ಮೂಡಲಗಿ – ನಾಮದೇವ ಸಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಾಧಕರಿಗೆ ವಿಠ್ಠಲಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆರಾ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಮದೇವ ಸಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಾಧಕರಿಗೆ ರಾಜ್ಯ ಮಟ್ಟದ ವಿಠ್ಠಲಶ್ರೀ ಪ್ರಶಸ್ತಿ ನೀಡಿ ಗೌರವಿಸಲು ಅರ್ಹ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಕಲ್ಪ ಕ್ರೀಡಾ ಸಮಾಜ ಸೇವಾ ಸಂಘ ಪ್ರ ಕಾರ್ಯದರ್ಶಿ ಮಂಜುನಾಥ ರೇಳೆಕರ ತಿಳಿಸಿದ್ದಾರೆ.
ಸಮಾಜದವರು ಟೇಲರಿಂಗ್, ಕ್ರೀಡೆ, ವಿಜ್ಞಾನ, ನಾಟಕ, ಸಿನೆಮಾ, ಸಂಗೀತ , ಮಾಧ್ಯಮ, ಕೃಷಿ, ಫ್ಯಾಷನ್ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಸಾಧನೆ ಮಾಡಿದ ದಾಖಲೆಗಳ ಝರಾಕ್ಸ್ ಪಾಸಪೋರ್ಟ್ ಅಳತೆಯ 2 ಪೋಟೋ ಜೊತೆಯಲ್ಲಿ ಜುಲೈ 31ರೊಳಗೆ ಮಂಜುನಾಥ ರೇಳೆಕರ ಮನೆ ನಂ 573 ಗಾಂಧಿ ಚೌಕ, ಅಂಚೆ – 591312 ತಾ, ಮೂಡಲಗಿ, ಜಿಲ್ಲೆ , ಬೆಳಗಾವಿ ಇವರಿಗೆ ಸಲ್ಲಿಸುವುದು ಮಾಹಿತಿಗಾಗಿ, 8867372134, 7022095868 ಗೆ ಸಂಪರ್ಕಿಸಬಹುದು.