ವಂಚಿಸಿ ಪತ್ನಿಯ ಕೊಲೆ ಮಾಡಿದವನ ಬಂಧನಕ್ಕೆ ಆಗ್ರಹಿಸಿ ಮನವಿ

0
501

ಸಿಂದಗಿ: ಬೆಂಗಳೂರಿನ ಪ್ರತಿಷ್ಠಿತ ಎಕ್ಸಂಚರ ಕಂಪನಿಯಲ್ಲಿ ಇಂಜಿನೀಯರಾದ ವಿಜಯಪೂರದ ಕು.ದಾನೇಶ್ವರಿ ತಂ. ಅಶೋಕ ಶರ್ಮಾ ಇವಳ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಶಿವಕುಮಾರ ಹಿರನಾಳ ಈತನಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾಲೂಕಾ ಸಮಿತಿ ಪದಾಧಿಕಾರಿಗಳು ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕುಮಾರಿ ದಾನೇಶ್ವರಿ ಅಶೋಕ ಶರ್ಮಾ ಹಾಗೂ ಬದಾಮಿ ತಾಲೂಕಿನ ಶಿವಕುಮಾರ ಚಂದ್ರಶೇಖರ ಹಿರನಾಳ ಇವರು ವಿಜಯಪೂರದಲ್ಲಿ ಪದವಿ ಓದುವ ಸಂದರ್ಭದಲ್ಲಿ ಪ್ರೀತಿಸಿ ಮದುವೆಯಾಗುತ್ತೇನೆ ಎಂದು ಹೇಳಿ ಆತನ ಕುಟುಂಬಸ್ಥರ ಸಹಮತ ಮತ್ತು ಪರವಾನಿಗೆ ಪಡೆದುಕೊಂಡಿದ್ದಾಗಿ ಸುಳ್ಳು ಸುಳ್ಳು ಹೇಳುತ್ತ, ಒಂದು ಅಮಾಯಕ ಹೆಣ್ಣು ಮಗಳ ಜೀವನದ ಬದುಕಿನಲ್ಲಿ ಚೆಲ್ಲಾಟ ಆಡಿ ಅವಳ ಬದುಕು ಹಾಳುಮಾಡಿ ನುಸುಳಿಕೊಳ್ಳುವ ಸಂಚು ಹೂಡಿದಾಗ ಇದನ್ನರಿತ ಕುಮಾರಿ ದಾನೇಶ್ವರಿ ನನ್ನ ಕುಟುಂಬವನ್ನು ಬಿಟ್ಟು ನಿನ್ನನ್ನು ನಂಬಿ ನನ್ನ ಬದುಕು ಹಾಳು ಮಾಡಿಕೊಂಡಿದ್ದೇನೆ. ಕೂಡಲೇ ನನಗೆ ಮದುವೆಯಾಗಿ ಎಂದು ಪರಿಪರಿಯಾಗಿ ಬೇಡಿಕೊಂಡು ಅಳುತ್ತಾ ಒತ್ತಾಯ ಮಾಡಿದಾಗ, ನಾನು ಬೇರೆ ಜಾತಿಯವ ನೀನು ಬೇರೆ ಜಾತಿಯವಳು ಹೀಗಾಗಿ ಮದುವೆ ಆಗಲ್ಲ ನಿನ್ನ ದಾರಿ ನೀನು ನೋಡಿಕೊ ಎಂದು ಬೆದರಿಸಿ ಹೇಳಿದ ಸಂದರ್ಭದಲ್ಲಿ ಕುಮಾರಿ ದಾನೇಶ್ವರಿ ನಿನ್ನನ್ನೆಡ ಕಾನೂನು ಪ್ರಕಾರ ಮದುವೆಯಾಗುತ್ತೇನೆ ಎಂದು ಅಳುತಾ ರಂಪಾಟ ಮಾಡಿದ್ದರಿಂದ ಆರೋಪಿ ಶಿವಕುಮಾರ ಇದಕ್ಕೆ ಪರ್ಯಾಯ ಹೊಂಚುಹಾಕಿ ಇವಳಿಗೆ ಕೊಲೆ ಮಾಡುವುದೊಂದೆ ಸೂಕ್ತವಾದ ದಾರಿ ಎಂದು ತಿಳಿದು, ಸಹಚರರೊಂದಿಗೆ ಮಾ.15 ರಂದು ಅವಳನ್ನು ಮದುವೆಯಾಗುವುದಾಗಿ ನಂಬಿಸಿ ಸುಮಾರು ರಾತ್ರಿ 8.30 ಗಂಟೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವಳ ಮೈಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿ ಪರಾರಿ ಆಗಿದ್ದ ಆತನನ್ನು ಬಂಧಿಸುವಲ್ಲಿ ಇಲಾಖೆ ಯಶಸ್ಸು ಕಂಡಿದ್ದು ಸ್ವಾಗತಾರ್ಹ ಎಂದರು.

