ಪ್ರಬಂಧ : ಎಲ್ಲರ ಮನೆಯ ದೋಸೆನೂ………!?

Must Read

ಎಲ್ಲರ ಮನೆಯ ದೋಸೇನೂ ತೂತು…ಅಲ್ಲ ತಪ್ಪು ಯಾಕೆ ಗೊತ್ತ ಕೆಲವರ ಮನೆಯ ದೋಸೆಗೆ ತೂತೇ ಇರಲ್ಲ ಯಾಕೆಂದರೆ ದೋಸೆ ಮಾಡುವ ಪದ್ದತಿ ಪ್ರಕಾರ ಮಾಡಿದರೆ ತೂತಾಗಬಹುದು ಆದರೆ ಬೆಳಿಗೆ ದೋಸೆನೇ ಬೇಕೆಂದು ಹಟಮಾಡುವವರಿಗಾಗಿ ತಕ್ಷಣ ಮಾಡಬಹುದಾದ ದೋಸೆಗೆ ಇತ್ತೀಚೆಗೆ ತೂತೇ ಇರಲ್ಲ….

ಎಲ್ಲರ ಮನೆಯ ಮನೆಯ ದೋಸೆಗೆ ತೂತು ಎಂಬ ಮಾತಿಗೂ ನಮ್ಮ ಬದುಕಿಗೂ ಅವಿನಾಭಾವ ಸಂಬಂಧ ಇದೆ.ಎಲ್ಲರ ಮನೆಯಲ್ಲೂ ಸಮಸ್ಯೆಗಳು ಇರುತ್ತವೆ ಸಮಸ್ಯೆ ಇಲ್ಲದ ಮನೆಯಿಲ್ಲ ತೂತು ಇಲ್ಲದ ದೋಸೆ ಇಲ್ಲ.

ಆದರೆ ಎಲ್ಲರ ಮನೆಯ ದೋಸೆ ಒಂದೇ ಆಕಾರ ಇರುವುದಿಲ್ಲ ಕೆಲವರ ಮನೆಯ ದೋಸೆ ತ್ರಿಕೋನ ಚೌಕ ಆಯತ ಹೀಗೆ ಹಲವಾರು ಆಕಾರದಲ್ಲಿ ಇರಬಹುದು.ವೃತ್ತಾಕಾರದಲ್ಲೇ ಇರಬೇಕೆಂಬ ನಿಯಮವಿಲ್ಲ….ಅವರವರ ಮನೆಯ ಸಮಸ್ಯೆ ಒಂದೇ ಬಗೆ ಇರುವುದಿಲ್ಲ.. ದೊಡ್ಡ ಸಮಸ್ಯೆ ಚಿಕ್ಕ ಸಮಸ್ಯೆ ಬಗೆಹರಿಯದ ಸಮಸ್ಯೆ ಬಗೆ ಹರಿದರೂ ಮತ್ತೆ ಮತ್ತೆ ಬರುವ ಸಮಸ್ಯೆ ಸಾಯುವವರೆಗೂ ತಪ್ಪದ ಸಮಸ್ಯೆ. ಹೀಗೆ …ಅದರಂತೆ ಎಲ್ಲರ ಮನೆಯ ದೋಸೆಯ ತೂತು ಕೂಡ ಒಂದೇ ಆಕಾರದಲ್ಲಿ ಇರುವುದಿಲ್ಲ. ಕೆಲವು ತೂತುಗಳು ಚಿಕ್ಕವು ದೊಡ್ಡವು ಇನ್ನೂ ಕೆಲವು ಮುಚ್ಚಿರುತ್ತವೆ.ಹಾಗಾಗಿ ಎಲ್ಲರ ದೋಸೆಗೆ ತೂತುಗಳಿದ್ದರೂ ಒಂದೇ ಬಗೆಯ ತೂತುಗಳು ಇರುವುದಿಲ್ಲ ಅಂದರೆ..ಮನೆಯಲ್ಲಿ ಇರುವವರ ಮನದಲ್ಲಿ ಇರಬಹುದಾದ ಆತಂಕ ಅಹಂಕಾರ ಪ್ರೀತಿ ಕರುಣೆ ಹೀಗೆ ಆದರೆ ಕೆಲವರಿಗೆ ಇದ್ಯಾವುದು ಇರುವುದಿಲ್ಲ ಇರಬೇಕೆಂಬ ನಿಯಮವೇನು ಇಲ್ಲ ಹಲವಾರು ಆಕಾರದ ದೋಸೆಗಳಿದ್ದು ತೂತುಗಳು ಇದ್ದರೂ ಇಲ್ಲದಿದ್ದರೂ ಸಾಕ್ಷಾತ್ಕಾರವೆಂಬ ಚಟ್ಣಿ ಪಲ್ಯೆಯಿಂದ ಸವಿದರೆ ಬದುಕು ಸುಂದರ.. ಎಲ್ಲರ ಮನೆಯಲ್ಲೂ ಇರುವ ಮೂರ್ನಾಲ್ಕು ಜನರಲ್ಲಿ ಮನೆಯೊಂದು ಮೂರು ಬಾಗಿಲು ಮನೆಯಲ್ಲಿ ‌ಮೂವರು ಸಾವಿರಾರು ಕಿಟಕಿ ಬಾಗಿಲುಗಳು ಇರುತ್ತವೆ….

