ಮೂಡಲಗಿ:-ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಶ್ರದ್ದೆಯಿಂದ ಪುಸ್ತಕವನ್ನು ಓದಿದರೆ ಜ್ಞಾನವನ್ನು ಗಳಿಸಬಹುದಾಗಿದೆ ಮತ್ತು ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಂಡರೆ ಸಮಾಜದಲ್ಲಿ ಸುಸಂಸ್ಕೃತರಾಗಿ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಗೋಕಾಕ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಆರ್ ಎಲ್ ಮಿರ್ಜಿ ಹೇಳಿದರು.
ಪಟ್ಟಣದ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ “ಸ್ನೇಹ ಸಿಂಚನ’’ಎಂಬ ಪದವಿ
ಪೂರ್ವ ಹಾಗೂ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ ಮನ್ನಿಕೇರಿಯವರು ಮಾತನಾಡಿ,ಇದೇ ತಾಲ್ಲೂಕಿನಲ್ಲಿ ಹುಟ್ಟಿ ಇದೇ ಸಂಸ್ಥೆಯಲ್ಲಿ ಕಲಿತು ಇದೇ ಸಂಸ್ಥೆಗೆ ಅತಿಥಿಯಾಗಿ ವೇದಿಕೆಯನ್ನು ಹಂಚಿಕೊಂಡಿರುವುದಕ್ಕೆ
ಹೆಮ್ಮೆ ಪಟ್ಟರು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪ್ರಗತಿ ಪಡಿಸುವುದರ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.
ಮೂಡಲಗಿಯ ಆರಕ್ಷಕ ಠಾಣೆಯ ಪಿ ಎಸ್ ಆಯ್ ರಾಜು ಪೂಜೇರಿಯವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅತಿಯಾಗಿ ಮೊಬೈಲ್ ಬಳಕೆ
ಮತ್ತು ದುಷ್ಛರಿಂದ ದೂರವಿದ್ದರೆ ಜೀವನದಲ್ಲಿ ಏನು
ಬೇಕಾದರು ಸಾದಿಸಬಹುದು ಎಂದು ಹೇಳಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವ್ಹಿ. ಆರ್ ಸೋನವಾಲ್ಕರವರು ಮಾತನಾಡಿ,ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ
ವಿದ್ಯಾರ್ಥಿಗಳಲ್ಲಿ ಚೈತನ್ಯವನ್ನು ಮೂಡಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಅದೇ ರೀತಿ ಸಂಸ್ಥೆಯ ಉಪಾಧ್ಯಕ್ಷರಾದ ಆರ್. ಪಿ. ಸೋನವಾಲ್ಕರ, ನಿರ್ದೇಶಕರಾದ ವ್ಹಿ. ಎ. ಸೋನವಾಲ್ಕರ, ಎ. ವ್ಹಿ. ಹೊಸಕೋಟಿ, ಎಸ್. ಎಮ್. ಸೊನವಾಲ್ಕರ, ಎ. ಆಯ್. ಸತರಡ್ಡಿ, ಎಸ್. ವ್ಹಿ. ಹೊಸೂರರವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಎಮ್ ಎಸ್. ಪಾಟೀಲರವರು
ಸ್ವಾಗತಿಸಿದರು, ನಿರೂಪಣೆ ಎಚ್. ಡಿ. ಚಂದರಗಿ,ವರದಿ ವಾಚನ ಎಸ್. ಕೆ. ಹಿರೇಮಠ, ಸಾಧಕ ವಿದ್ಯಾರ್ಥಿಗಳ ಸನ್ಮಾನ ಬಿ. ಜಿ. ಗಡಾದ, ಸಿ. ಎಸ್. ಕಾಡಪ್ಪಗೋಳರವರು ವಂದಿಸಿದರು