ಈ ಕೊಲೆಗೆ ಮೂಲ ಕಾರಣೀಕರ್ತರಾದ ಆರೋಪಿಯ ತಂದೆ-ತಾಯಿ ಹಾಗೂ ಸಹೋದರ-ಸಹೋದರಿಯರು ಸೇರಿಕೊಂಡು ಈ ಕೊಲೆ ಮಾಡುವಂತೆ ಪ್ರಚೋದನೆ ನೀಡಿದ್ದಾರೆ. ಈ ಪ್ರಕರಣವು ರಾಜ್ಯ ಮಹಿಳಾ ಸಮುದಾಯ ತಲೆ ತಗ್ಗಿಸುವಂತಾಗಿದೆ. ಇದು ಮರ್ಯಾದಾ ಹತ್ಯೆಯಾಗಿದ್ದು, ಕೂಡಲೇ ಇಲಾಖೆಯವರು ಎಚ್ಚತ್ತುಕೊಂಡು ಕೊಲೆಗೀಡಾದ ಕುಮಾರಿ ದಾನೇಶ್ವರಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು, ಕೊಲೆಯ ಮುಖ್ಯ ಆರೋಪಿಗಳಾದ ಶಿವಕುಮಾರ ಮತ್ತು ಅವರ ತಂದೆ-ತಾಯಿ ಹಾಗೂ ಸಹೋದರ ಸೋದರಿಯರಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು, ನೊಂದ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು, ನೊಂದ ಕುಟುಂಬಕ್ಕೆ ಸೂಕ್ತ ಬಂದೋಬಸ್ತ ನೀಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಕೈಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸಂಚಾಲಕ ಸಿದ್ದು ಮೇಲಿನಮನಿ, ಜಿಲ್ಲಾ ಸಂಚಾಲಕ ರಾಜು ಯಂಟಮಾನ, ರಾಜು ಗುಬ್ಬೇವಾಡ, ಧರ್ಮರಾಜ ಯಂಟಮಾನ, ತಾಲೂಕು ಸಂಚಾಲಕ ಶ್ರೀಶೈಲ ಜಾಲವಾದಿ ಮಾತನಾಡಿದರು.

ಜಿಲ್ಲಾ ಸಂ.ಸಂಚಾಲಕರಾದ ರಾಘು ಗುಡಿಮನಿ, ಅಶೋಕ ಕಾದ್ರಿ, ಉಮೇಶ ರೂಗಿ, ಶರಣು ನಾಟಿಕಾರ ದೇವರಹಿಪ್ಪರಗಿ ಸಂಚಾಲಕ ದೌಲತ ತಳ್ಕೊಳ್ಳಿ, ಸಲೀಂ ನಡುವಿನಮನಿ, ತಾಳಿಕೋಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಮೈಬೂಬ ಢಬರಿ, ಜಿಲ್ಲಾ ಮಹಿಳಾ ಸಂಚಾಲಕಿ ಭಾರತಿ ಚಲವಾದಿ, ಶಶಿಕಲಾ ಮ್ಯಾಕೇರಿ, ರತ್ನಾ ಮಾಕೇರಿ, ಕವಿತಾ ಕಾಂಬಳೆ, ರೇಣುಕಾ ಚಲವಾದಿ ಸೇರಿದಂತೆ ಅನೇಕರಿದ್ದರು.