ಈ ದೋಸೆಯ ತೂತಿಗೂ ನಮ್ಮ ಸಂಸಾರಕ್ಕೂ ಸಾಮ್ಯತೆ ಇದೆ. ಅವರೂ ದೋಸೆ ಮಾಡ್ತಾರೆ ಇವರೂ ದೋಸೆಮಾಡ್ತಾರೆ ಅವರೂ ಮದುವೆ ಆಗ್ತಾರೆ ಇವರೂ ಮದುವೆ ಆಗ್ತಾರೆ ಆದರೆ ಅವರಿವರ ಮನೆಯ ದೋಸೆ ಒಂದೇ ಆಕಾರದಲ್ಲಿ ಇರುವುದಿಲ್ಲ ತೂತು ಕೂಡ ಒಂದೇ ಬಗೆ ಇರುವುದಿಲ್ಲ ಎಲ್ಲರ ಮನೆಯ ದೋಸೆ ತೂತೇ ಅಂದರೆ ಎಲ್ಲರ ಮನೆಯ ಸಮಸ್ಯೆ ಒಂದೇ ರೀತಿ ಇರುವುದಿಲ್ಲವೋ ಹಾಗೆ ಎಲ್ಲರ ಮನೆಯ ದೋಸೆ ಒಂದೇ ತರಹ ಹಾಗೂ ಎಲ್ಲರ ಮನೆಯ ದೋಸೆಯ ತೂತುಗಳು ಕೂಡ ಒಂದೇ ತರಹ ಇರಲು ಸಾಧ್ಯವಿಲ್ಲ ಬಗೆಬಗೆಯ ದೋಸೆಗಳು ಬಗೆಬಗೆಯ ಸಮಸ್ಯೆಗಳು ವಿಧವಿಧವಾದ ಭಾವನೆಗಳು ವಿಧವಿಧವಾದ ದೋಸೆಯ ತೂತುಗಳು..

ಆದರೆ ನಮ್ಮ ಸಮಸ್ಯೆ ನಮ್ಮೊಳಗಿನ ಭಾವನೆಗಳು ಬೇರೆ ಯಾರಿಗೂ ತಿಳಿಯಬಾರದೆಂದು ಕೆಲವರು ಮುಖವಾಡ ಧರಿಸಿರುತ್ತಾರೆ ಹಾಗಾಗಿ ಇತ್ತೀಚಿಗೆ ತೂತುಗಳೇ ಇಲ್ಲದ ದೋಸೆ ಮಾಡಲು ಪ್ರಯತ್ನಿಸುತ್ತಿದ್ದಾರೆ.ಎಷ್ಟೇ ಪ್ರಯತ್ನ ಮಾಡಿದರೂ ದೋಸೆಗೆ ತೂತುಗಳು ಬಹಳಷ್ಟು ಇರದಿದ್ದರೂ ಕೆಲವಂದಿಷ್ಟಾದರೂ ಇರಲೇ ಬೇಕು ಇರುತ್ತವೆ ಕೂಡ. ತೂತೇ ಇಲ್ಲದ ದೋಸೆ ಇರಲು ಸಾಧ್ಯವಿಲ್ಲ ಎಂದಾದರೆ ಸಮಸ್ಯೆ ಇಲ್ಲದ ಬದುಕೇ ಇಲ್ಲ….ದೋಸೆಯ ಆಕಾರ ಬದುಕಿಗೆ ಹೋಲಿಕೆಯಾದರೆ ತೂತುಗಳು ಆ ಬದುಕಲ್ಲಿ ಬರುವ ಸಮಸ್ಯೆಗಳನ್ನು ತಿಳಿಸುತ್ತವೆ.ಒಂದು ಬದುಕು ಹಲವಾರು ಸಮಸ್ಯೆಗಳು ಒಂದು ದೋಸೆ ಅನೇಕ ತೂತುಗಳು ಸಾಧ್ಯವಾದಷ್ಟು ತೂತುಗಳು ಕಡಿಮೆ ಇರುವ ದೋಸೆ ಆಗಲಿ.ಅಂದರೆ ಸಮಸ್ಯೆಗಳು ಕಡಿಮೆ ಇರುವಂತೆ ನಮ್ಮ ಬದುಕನ್ನು ರೂಪಿಸಕೊಳ್ಳಬೇಕಾಗುತ್ತದೆ.ಹಾಗಂತ ತೂತುಗಳೇ ಇಲ್ಲದ ದೋಸೆ ಸಾಧ್ಯವಿಲ್ಲ ಅದು ದೋಸೆ ಅನಿಸುವುದಿಲ್ಲ ಬದುಕು ಕೂಡ ಹಾಗೇನೆ…

ಮಧುನಾಯ್ಕ ಲಂಬಾಣಿ
ಹೂವಿನಹಡಗಲಿ
9902992912

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group