ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೂ ಎನ್ನುವ ಮಾತು ಬರಬರುತ್ತಾ ಗಂಡಹೆಂಡತಿ ಜಗಳ ಉಂಡು ಮಲಗಿದ ಮೇಲೂ ಎನ್ನುವಂತಾಗಿದೆ. ಹಾಗಂತ ನಾನು ನಮ್ಮ ಬಗ್ಗೆ ಹೇಳ್ತಾಯಿಲ್ಲ ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರುವ ವರದಿಗಳು ಮತ್ತು ನಮಗೆ ಗೊತ್ತಿರುವ ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳು ಕಾರಣ.
ಗಂಡ ಹೆಂಡತಿಯ ಮಧ್ಯೆ ಜಗಳ ಸರ್ವೇ ಸಾಮಾನ್ಯ ಗಂಡನ ಜೊತೆ ಜಗಳ ಆಡದಿದ್ದರೆ ಕೆಲವು ಹೆಂಗಸರಿಗೆ ಊಟ ಅರಗಲ್ಲ. ಅದೇ ರೀತಿ ಹೆಂಡತಿಯ ಬೈಯದಿದ್ದರೆ ಗಂಡನಿಗೆ ಸಮಾಧಾನ ಇರಲ್ಲ ಅಂಥ ಪರಿಸ್ಥಿತಿಗೆ ಕೆಲವರು ತಲುಪಿ ಬಿಟ್ಟಿರುತ್ತಾರೆ ಅಂದರೆ ಸಂಸಾರವೆಂಬ ಪರ್ವತದ ಪೀಕಿಗೆ ತಲುಪಿರುತ್ತಾರೆ. ಕೆಲವರು ಜಗಳವಾಡುತ್ತಲೇ ಮುಂಜಾನೆ ಎದ್ದರೂ ಅವರವರ ಕೆಲಸ ಸಾಗುತ್ತಲೇ ಜೊತೆಜೊತೆಯಲಿ ಜಗಳನೂ ಮುಂದುವರೆಸಿರುತ್ತಾರೆ ಹೆಂಡತಿ ಬೈಯುತ್ತಲೇ ಅಡುಗೆ ಮಾಡುತ್ತಾಳೆ ಬೈಯುತ್ತಲೇ ಊಟ ಬಡಿಸುತ್ತಾಳೆ. ಒಂದುವೇಳೆ ಅವಳೇನಾದರೂ ಬೈಯುವುದ ನಿಲ್ಲಿಸಿದರೆ ಗಂಡನಿಗೆ ಅನುಮಾನ ಬಂದು ಯಾಕೆ ಬೈಯುವುದ ನಿಲ್ಲಿಸಿದಳೆಂದು ಅಡುಗೆ ಮನೆಗೆ ಹೋಗಿ ನೋಡಿ ಯಾಕೆ ಏನಾಯಿತು ಸಮ್ನಾಗಿಬಿಟ್ಟೆ ಅಂದ್ರೆ ಆಕೆ ಅಳುತ್ತಿರುವುದನ್ನು ನೋಡಿ ಭಯಪಡುವುದು ಉಂಟು. ಆದರೆ ಗಂಡ ಹೆಂಡತಿಯ ಬೈಗುಳದ ಬಿರುಗಾಳಿಯ ಮಧ್ಯೆ ಸಿಕ್ಕು ಹಾರಿಹೋಗುತ್ತಿರುವಾಗ ಆಗಾಗ ಬದುಕಲು ಒಂದೋ ಎರಡೊ ಮೆದು ಮಾತಿನ ಆಸರೆ ಪಡೆಯಲು ಪ್ರಯತ್ನಿಸುತ್ತಾನೆ. ಇಷ್ಟೆಲ್ಲಾ ಆದಮೇಲೆ ಗಂಡ ಕೆಲಸಕ್ಕೆ ಹೋದಮೇಲೆ ಕೆಲವು ಹೆಂಗಸರು ತಕ್ಷಣ ಪಕ್ಕದ ಮನೆಯವರ ಜೊತೆ ಮಾತಿಗೆ ಜಾಯಿನ್ ಆಗಿ ನನ್ನ ಗಂಡ ನನ್ನ ತುಂಬಾ ಪ್ರೀತಿ ಮಾಡ್ತಾನೆ ಕಣ್ರೀ ಅಂದಾಗ ಅದು ಹೇಗೆ ಹೇಳ್ತೀರಾ ಅಂದ್ರೆ ನಾನು ಎಷ್ಟೇ ಬೈದರೂ ಮರು ಮಾತಾಡುವುದೇ ಇಲ್ಲ ಅಂತಾರೆ!
ಇನ್ನೂ ಕೆಲವು ಹೆಂಡತಿಯರು ಗಂಡ ಹೋದಮೇಲೆ ಅಯ್ಯೋ ನಾನ್ಯಾಕೆ ಏನೇನೊ ಅಂದು ಬಿಟ್ಟೆ ಪಾಪ ಮನಸಿಗೆ ನೋವು ಮಾಡಿಕೊಂಡ್ರೋ ಏನೋ ಅಂತ ಆಫೀಸಿಗೆ ಹೋದ ಗಂಡನಿಗೆ ಫೋನ್ ಮಾಡಿ ರೀ…. ಸಾರೀರೀ…ಬೇಜಾರಾಯ್ತಾ…? ಎನ್ನುತ್ತಾರೆ
ಇಲ್ವಲ್ಲ….ಯಾಕೆ ಏನಾಯ್ತು…?
