ಮಡಿವಾಳ ಸಮಾಜಕ್ಕೆ ಖಾಲಿ ನಿವೇಶನ ನೀಡಲು ಮನವಿ

Must Read

ಸಿಂದಗಿ:  ಮಡಿವಾಳ ಮಾಚಿದೇವ ಅವರು ಬಸವಣ್ಣನವರ ಸಮಕಾಲಿನ ಶರಣರು ಅವರ ವಂಶಸ್ಥರಾದ ಮಡಿವಾಳ ಸಮಾಜದ ಬಂಧುಗಳು ಕಾಯಕ ಜೀವಿಗಳು ತಮ್ಮ ಸಮುದಾಯ ಸಂಪ್ರದಾಯಕ ಕಸುಬುಗಳನ್ನು ಮುಂದುವರಿಸಿಕೊಂಡು ಸಮಾಜದಲ್ಲಿ ಹೊಂದಾಣಿಕೆ ಜೀವನ ನಡೆಸಬೇಕು ಎಂದು ಶಾಸಕ ರಮೇಶ ಭೂಸನೂರ ಹೇಳಿದರುು.

ಪಟ್ಟಣದ ಮಡಿವಾಳ ಸಮಾಜದ ವತಿಯಿಂದ ಹಮ್ಮಿಕೊಂಡ ಪ್ರೀತಿಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಶರಣರ ಭೂಮಿಯಲ್ಲಿ ಜನಿಸುವುದೇ  ನಾವು ಪುಣ್ಯವಂತರು  ಸಣ್ಣ ಸಮಾಜವಾದರು ಕೂಡ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದಕ್ಕೆ ಧನ್ಯವಾದಗಳು ತಿಳಿಸಿ ಮಡಿವಾಳ ಸಮಾಜದವರು  ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು .ಮಡಿವಾಳ ಸಮಾಜದ ಏಳ್ಗೆಗಾಗಿ ಯವಕರು ಸಂಘಟನೆ  ಮಾಡುವ ಮೂಲಕ ಅವರಿಗೆ  ಸರ್ಕಾರ ಹಲವಾರು  ಯೋಜನೆಗಳು ಜಾರಿಗೆ ತಂದಿದೆ ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ಈ ಸಮಾರಂಭದಲ್ಲಿ ಮಡಿವಾಳ ಸಮಾಜದ ಪರವಾಗಿ ತಾಲೂಕಾ ಮಡಿವಾಳ ಸಂಘದ ಅಧ್ಯಕ್ಷ ಈರಣ್ಣ ಬ ಅಗಸರ .ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಅಗಸರ ಮಾತನಾಡಿ, ಮಡಿವಾಳ ಸಮಾಜಕ್ಕೆ  ಪಟ್ಟಣದಲ್ಲಿ  ಸರ್ಕಾರ ಈಗಾಗಲೇ ಜಾಗವನ್ನು ಮಂಜೂರ ಮಾಡಿ ಖಾಲಿ ಜಾಗವು ನೊಂದಾಣಿ ಇಲಾಖೆಯಲ್ಲಿ ನೊಂದಣಿ ಮಾಡಲಾಗಿದೆ. ಪುರಸಭೆಯಲ್ಲಿ ಉತಾರ ಕೂಡಾ ದೊರೆತಿದೆ ಆದರೆ ಆ ಖಾಲಿ ಜಾಗವು  ಮಡಿವಾಳ ಸಂಘಕ್ಕೆ  ದೊರೆಯುತ್ತಿಲ್ಲ. ಮಡಿವಾಳ ಸಮಾಜದವರು ಯಾವುದಾದರು ಕಾರ್ಯಕ್ರಮ ಮಾಡಬೇಕಾದರೆ ಬಹಳ ತೊಂದರೆಯಾಗಿ ಆರ್ಥಿಕ ಭಾರವಾಗುತ್ತದೆ ಕಾರಣ  ತಾವು  ಸರ್ಕಾರದ ಖಾಲಿ ಜಾಗದಲ್ಲಿ ಮಡಿವಾಳ ಸಮಾಜದವರಿಗೆ ಸಮುದಾಯ ಭವನ  ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸುವಂತೆ ಮನವಿ ಮಾಡಿಕೊಂಡರು.

ಇದೇ ಸಮಾರಂಭದಲ್ಲಿ ಶಾಸಕ ರಮೇಶ ಭೂಸನೂರ, ಬಿಜೆಪಿ ತಾಲೂಕಾ ಅಧ್ಯಕ್ಷ ಈರಣ್ಣ ರೇವೂರ, ಸುದರ್ಶನ ಜಿಂಗಾಣಿ  ಅವರಿಗೆ ಮಡಿವಾಳ ಸಮಾಜದ ತಾಲೂಕಾ ಅಧ್ಯಕ್ಷ ಈರಣ್ಣ ಅಗಸರ ಸನ್ಮಾನಿಸಿ ಗೌರವಿಸಿದರು.

ಮಡಿವಾಳ ಸಂಘದ ಉಪಾಧ್ಯಕ್ಷ ಶಂಕರ ಅಗಸರ ಯರಗಲ್ಲ್ ಬಿ ಕೆ,ಮಲ್ಲು ಅಗಸರ ಬಂದಾಳ,ಮಹೇಶ ಅಗಸರ, ಅರಳಗುಂಡಗಿ, ಭೀಮಾಶಂಕರ ಅಗಸರ ಮಾಡಬಾಳ, ಮುತ್ತುರಾಜ ಬ್ಯಾಕೋಡ. ಶಿಕ್ಷಕ ಸಾಹಿತಿ ಬಸವರಾಜ ಅಗಸರ,ಮುಖ್ಯ ಶಿಕ್ಷಕ ಶಿವಾನಂದ ಶಹಾಪೂರ, ಸುರೇಶ ಮಡಿವಾಳರ ಕೋರವಾರ, ಶರಣು ಅಗಸರ ಅರಳಗುಂಡಗಿ,ನೀಲಕಂಠ ಮುರಡಿ,ಪ್ರಶಾಂತಗೌಡ ಬಿರಾದಾರ ಬಂದಾಳ, ಆರೀಪ ಅಂತರಗಂಗಿ ಬೂದಿಹಾಳ,ಗಂಗಾ ಅಗಸರ,ಜಗದೇವಿ ಅಗಸರ,ಸಿದ್ದು ಪರೀಟ ಅರ್ಜುನಗಿ, ಆಕಾಶ ಅಗಸರ,ಅಭಿ ಅಗಸರ ಭಾಗವಹಿಸಿದರು.

ಕುಮಾರಿ ಮೇಘಾ  ಪರೀಟ ಸ್ವಾಗತಿಸಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group