ಪಂಚಮಸಾಲಿಗಳಿಗೆ ನಾಯಿ ಅಂದ ರಮೇಶ ಜಾರಕಿಹೊಳಿ

Must Read

ಪಂಚಮಸಾಲಿ ಶಕ್ತಿ ತೋರಿಸಬೇಕಾಗುತ್ತದೆ – ನಿಂಗಪ್ಪ ಫಿರೋಜಿ

ಮೂಡಲಗಿ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪಂಚಮಸಾಲಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ರಮೇಶ ಜಾರಕಿಹೊಳಿ ಅವರು ಉತ್ತರಿಸುವ ಸಂದರ್ಭದಲ್ಲಿ ಪಂಚಮಸಾಲಿಗಳ ಹೋರಾಟದಲ್ಲಿ ಕೆಲವು ನಾಯಿಗಳಿವೆ ಎಂದು ನಾಲಿಗೆ ಹರಿಬಿಟ್ಟಿರೋದನ್ನು ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಕಠೋರವಾಗಿ ಖಂಡಿಸುತ್ತದೆ ಎಂದು ಪಂಚಮಸಾಲಿ ಸಂಘಟನೆಯ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಫಿರೋಜಿ ಹೇಳಿದರು.

ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿಯವರು ಕೆಲವು ನಾಯಿಗಳೆಂದು ಯಾರಿಗೆ ಹೇಳಿದ್ದಾರೆಂದು ಸ್ಪಷ್ಟಪಡಿಸಬೇಕು ಇಲ್ಲವಾದರೇ ಬರುವ ದಿನಗಳಲ್ಲಿ ಪಂಚಮಸಾಲಿ ಸಮುದಾಯವನ್ನು ಎದುರು ಹಾಕಿಕೊಂಡು ರಾಜಕೀಯ ಮಾಡಬೇಕಾಗುತ್ತದೆ. ಗೋಕಾಕ ಮತಕ್ಷೇತ್ರದಲ್ಲಿ ಪಂಚಮಸಾಲಿಗಳ ಮತಗಳನ್ನು ಪಡೆದುಕೊಂಡು ಗೆದ್ದಿರುವ ರಮೇಶ ಜಾರಕಿಹೊಳಿ ಯಾವತ್ತು ಕೂಡಾ ಪಂಚಮಸಾಲಿಗಳ 2ಎ ಹೋರಾಟಕ್ಕೆ ಬೆಂಬಲಿಸಿ ವಿಧಾನಸೌಧದಲ್ಲಿ ಸರ್ಕಾರವನ್ನು ಒತ್ತಾಯಿಸಿಲ್ಲ. ಇಂತಹವರು ನಮ್ಮ ಸಮಾಜದ ಜನರಿಗೆ ಕೆಲವು ನಾಯಿಗಳು ಎಂದು ಹೇಳಿರುವುದು ಖಂಡನೀಯ. ಕೂಡಲೇ ರಮೇಶ ಜಾರಕಿಹೋಳಿ ನಾಯಿಗಳು ಯಾರು ಎಂದು ತೋರಿಸಬೇಕು ಇಲ್ಲವಾದರೇ ಇಡೀ ಪಂಚಮಸಾಲಿ ಸಮಾಜದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಅರಭಾವಿ ಮತಕ್ಷೇತ್ರ ಹಾಗೂ ಗೋಕಾಕ ಮತಕ್ಷೇತ್ರದಲ್ಲಿ ಪಂಚಮಸಾಲಿಗಳು ಯಾವತ್ತು ಕೂಡಾ ಜಾತಿ ಆಧಾರಿತ ರಾಜಕಾರಣವನ್ನು ಮಾಡಿಲ್ಲ ಒಂದು ವೇಳೆ ಪಂಚಮಸಾಲಿಗಳು ರಾಜ್ಯದಲ್ಲಿ ಜಾತಿ ಆಧಾರಿತ ರಾಜಕಾರಣ ಮಾಡಲಿಕ್ಕೆ ಹೊರಟರೆ ಕನಿಷ್ಠ 60 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನೇ ಗೆಲ್ಲಿಸುವಷ್ಟು ಮತಗಳನ್ನು ನಾವು ಹೊಂದಿದ್ದಾರೆ ಎನ್ನುವುದನ್ನು ಜನಪ್ರತಿನಿಧಿಗಳು ನೆನಪಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಪಂಚಮಸಾಲಿ ಸಂಘಟನೆಯ ರಾಜ್ಯ ಸಮಿತಿಯ ಕಾರ್ಯದರ್ಶಿ ರಾವಸಾಬ ಬೆಳಕೂಡ ಮಾತನಾಡಿ, ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಲ್ಲಿ ನಮ್ಮ ಸಮಾಜದ ಜನರು ರಾಜಕೀಯ ಮಾಡುವ ಶಕ್ತಿ ನಮ್ಮಲ್ಲಿದೆ. ಆದರೂ ಕಳೆದ 20 ವರ್ಷಗಳಿಂದ ಪ್ರಾಮಾಣಿಕವಾಗಿ ಮತ ನೀಡಿ ಗೆಲ್ಲಿಸಿದವರಿಗೆ ನಾಯಿ ಎಂದು ಹೇಳಿದ ರಮೇಶ ಜಾರಕಿಹೊಳಿ ಪಂಚಮಸಾಲಿಗಳನ್ನು ನೆನೆಸಿಕೊಳ್ಳಬೇಕು. ನಮ್ಮ ಭಾಗದಲ್ಲಿ ಪಂಚಮಸಾಲಿ ಸಮಾಜದ ಅಧಿಕಾರಿಗಳನ್ನು ತರುವಲ್ಲಿ ಕೂಡಾ ತಾರ್ಯತಮ್ಯ ಮಾಡುತ್ತಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಮಸಾಲಿ ಸಂಘಟನೆ ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷ ದೀಪಕ್ ಜುಂಜರವಾಡ ಹಾಗೂ ಸಮಾಜದ  ಅರಭಾವಿ ಮತಕ್ಷೇತ್ರದ ಕಾರ್ಯಾಧ್ಯಕ್ಷ ಡಾ.ಕೆ.ಎಚ್.ನಾಗರಾಳ ಮಾತನಾಡಿ, ರಮೇಶ ಜಾರಕಿಹೊಳಿ ಅವರ ಹೇಳಿಕೆಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಾ ಯುವ ಘಟಕ ಅಧ್ಯಕ್ಷ ಸಂಗಮೇಶ ಕೌಜಲಗಿ, ಸುರೇಶ ಸಕ್ಕರೆಪ್ಪಗೊಳ, ಬಿ ಆರ್ ತರಕಾರ ಇದ್ದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group