spot_img
spot_img

ಪೆಬ್ರುವರಿ 3 ರಂದು ಬೈಲಹೊಂಗಲ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ

Must Read

- Advertisement -

ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಆಯ್ಕೆ

ಬೈಲಹೊಂಗಲ: ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಬೈಲಹೊಂಗಲ ತಾಲೂಕು 7ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಪೆಬ್ರುವರಿ 3 ರಂದು ನಡೆಯಲಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ಡಾ.ಶಾಂತಿನಾಥ ದಿಬ್ಬದ ಆಯ್ಕೆಯಾಗಿದ್ದಾರೆ ಎಂದು ಬೈಲಹೊಂಗಲ ಕಸಾಪ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಪಟ್ಟಣದಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಿ ಮಂಡಳಿ ಸದಸ್ಯರಾದ ಶಿವರಂಜನ ಬೋಳನ್ನವರ, ಈಶ್ವರ ಹೋಟಿ, ಮೋಹನ ಬಸನಗೌಡ ಪಾಟೀಲ, ಎಂ.ಡಿ ನಂದೆನ್ನವರ, ಬಿ.ಕೆ. ತಲ್ಲೂರ ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಮೆಳವಂಕಿ, ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಪದಾಧಿಕಾರಿಗಳಾದ ಭೀಮಪ್ಪ ಕಸಾಳೆ, ಶ್ರೀಕಾಂತ ಉಳ್ಳೇಗಡ್ಡಿ, ದುಂಡಪ್ಪ ಗರಗದ, ಅನಿಲ ರಾಜನ್ನವರ, ಲಕ್ಷ್ಮೀ ಮುಗಡ್ಲಿಮಠ, ಶಶಿಕಲಾ ಯಲಿಗಾರ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಈಶ್ವರ ಉಳ್ಳೇಗಡ್ಡಿ, ಉಪಾಧ್ಯಕ್ಷರಾದ ಉದಯ ಬೆಳಗಾವಿ, ಕಾರ್ಯದರ್ಶಿಗಳಾದ ಗುರುದೇವ ಮೂಲಿಮನಿ ಉಪಸ್ಥಿತರಿದ್ದರು. ರಾಜು ಹಕ್ಕಿ ಸ್ವಾಗತಿಸಿ ನಿರೂಪಿಸಿದರು. ರಾಮಕೃಷ್ಣ ಹೋಟಕರ ವಂದಿಸಿದರು.

ಸಮ್ಮೇಳನಾಧ್ಯಕ್ಷರ ಸಂಕ್ಷಿಪ್ತ ಪರಿಚಯ:

ಡಾ. ಶಾಂತಿನಾಥ ಮಲ್ಲಪ್ಪ ದಿಬ್ಬದ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದವರು. ಗುಲಬರ್ಗಾ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

- Advertisement -

ಕರ್ನಾಟಕ ವಿಶ್ವವಿದ್ಯಾಲಯದ ಆದಿಕವಿ ಪಂಪ ಅಧ್ಯಯನ ಪೀಠದ ಸ್ಥಾಪಕ ಸಂಯೋಜಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇವರು 15 ಪ್ರಾಧ್ಯಾಪಕರಿಗೆ ಪಿಎಚ್.ಡಿ ಹಾಗೂ 20 ಪ್ರಾಧ್ಯಾಪಕರಿಗೆ ಎಂ.ಫಿಲ್ ಮಾರ್ಗದರ್ಶನ ಮಾಡಿದ್ದಾರೆ. ನೂರಾರು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.

ಪಂಪಭಾರತ:ಸಾಂಸ್ಕೃತಿಕ ಅಧ್ಯಯನ (ಪಿಎಚ್‌ಡಿ ಮಹಾಪ್ರಬಂಧ), ವಾಗ್ದೇವಿಯ ಭಂಡಾರದ ಮುದ್ರೆ, ಆಗಮಿಕ, ಜೀವಪರ ಜನಪರ, ಮಹಾಕವಿ ಪಂಪ ಮತ್ತು ಅವನ ಕೃತಿಗಳು, ಜೈನ ಸಂಸ್ಕೃತಿ ಸಮೀಕ್ಷೆ, ಜೈನ ಪುರಾಣಗಳ ಸಂದೇಶ, ಅಭಿನವ ಭಾರತ, ಅಭಿನವ ಗದಾಯುದ್ಧ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟ ಟೀಕಾ, ಸಮಸ್ತ ಭಾರತ, ನಾಗಚಂದ್ರ ಸಂಪುಟ, ಸರ್ವಜ್ಞ, ನಾಗಚಂದ್ರ ಸಂಪುಟ, ಸುವರ್ಣ ಪದ್ಮ, ಧವಲವಾಣಿ, ಶಾಂತಿಸಂದೇಶ, ವೈಚಾರಿಕ ಪ್ರಬಂಧಗಳು, ರಾಮಚಂದ್ರ ಚರಿತ ಪುರಾಣ ಸಂಗ್ರಹ, ವೈಜ್ಞಾನಿಕ ಪ್ರಬಂಧಗಳು, ಜ್ಞಾನಗಂಗಾ ಇತ್ಯಾದಿಗಳು ಇವರ ಸಂಪಾದಿತ ಕೃತಿಗಳು. ಹೊಯ್ಸಳ ದೇವಾಲಯಗಳು, ಧರ್ಮಕೀರ್ತಿ, ಪಂಪ: ವ್ಯಷ್ಟಿ-ಸಮಷ್ಟಿ ಇವರ ಅನುವಾದಿತ ಕೃತಿಗಳಾಗಿವೆ.

ಡಾ.ಶಾಂತಿನಾಥ ದಿಬ್ಬದ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಅನೇಕ ವಿಚಾರ ಸಂಕಿರಣ, ಸಮ್ಮೇಳನ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ದೂರದರ್ಶನ ಹಾಗೂ ಆಕಾಶವಾಣಿಗಳಲ್ಲಿ ಇವರ ಸಾಕಷ್ಟು ಕಾರ್ಯಕ್ರಮಗಳು ಬಿತ್ತರಗೊಂಡಿವೆ.

ಅಲ್ಲದೇ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ, ಕೆ.ಎ.ಎಸ್ ಹುದ್ದೆಗಳ ಸದಸ್ಯ ಸಮಿತಿಯ ವಿಷಯ ತಜ್ಞರು, ಪ್ರಮುಖ ವಿಶ್ವವಿದ್ಯಾಲಯಗಳ ವಿವಿಧ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಸ್ನಾತಕ/ಸ್ನಾತಕೋತ್ತರ ಕನ್ನಡ ಪಠ್ಯಪುಸ್ತಕಗಳ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ.

ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2011), ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಗೊಮ್ಮಟೇಶ ಪುರಸ್ಕಾರ, ಡಾ. ಆ.ನೇ. ಉಪಾಧ್ಯೆ ಸಂಶೋಧನಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ದತ್ತಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪುರಸ್ಕಾರಗಳು ಲಭಿಸಿವೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group