ಮೂಡಲಗಿ: ಉತ್ತರ ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಸಂಗೀತ ಕಲಾವಿದರಿದ್ದು ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿ ಬೆಳೆಸುವುದು ಅವಶ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ, ಬೆಂಗಳೂರಿನ ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ‘ಭಾವಸ್ವರ ಸೌರಭ’ ಸುಗಮ ಸಂಗೀತೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಂಗೀತಗೋಷ್ಠಿ ಮತ್ತು ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಕಲಾವಿದರನ್ನು ಬೆಳೆಸಬೇಕು ಎಂದರು.
ಅತಿಥಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾತನಾಡಿ ಪಾಶ್ಚಿಮಾತ್ಯ ಸಂಗೀತದ ಅಬ್ಬರದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವು ಜನರಿಂದ ದೂರವಾಗುತ್ತಲಿದೆ. ಲಯನ್ಸ್ ಕ್ಲಬ್ ಪರಿವಾರದವರು ಸುಗಮ ಸಂಗೀತೋತ್ಸವವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಹಿಂದೂಸ್ತಾನಿ ಗಾಯಕ ರವೀಂದ್ರ ಸೊರಗಾಂವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ, ವೆಂಕಟೇಶ ಸೋನವಾಲಕರ, ಶಿವಪುತ್ರಯ್ಯ ಪಠಪತಿ, ಶಂಕರಯ್ಯ ಹಿರೇಮಠ, ಬಾಲಶೇಖರ ಬಂದಿ, ಸುಪ್ರೀತ ಸೋನವಾಲಕರ, ಕೃಷ್ಣಾ ಕೆಂಪಸತ್ತಿ ವೇದಿಕೆಯಲ್ಲಿದ್ದರು.
ರವೀಂದ್ರ ಸೊರಗಾಂವಿ, ಎಮಿನಂಟ್ ಎಂಜಿನೀಯರ್ ಪ್ರಶಸ್ತಿ ಪಡೆದಿರುವ ಸಂಜಯ ಮೋಕಾಶಿ, ಈಶ್ವರ ಕಂಕಣವಾಡಿ, ಕ್ರಿಕೆಟ್‍ದಲ್ಲಿ ಸಾಧನೆ ಮಾಡಿರುವ ಶಿವಾನಂದ ಗಾಡವಿ, ಅಪ್ಪಣ್ಣ ಬಡಿಗೇರ, ಈರಣ್ಣ ಜಕಾತಿ ಅವರನ್ನು ಸನ್ಮಾನಿಸಿದರು.
ಅರ್ಪಿತಾ ವೇಣು, ಬಸವರಾಜ ಮುಗಳಖೋಡ, ರವೀಂದ್ರ ಸೊರಗಾಂವಿ, ಶಬ್ಬೀರ ಡಾಂಗೆ, ಹೊಂಬೇಗೌಡ ಎಚ್. ಓಂಕಾರ ಪತ್ತಾರ, ಸುಷ್ಮಾ ನಂದಗಾಂವಿ, ಬಸವಲಿಂಗಯ್ಯ ಹಿಡಕಲ್, ಅಕ್ಕಮಹಾದೇವಿ ಮಾದರ, ಐಶ್ವರ್ಯ ತಳವಾರ, ಶಿವಾನಂದ ಬಿದರಿ ವಿವಿಧ ಹಾಡುಗಳನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು. ಐಶ್ವರ್ಯ ಮಿರ್ಜಿ ಪ್ರದರ್ಶಿಸಿದ ಭರತನಾಟ್ಯ ಮತ್ತು ಚಂದ್ರಶೇಖರ ಪ್ರದರ್ಶಸಿದ ಭಕ್ತಪ್ರಲ್ಹಾದ ರೂಪಕ ಎಲ್ಲರ ಗಮನಸೆಳೆದವು.
ಶಿವಾನಂದ ಕಿತ್ತೂರ ಸ್ವಾಗತಿಸಿದರು, ಸೋಮಶೇಖರ ಹಿರೇಮಠ, ರಾಮಚಂದ್ರ ಕಾಕಡೆ ನಿರೂಪಿಸಿದರು.