ಅನಿಲ ಗಸ್ತಿ ಡಿಎಸ್‍ಎಸ್ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ನೇಮಕ

Must Read

ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ಪಟ್ಟಣದ ಸಂಘಟನೆಯ ಕ್ರಿಯಾಶೀಲರಾದ ಅನಿಲ ಎನ್.ಗಸ್ತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಡಿಎಸ್‍ಎಸ್ ಮೂಡಲಗಿ ತಾಲೂಕಾ ಸಂಘಟನಾ ಸಂಚಾಲಕ ಶಾಬಪ್ಪ ಕ.ಸಣ್ಣಕ್ಕಿ ಹೇಳಿದರು.

ಅವರು ಪಟ್ಟಣದ ಡಾ:ಅಂಬೇಡ್ಕರ ನಗರದಲ್ಲಿನ ಅಂಬೇಡ್ಕರ ಮಂದಿರದಲ್ಲಿ ಕ.ರಾ.ಡಿ.ಎಸ್.ಎಸ್ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ನೇಮಕ ಮಾಡಿ ಅನಿಲ ಎನ್.ಗಸ್ತಿ ಅವರಿಗೆ ಆದೇಶ ಪತ್ರ ವಿತರಿಸಿ ಮತ್ತು ಸತ್ಕರಿಸಿ ಮಾತನಾಡಿ,ಗಸ್ತಿ ಅವರು ವಿದ್ಯಾರ್ಥಿಗಳ ಕುಂದು ಕೊರತೆಗಳ ನಿವಾರಣೆಗಾಗಿ ಶ್ರಮಿಸಬೇಕೆಂದ ಅವರು ಡಾ: ಬಾಬಾಸಾಹೇಬ ಅಂಬೇಡ್ಕರರವರ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಕಾರ್ಯ ನಿರ್ವಹಿಸಬೇಕೆಂದರು.

ಈ ಸಮಯದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಬಾಳೆಶ ಬನಹಟ್ಟಿ, ತಾಲೂಕಾ ಸಂಚಾಲಕ ಶಾಬು ಸಣ್ಣಕ್ಕಿ, ರಾಜು ಪರಸನ್ನವರ, ವಿಲಾಸ ಸಣ್ಣಕ್ಕಿ, ಸುಂದರ ಬಾಲಪ್ಪನವರ ಮತ್ತಿತರರು ಗಸ್ತಿ ಅವರನ್ನು ಅಭಿನಂದಿಸಿ ಶುಭಕೋರಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group