Homeಸುದ್ದಿಗಳುಸಮಾಜದಲ್ಲಿ ಜಾಗೃತಿ ಮೂಡಿಸಿದ ಹಡಪದ ಅಪ್ಪಣ್ಣನವರು - ಪ್ರೊ. ಲಂಕೆಪ್ಪನವರ

ಸಮಾಜದಲ್ಲಿ ಜಾಗೃತಿ ಮೂಡಿಸಿದ ಹಡಪದ ಅಪ್ಪಣ್ಣನವರು – ಪ್ರೊ. ಲಂಕೆಪ್ಪನವರ

ಮೂಡಲಗಿ – ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿಯ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಅಪ್ಪಣ್ಣನವರು ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಾಮಾಜಿಕ ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು ಎಂದು ಉಪನ್ಯಾಸಕ ಪ್ರೊ. ಸುರೇಶ ಲಂಕೆಪ್ಪನವರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಹಾಗೂ ಹಡಪದ ಸಮಾಜದ ಸಹಯೋಗದಲ್ಲಿ ಪಟ್ಟಣದ ಕೆ ಇ ಬಿ ಪ್ಲಾಟ್ ಹತ್ತಿರದ ಅಪ್ಪಣ್ಣ ದೇವಾಲಯದಲ್ಲಿ “ವಚನ ಶ್ರಾವಣ” ಕಾರ್ಯಕ್ರಮದ ನಿಮಿತ್ತವಾಗಿ ಹಡಪದ ಅಪ್ಪಣ್ಣನವರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಅಪ್ಪಣ್ಣನವರ ವಚನಗಳು ಲಾಲಿತ್ಯ, ಗುರು, ಲಿಂಗ, ಜಂಗಮ ಮತ್ತು ನಿಷ್ಠೆಯಂತಹ ವಿಷಯಗಳನ್ನು ಒಳಗೊಂಡಿವೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ.ಅವರ ವಚನಗಳು ವ್ಯಕ್ತಿಯು ತನ್ನ ಜೀವನದಲ್ಲಿ ಒಳ್ಳೆಯ ನಡೆನುಡಿಯನ್ನು ಅಳವಡಿಸಿಕೊಂಡು ಬಾಳಲು ಬೇಕಾದ ರೀತಿನೀತಿಗಳನ್ನು ಹೇಳುತ್ತವೆ. ಒಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಇಂತಹ ಸತ್ಸಂಗ, ಸಂತರ ಸಹವಾಸವನ್ನು ಮಾಡಿದರೆ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.

 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷ ಶಿವಬಸು ಸುಣದೋಳಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ನಾವು ಸದಾ ಬೆನ್ನೆಲುಬು ಆಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ .ಸಾ .ಪ ಅಧ್ಯಕ್ಷ ಡಾ.ಸಂಜಯ .ಶಿಂದಿಹಟ್ಟಿ, ಬಿ .ವಾಯ್. ಶಿವಾಪುರ, ಎ. ಎಚ್. ಒಂಟಗೋಡಿ, ಶಿವಕುಮಾರ ಕೋಡಿಹಾಳ, ಸಲಬನ್ನವರ, ಶಂಕರ ಉದಗಟ್ಟಿ, ಲಕ್ಶ್ಮಣ ಉದಗಟ್ಟಿ, ಮಲ್ಲಪ್ಪ ನಾವಿ, ಮಹಾಂತೇಶ ಹಡಪದ , ಸಮಾಜದ ಹಿರಿಯರು ಉಪಸ್ಥಿತರಿದ್ದರು.
ಬಿ .ಆರ್. ತರಕಾರ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group