ನಾನು ನಿಮಗೆ ಹಾಗೆಲ್ಲ ಬೈಯಬಾರದಿತ್ತು ಸಾರಿರೀ..
ನೀನು ನನಗೆ ಬೈದಿಯಾ…?
ಹೌದು….
ನನಗೇನೂ ಕೇಳಿಸಲೇ ಇಲ್ಲ
ಯಾಕೆ…?
ನಾನು ಬೆಳಿಗ್ಗೆ ಎದ್ದ ಕೂಡಲೇ ಏರ್ ಫೋನ್ ಹಾಕಿಕೊಳ್ಳುವ ಅಭ್ಯಾಸ ಆಗಿದೆ ಕಣೆ…ಅನ್ನೋದ !?
ಗಂಡ ಸಂಜೆ ಮನೆಗೆ ಬಂದು ಅರ್ಧ ಗಂಟೆಯ ನಂತರ ಅಥವಾ ಬರುತ್ತಿದ್ದಂತೆಯೇ ಮತ್ತೆ ಜಗಳ ಈ ಜಗಳ ಮುಂಜಾನೆಯಿಂದ ರಾತ್ರಿ ಮಲಗಿದ ಮೇಲೂ ಕಂಟಿನ್ಯೂ ಆಗಿರತ್ತೆ…ಇದು ತಿಂಗಳುಗಟ್ಟಲೆ ವರ್ಷಗಟ್ಟಲೇ ಜಗಳಾಡುತ್ತಲೇ ಮಕ್ಕಳಾಗ್ತಾವೆ ಜಗಳಾಡುತ್ತಲೇ ಮಕ್ಕಳನ್ನು ಬೆಳೆಸಿ ಒಳ್ಳೆಯ ಶಿಕ್ಷಣ ಕೊಡಿಸಿ ಮದುವೆ ಮಾಡಿ,
ನೋಡಮ್ಮ ನಾನು ನಿಮ್ಮ ತಂದೆ ಮೂವತ್ತು ವರ್ಷ ಸುಖ ಸಂಸಾರ ಮಾಡಿದ್ದೇವೆ ನೀನು ಕೂಡ ನಿನ್ನ ಗಂಡನ ಜೊತೆ ಹೀಗೆ ನೂರು ವರ್ಷ ಸುಖವಾಗಿ ಬಾಳು ಎಂದು ತಾಯಿ ಹೇಳಿದರೆ,ಗಂಡ ಅಳಿಯನಿಗೆ ಸಂಸಾರದಲ್ಲಿ ಸಾವಿರ ಬರತ್ತೆ ಸಾವಿರ ಹೋಗತ್ತೆ ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ ನನ್ನ ನೋಡಿ ಕಲಿತು ಕೊಳ್ಳಿ ಎಂದು ಅಳಿಯನ ಕೈಗೆ ಏರ್ ಫೋನ್ ಕೊಟ್ಟಿದ್ದು!!
ಕೆಲವರು ಜಗಳ ಆಡುವುದೇ ಇಲ್ಲ ಯಾಕೆ ಅಂದ್ರೆ ಗಂಡ ಬೈಸಿಕೊಳ್ಳಲು ಮತ್ತೊಬ್ಬರನ್ನು ಹುಡುಕಿರುತ್ತಾನೆ ಹೆಂಡತಿ ಬೈಯಲು ಇನ್ನೊಬ್ಬನನ್ನು ಸೈಡಿಗೆ ಇಟ್ಟಿರುತ್ತಾಳೆ ಇವನು ಹೊರಗೆ ಹೋದಮೇಲೆ ಫೋನಿನಲ್ಲಿ ಅವನಿಗೆ ಇವಳು ಬೈಯುವುದು.ಹೊರಗೆ ಹೋದವನು ಅವಳ ಬಳಿ ಬೈಸಿಕೊಳ್ಳಲು ಇವನು ಹೋಗುವುದು ಟೋಟಲಿ ಗಂಡು ಹೆಣ್ಣಿನ ಸಂಬಂಧ ಅಂದ್ರೆ ಜಗಳ….
ಇರಲಿ ಬಿಡಿ ಜಗಳ ಆದರೆ ಅದು ಉಂಡು ಮಲಗಿದ ಮೇಲೂ ಆಗುವ ಜಗಳ ಸಂಸಾರ ನಾಶಕ್ಕೆ ದಾರಿಯಾಗುತ್ತದೆ. ಜಗಳ ಬಂದಾಗ ಇಬ್ಬರಲ್ಲಿ ಯಾರಾದರೊಬ್ಬರು ಸೈಲೆಂಟ್ ಆಗಿಬಿಡಬೇಕು ಅವಳು ಅಥವಾ ಅವನು ಮಾತನಾಡದೇ ಮೌನವಾಗಬೇಕು ತಾನು ಎಲ್ಲಿ ತಪ್ಪು ಮಾಡಿದೆ ಎಂದು ಅರಿತು ತಿದ್ದಿಕೊಂಡು ಮುನ್ನಡೆಯಬೇಕು ಅವನು ಅವಳಲ್ಲಿ ಕ್ಷಮೆ ಕೇಳಬೇಕು ಅವಳು ಅವನಲ್ಲಿ ಕ್ಷಮೆ ಕೇಳಬೇಕು ಆಗ ಮಾತ್ರ ಸುಖ ಸಂಸಾರ.. ಅಲ್ಲವೆ ? ( ಹಾಗೇ ಸುಮ್ಮನೆ)
ಮಧುನಾಯ್ಕ ಲಂಬಾಣಿ
ಹೂವಿನ ಹಡಗಲಿ
9611228929

