ಸಿಂದಗಿ: ಪುರಾಣ ಪ್ರವಚನಗಳು ಜಗತ್ತಿನ ಕತ್ತಲೆಯಿಂದ ಬೆಳೆಕಿನೆಡಗೆ ಕೊಂಡೊಯುತ್ತವೆ ಎಂದು ಶಹಾಪೂರ ವಿಶ್ವಕರ್ಮ ಏಕದಂಡಗಿಮಠ ಪುರಾಣ ಪ್ರವಚನಕಾರ ವಿಶ್ರಾಂತ ಉಪನ್ಯಾಸಕ ಪ ಪೂ ಶ್ರೀ ಅಜೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಜಗನ್ಮಾತೆ ಶ್ರೀ ಗ್ರಾಮ ದೇವತೆ ಲಕ್ಷ್ಮೀದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಕಳಸಾರೋಹಣ ಮತ್ತು ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಯೋಗಿವರೇಣ್ಯ ಶ್ರೀ ಚಿದಾನಂದ ಅವಧೂತರು ರಚಿಸಿದ ಶ್ರೀ ದೇವಿ ಪುರಾಣ ಪ್ರವಚನ ಮಹೋತ್ಸವದ ಮಂಗಳವಾರದಂದು ಶ್ರೀ ದೇವಿ ಪುರಾಣದಲ್ಲಿ ಅವರು ಮಾತನಾಡಿ ಶ್ರೀ ದೇವಿಯ ಪುರಾಣವನ್ನು ಕೇಳುವದರಿಂದ ಭಕ್ತಿ ಶಕ್ತಿ ಉತ್ತಮ ಸನ್ಮಾರ್ಗ ದೊರೆಯುತ್ತದೆ .ಜೀವನದಲ್ಲಿ ಸಿಟ್ಟು ಕೋಪ ಅಳಿದು ಜೀವನದಲ್ಲಿ ಶಾಂತಿಗಾಗಿ ಶ್ರೀ ದೇವಿಯ ಮೇಲೆ ಅಪಾರ ನಂಬಿಕೆ ಇಟ್ಟು, ಮಕ್ಕಳಿಗೆ ಶರಣರ- ಸಂತರ ದೇವಿಯ ಹೆಸರುಗಳು ನಾಮಕರಣ ಮಾಡಿ ಅವರಿಗೆ ಸತ್ಯದ ದಾರಿಯನ್ನು ತೋರಿಸುವಲ್ಲಿ ತಂದೆ ತಾಯಿ ಗುರು ಹಿರಿಯರ ಮಾರ್ಗದರ್ಶನ ಇಂದಿನ ದಿನಮಾನದಲ್ಲಿ ಅವಶ್ಯ ಇದೆ. ಕುಟುಂಬದಲ್ಲಿ ಶ್ರೀ ದೇವಿಯ ಪುರಾಣದಿಂದ ಮಹಾತ್ಮರ ತ್ಯಾಗದ ಜೀವನ ಚರಿತ್ರೆ ಆಲಿಸಿ ಸಂಸ್ಕೃತಿ ಆಚಾರ ವಿಚಾರ ಹಾಗೂ ಧಾರ್ಮಿಕತೆಯ ಮೇಲೆ ಸುಂದರ ಬದುಕು ಕಟ್ಟಿಕೊಂಡು ಜೀವನ ಸಾಗಿಸಬೇಕು ಎಂದರು.
ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಮಾತನಾಡಿ, ಶ್ರೀ ದೇವಿಯನ್ನು ಮನದಲ್ಲಿ ಸತತ ನೆನೆದರೆ ಜೀವನದಲ್ಲಿ ಬಂದ ಸಂಕಷ್ಟಗಳು ದೂರವಾಗಲು ಶ್ರೀದೇವಿಯ ಮೇಲೆ ಭಕ್ತಿ ಇಟ್ಟು ಧಾರ್ಮಿಕತೆಯಲ್ಲಿ ತೊಡಗಿದರೆ ಉತ್ತಮ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ ಎಂದರು.
ಆಲಮೇಲ- ಸಿಂದಗಿ ಮೂರಝಾವಧೀಶ್ವರ ಸಂಸ್ಥಾನಮಠದ ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದರು. ಸಿಂದಗಿಯ ವೇ ಬ್ರ ಶ್ರೀ ಚಿದಾನಂದ ಆಚಾರ್ಯರು ದೇವಿ ಪಾರಾಯಣಿಕರಾಗಿದ್ದರು
ಮಲ್ಲಾ ಬಿ ಆದಿಶಕ್ತಿ ಕಾಳಿಕಾಂಬಾ ಶಕ್ತಿ ಪೀಠದ ನಿಂಗಣ್ಣ ಶರಣರು, ಮೋರಟಗಿ ರವಿ ವಿಭೂತಿ .ಭಾಗೇಶ ಹೂಗಾರ ಸಂಗೀತ ಸೇವೆ ಮಾಡಿದರು.
ವಿಶ್ವಕರ್ಮ ಸಮಾಜದ ಹಿರಿಯ ಜೀವಿ ವಿಶ್ವರಪ್ಪ ಬಡಿಗೇರ ನಂದೀಶನಾಗಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಗ್ರಾಮದ ಅಪಾರ ಭಕ್ತರು ಭಾಗವಹಿಸಿದ್ದರು.



