಲವಂತ, ಬೀಮು ನಂದಶೇಟ್ಟಿ, ವಾಯ್.ಎಲ್.ಬಳೂಂಡಗಿ, ನರಸು ಚವ್ಹಾಣ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.