ಕನಾ೯ಟಕ ರಾಜ್ಯ ಬರಹಗಾರರ ಸಂಘದ ಅರಸೀಕೆರೆ ತಾ. ಅಧ್ಯಕ್ಷರಾಗಿ ಶಿಕ್ಷಕರು ಆನಂದ ಕಾಳೇನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷರು ಮಧುನಾಯ್ಕಲಂಬಾಣಿ ತಿಳಿಸಿದಾರೆ.
ಆನಂದ್ ಕಾಳೇನಹಳ್ಳಿ ಅವರು ಹಾಸನ ಜಿಲ್ಲೆ ಅರಸೀಕೆರೆ ತಾ ಕಾಳೇನಹಳ್ಳಿ ಗ್ರಾಮದಲ್ಲಿ 20/07/1976 ಜನಿಸಿದರು.
ಬಿ ಎ, ಬಿ ಇಡಿ ಪದವಿಧರರು. 2002 ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿ ಹಾಲಿ ಅರಸೀಕೆರೆ ತಾಲೂಕು ಮಾಡಲು ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರು.
ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದು ಸಾಕಷ್ಟು ಕವಿತೆಗಳನ್ನು ಬರೆದು ಪುಸ್ತಕ ಪ್ರಕಟಣೆಯತ್ತ ಹೆಜ್ಜೆ ಹಾಕಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ಸಾಹಿತ್ಯ ಬಳಗದಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡು ಕನ್ನಡ ನಾಡು ನುಡಿಗಾಗಿ ಏನಾದರು ಕೊಡುಗೆ ನೀಡಿ ಭಾಷೆ ಉಳಿಸಿ ಬೆಳೆಸುವ ಕಾರ್ಯಮಾಡಬೇಕು ಎಂದು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಾಸನ ಜಿಲ್ಲಾ ಅಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು ಅಭಿನಂದಿಸಿ, ಆನಂದ ಕಾಳೇನಹಳ್ಳಿ ಅವರಿಂದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಆಗಲೆಂದು ಹಾರೈಸಿ ಶುಭ ಕೋರಿದ್ದಾರೆ.