ಮೂಡಲಗಿ: ‘ಅಕ್ಕಮಹಾದೇವಿಯು ೧೨ನೇ ಶತಮಾನದಲ್ಲಿ ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿಯಾಗಿ ಶರಣ ಚಳವಳಿಯ ದಿಟ್ಟ ಶರಣೆಯಾಗಿ ಗುರುತಿಸಿಕೊಂಡಿದ್ದಳು’ ಎಂದು ಹಿಡಕಲ್‌ದ ಸಾಹಿತಿ ಡಾ. ರತ್ನಾ ಎಫ್. ಬಾಳಪ್ಪನವರ ಹೇಳಿದರು.
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಅಕ್ಕಮಹಾದೇವಿ ಜೀವನ ಕುರಿತು ಉಪನ್ಯಾಸ ನೀಡಿದ ಅವರು ಲೌಕಿಕ ಜಗತ್ತನ್ನು ಧಿಕ್ಕರಿಸಿ ವೈರಾಗ್ಯ ಮತ್ತು ಭಕ್ತಿಗೆ ಹೊಸ ಭಾಷೆ ಬರೆದ ಶರಣೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ‘ಸದೃಢ ಮನಸ್ಸು ಸ್ವಚ್ಛ ವಿಚಾರಗಳಿದ್ದರೆ ಉನ್ನತಕ್ಕೆ ಏರಲು ಸಾಧ್ಯವಾಗುತ್ತದೆ. ಅಕ್ಕಮಹಾದೇವಿ ಮನಸ್ಸು, ಗುರಿ ಸದೃಢ ಮತ್ತು ಅಚಲವಾಗಿದ್ದರಿಂದ ಭಕ್ತಿ ಸಾಧನೆಯ ಮೇರು ಶಿಖರ ತಲುಪಿದರು ಎಂದರು.
ಗುಜನಾಳದ ಪಿಡಿಒ ಸುನೀಲ ಜಮಖಂಡಿ, ಅರಭಾವಿಯ ನಿವೃತ್ತ ಶಿಕ್ಷಕ ಬಿ.ಎಂ. ಮಾಳಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರ ಬಿಲಕುಂದಿ ಅವರನ್ನು ಸನ್ಮಾನಿಸಿದರು.
ಶಿಕ್ಷಕ ಅಪ್ಪಾಸಾಹೇಬ ಕುರುಬರ ಅವರಿಂದ ಸಂಗೀತ ಜರುಗಿತು. ವಿ.ಕೆ. ನಾಯ್ಕ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.