ಸಂಚಾರದ ಪ್ರಮುಖ ರಸ್ತೆಗಳಲ್ಲಿ ಬದಲಾವಣೆ
ಬೀದರ: ಇದೇ ಡಿ.೫ ರಂದು ಅಗ್ನಿವೀರ ಸೇನೆ ನೇಮಕಾತಿ ಪ್ರಕ್ರಿಯೆಯು ಬೀದರನ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಬೀದರ ನಗರದ ಪ್ರಮುಖ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗು ಪೊಲೀಸ ಇಲಾಖೆ ನೆಹರು ಕ್ರೀಡಾಂಗಣದ ಸುತ್ತಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೋಲಿಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ.
ಡಿಸೆಂಬರ್ ೫ ರಿಂದ ೨೨ ರ ವರೆಗೆ ನಡೆಯಲಿರುವ ಸೇನಾ ನೇಮಕಾತಿಗಾಗಿ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ೪ ಜನ ಸರ್ಕಲ್ ಇನ್ಸ್‌ಪೆಕ್ಟರ್, ೧೨ ಜನ ಪಿಎಸ್ಐ, ೨೨ ಜನ ಎಎಸ್ಐ ಗಳು, ೩೪ ಜನ ಹೆಡ್ ಕಾನಸ್ಟೆಬಲ್ ಗಳು, ೩೭ ಜನ ಪೋಲಿಸ್ ಕಾನಸ್ಟೆಬಲಗಳು ಹಾಗೂ ೫೦ ಜನ ಗೃಹ ರಕ್ಷಕ ದಳದವರನ್ನು ನಿಯೋಜನೆ ಮಾಡಲಾಗಿದೆ.
ಇದರ ಉಸ್ತುವಾರಿಯನ್ನು ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಮಹೇಶ್ ಮೇಘಣ್ಣನವರ ಹಾಗೂ ಡಿವೈಎಸ್ಪಿಯವರು ನೋಡಿಕೊಳ್ಳುವರು.
ಡಿಸೆಂಬರ್ ೫ ರಂದು ಬೆಳಿಗ್ಗೆ ೩ ಗಂಟೆಯಿಂದ ಡಿಸೆಂಬರ್ ೨೨ ರವರೆಗೆ ಮಡಿವಾಳ ಸರ್ಕಲನಿಂದ ಕೆಎಚ್.ಬಿ ಕಾಲನಿ ಜನವಾಡ ರೋಡ ಕಡೆಗೆ ಹೋಗಬೇಕು.
ಮೋಹನ್ ಮಾರ್ಕೆಟನಿಂದ ಓಲ್ಡ್ ಸಾಯಿ ಫ್ಯಾಬ್ರಿಕ್ ಸರ್ಕಲ್ ಮತ್ತು ರೋಟರಿ ಸರ್ಕಲ್ ಕಡೆಗೆ ವಾಹನ ಬಿಡುವದಿಲ್ಲ. ಚಂದ್ರಕಾಂತ ಗುದಗೆ ಆಸ್ಪತ್ರೆಯಿಂದ ರೋಟರಿ ಸರ್ಕಲ್ ಕಡೆಗೆ ವಾಹನ ಬಿಡುವದಿಲ್ಲ. ಅರಣ್ಯ ಇಲಾಖೆಯ ಕಛೇರಿಯಿಂದ ಕೆಇಬಿ ಕಚೇರಿ ಎದುರುಗಡೆಯಿಂದ ಸಾರ್ವಜನಿಕರು ಹೋಗಬಹುದಾಗಿದೆ. ಕೆ.ಇ.ಬಿ ಕಡೆಯಿಂದ ಅಕ್ಕಮಹಾದೇವಿ ಕಾಲೇಜು ರಸ್ತೆ ರಂಗಮಂದಿರ ಕಡೆ ಹೋಗುವದನ್ನು ಬ್ಲಾಕ್ ಮಾಡಲಾಗಿದೆ ಎಂದು ಡಿವೈಎಸ್ಪಿ ಸತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