Homeಸುದ್ದಿಗಳುಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

ಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

ಸಿಂದಗಿ: ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕ/ಯುವತಿಯರಾದ 18 ರಿಂದ 40 ವರ್ಷದೊಳಗಿನ SC,ST ಹಾಗೂ 18 ರಿಂದ 35 ವರ್ಷದೊಳಗಿನ OBC, GM, ಅಲ್ಪಸಂಖ್ಯಾತರು, ಹಾಗೂ ಅಂಗವಿಕಲರಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಕುಮಾರ ಇನ್ಫೋಟೆಕ್ ಸಿಂದಗಿ ಸಂಸ್ಥೆಯ ಸಹಯೋಗದೊಂದಿಗೆ ನಡೆಯುವ ಕನಿಷ್ಠ 3 ತಿಂಗಳ ಉಚಿತ ವಿವಿಧ ಕೌಶಲ್ಯ ತರಬೇತಿಗಳಾದ 1)ಫ್ಯಾಶನ್ ಡಿಸೈನರ್ (ಕನಿಷ್ಠ 10 ನೇ ತರಗತಿ ಪಾಸ್) 2) ಸೊಲಾರ್ ಪೆನಾಲ್‌ ಇನ್‌ಸ್ಟಾಲೇಶನ್ ಟೆಕ್ನಿಷಿಯನ್ (ಕನಿಷ್ಠ 10 ನೇ ತರಗತಿ ಪಾಸ್) 3) ಫೀಲ್ಡ ಟೆಕ್ನಿಷಿಯನ್ ಕಂಪ್ಯೂಟಿಂಗ್ ಅಂಡ್ ಪೆರಿಫೆರಲ್ (ಕನಿಷ್ಠ 12 ನೇ ತರಗತಿ ಪಾಸ್) 4) ಡಾಕ್ಯೂಮೆಂಟೇಶನ್ ಅಸಿಸ್ಟೆಂಟ್ (ಕನಿಷ್ಠ 10 ನೇ ತರಗತಿ ಪಾಸ್) ಹಾಗೂ ಕಂಪ್ಯೂಟರ್ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಪೂರೈಸಿದ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ಮತ್ತು ವಿವಿಧ ವಲಯಗಳಲ್ಲಿ ಉದ್ಯೋಗ ಕಲ್ಪಿಸಲಾಗುವುದು, ಕೊನೆಯ ದಿನ ನವೆಂಬರ್ 15 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಶ್ರೀ ಕುಮಾರ ಎಮ್ ಮಠ (ಮಡ್ನಳ್ಳಿ) ವ್ಯವಸ್ಥಾಪಕ ನಿರ್ದೇಶಕರು, ಮೋ, ನಂ:9980612923.

RELATED ARTICLES

Most Popular

error: Content is protected !!
Join WhatsApp Group