ಅಂಬೇಡ್ಕರ ಜಯಂತ್ಯುತ್ಸವ ಪೂರ್ವಭಾವಿ ಸಭೆ

0
335

ಸಿಂದಗಿ: ವಿಶ್ವರತ್ನ ಡಾ| ಬಾಬಾಸಾಹೇಬ ಅಂಬೇಡ್ಕರ್ ರವರ 121ನೇ ಜಯಂತ್ಯುತ್ಸವದ ಸಮಿತಿ ರಚಿಸಲು ದಿ. 26 ರಂದು ಸಮಯ 4-00 ಗಂಟೆಗೆ ಪಟ್ಟಣದ ಡಾ ಅಂಬೇಡ್ಕರ್ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ದಸಂಸ ಸಂಚಾಲಕ ಪರಶುರಾಮ ಕಾಂಬಳೆ ತಿಳಿಸಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸತತ 2 ವರ್ಷಗಳಿಂದ ಕೋವಿಡ್-19 ನಿಂದ ಡಾ| ಬಾಬಾಸಾಹೇಬ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಆಗಿರುವುದಿಲ್ಲ. ಆದರಿಂದ ತಾಲೂಕ ಕೇಂದ್ರದಲ್ಲಿ ಮತ್ತು ಗ್ರಾಮಗಳಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ತಾಲೂಕಿನ ದಲಿತ ಸಂಘಟನೆಗಳು ದಲಿತ ನೌಕರ ಸಂಘಟನೆಗಳು ಪ್ರಗತಿಪರ ವಿಚಾರವಾದಿಗಳು, ರೈತ ಮತ್ತು ಕಾರ್ಮಿಕ ಮುಖಂಡರು, ಬಹುಜನ ಸಮಾಜದ ಎಲ್ಲಾ ಹಿರಿಯರು ಈ ಮಹತ್ವದ ಸಭೆಗೆ ಹಾಜರಿದ್ದು ತಮ್ಮ ಅಭಿಪ್ರಾಯವನ್ನು ಸೂಚಿಸಿ ಡಾ.ಬಾಬಾಸಾಹೇಬ ಅಂಬೇಡ್ಕರವರ ಜಯಂತೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲು ಸಹಕರಿಸಬೇಕೆಂದು ಡಿ.ಎಸ್.ಎಸ್.ಸಂಚಾಲಕ ಚಂದ್ರಕಾಂತ ಸಿಂಗೆ, ತಾಲೂಕು ಕ.ಸ.ಪ.ಅಧ್ಯಕ್ಷರು ರಾಜಶೇಖರ ಕೂಚಬಾಳ, ದಲಿತ ಮುಖಂಡರಾದ ಧರ್ಮಣ್ಣ ಎಂಟಮಾನ ಸಂತೋಷ ಮಣ್ಣಿಗೇರಿ, ಶ್ರೀಶೈಲ ಜಾಲವಾದಿ, ಅಶೋಕ ಸುಲ್ಪಿ, ಬಾಲಕೃಷ್ಣ ಚಲವಾದಿ ದಲಿತ ಸೇನೆ ಅಧ್ಯಕ್ಷರು, ಶ್ರೀಕಾಂತ ಸೋಮಜ್ಯಾಳ, ರಾಕೇಶ ಕಾಂಬಳೆ, ಶ್ರೀನಿವಾಸ ಓಲೇಕಾರ, ರವಿ ಅಲಹಳ್ಳಿ, ಮಲಕು ಕೋರಹಳ್ಳಿ, ಮಹೇಶ ಜವಳಗಿ, ಲಗಮು ಕಕ್ಕಳಮೇಲಿ, ಮಲ್ಲು ಎಂಟಮಾನ, ಶ್ರೀಶೈಲ ಬೂದಿಹಾಳ, ರಮೇಶ ಹಚ್ಯಾಳ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.