spot_img
spot_img

ಸಂವಿಧಾನದ ರಾಷ್ಟ್ರೀಯ ಅಂತಾರಾಷ್ಟ್ರೀಯ ಸಮ್ಮೇಳನ

Must Read

- Advertisement -

ಭಾರತ ಸಂವಿಧಾನದ ಸಮ್ಮೇಳನ ಮತ್ತು ಎಕ್ಸಪೊ ಕಾರ್ಯಕ್ರಮವು ದಿನಾಂಕ: 24ನೇ, 25ನೇ ಫೆಬ್ರುವರಿ-2024 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು ಸಮ್ಮೇಳನದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ತಜ್ಞರು ಭಾಗವಹಿಸುವರು ಆರ್ಥಿಕ ಸಾಮಾಜಿಕ ಧಾರ್ಮಿಕ ವಿಷಯಗಳನ್ನು ಚರ್ಚಿಸುವುಲಾಗುವುದು ಎಂದು ಬಸವ ತಿಳಿವಳಿಕೆ ಮತ್ತು ಸಂಶೊಧನಾ ಕೇಂದ್ರ ಪುಣೆ ಇದರ ವಿಶ್ವಸ್ಥರು ಸುಧಾ ಪಾಟೀಲ ಬೆಳಗಾವಿ ಇವರು ತಿಳಿಸಿದ್ದಾರೆ.

Foot prints of social reformation in Karnatak ಎಂಬ ವಿಷಯದ ಮೇಲೆ ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು, ಬಸವ ತಿಳಿವಳಿಕೆ ಮತ್ತು ಸಂಶೊಧನಾ  ಕೇಂದ್ರ ಪುಣೆ ಇವರು ಬಸವಣ್ಣ ಮತ್ತು ಸಮಕಾಲೀನ ಶರಣರ ಚಿಂತನೆಗಳನ್ನು ಆಶಯಗಳನ್ನು ವೈಚಾರಿಕವಾಗಿ ಸಾದರಪಡಿಸುವರು.

ಎಲ್ಲರೂ online ಮೂಲಕ ನೋಂದಾಯಿಸಿಕೊಂಡು  ಸಮ್ಮೇಳನದಲ್ಲಿ Online ಮೂಲಕ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

- Advertisement -

ಅಕ್ಕನ ಅರಿವು ಬಸವಾದಿ ಶರಣರ ಚಿಂತನ ಕೂಟ ವಚನ ಅಧ್ಯಯನ ವೇದಿಕೆ ಸಂಘ ಸಂಸ್ಥೆಗಳ  ಮೂಲಕ ರಾಷ್ಟ್ರ ಮತ್ತು ಅಂತರ ರಾಷ್ಟ್ರ ಮಟ್ಟದಲ್ಲಿ ಬಸವ ತತ್ವ  ಪ್ರಚಾರ ಮಾಡುತ್ತಿದ್ದಾರೆ. ಇವರು ಬಸವ ಸಿದ್ಧಾಂತಗಳ ಕುರಿತಾಗಿ ಸುಮಾರು ನಲವತ್ತಕ್ಕೂ ಅಧಿಕ ಪುಸ್ತಕ ಪ್ರಕಟಿಸಿದ್ದು ಉತ್ತಮ ವಾಗ್ಮಿ ಸಂಘಟನಾ ಕೌಶಲ್ಯ ಹೊಂದಿದವರು  ಅಪ್ರತಿಮ ಸಾಮಾಜಿಕ ಚಳವಳಿಯ ನಾಯಕತ್ವ ಹೊಂದಿದವರು. ಬುದ್ಧ ಬಸವ ಗಾಂಧಿ ಅಂಬೇಡ್ಕರ ಅವರ ವಿಚಾರ ಚಿಂತನಗಳು ಇಂದು ಹೆಚ್ಚು ಹೆಚ್ಚು ಪ್ರಸ್ತುತ.

ಸಂವಿಧಾನ ಅಂಗಿಕಾರವಾಗಿ  75 ವರ್ಷಗಳು ಜರುಗಿದ ಸಂದರ್ಭದಲ್ಲಿ ಕರ್ನಾಟಕ ಘನ ಸರಕಾರ ಇಂತಹ ಬೃಹತ್ ಸಮ್ಮೇಳನ ಕಾರ್ಯಾಗಾರ ಹಮ್ಮಿಕೊಂಡು ಜನಪರ ಯೋಜನೆ ಬಡವರ ಬಯಕೆಯ ಪ್ರಜಾಪ್ರಭುತ್ವ  ಪರಿಚಯಿಸುವ ಹೆಮ್ಮೆಯ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group