Homeಸುದ್ದಿಗಳುಸಿಂದಗಿಯನ್ನು ಜಿಲ್ಲಾ ಕೇಂದ್ರವಾಗಿಸಲು ಅರುಣ ಶಹಾಪೂರ ಆಗ್ರಹ

ಸಿಂದಗಿಯನ್ನು ಜಿಲ್ಲಾ ಕೇಂದ್ರವಾಗಿಸಲು ಅರುಣ ಶಹಾಪೂರ ಆಗ್ರಹ

ಸಿಂದಗಿ; ಪಂಚ ನದಿಗಳ ಬೀಡು ಎಂದೆ ಹೆಸರಾದ ಅಖಂಡ ಜಿಲ್ಲೆ ಬಿಜಾಪುರ ವಿಭಜನೆಯಾಗಿ ಬಾಗಲಕೋಟ ಜಿಲ್ಲೆಯನ್ನಾಗಿ ಮಾಡಿ ಎಲ್ಲ ನೀರಾವರಿ ಕ್ಷೇತ್ರ, ಕಾರ್ಖಾನೆ, ನೇಕಾರಿಕೆ, ಗ್ರಾನೆಟ್, ಶಿಕ್ಷಣ ಸೇರಿದಂತೆ ಅನೇಕ ಸೌಲಭ್ಯಗಳಿಂದ ವಂಚಿತವಾಗಿ ಬರದ ನಾಡೆಂದು ಹಣೆಪಟ್ಟಿ ಅಂಟಿಕೊಂಡಿದೆ ಇವೆಲ್ಲವನ್ನು ನೋಡಿದರೆ ಜಿಲ್ಲೆ ವಿಭಜನೆ ಮಾಡುವುದಾದರೆ ಎಲ್ಲ ರೀತಿಯಲ್ಲಿ ಮುಂದುವರೆದ ಸಿಂದಗಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಮಾಜಿ ಎಂಎಲ್ಸಿ ಅರುಣ ಶಹಾಪುರ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ವಿಮೋಚನೆಯಲ್ಲಿ ಸ್ವಾಮಿ ರಮಾನಂದ ತೀರ್ಥರ ಕಾರ್ಯಕ್ಷಮತೆ, ಗೋಕಾಕ ಚಳವಳಿಯಲ್ಲಿ ತೋಂಟದ ಶ್ರೀಗಳ ಕಾರ್ಯಸಾಧನೆ, ರಜಾಕರ ಆಳ್ವಿಕೆಯಲ್ಲಿ ಕಾರ್ಯನಿರ್ವಹಿಸಿದ ಸೂರತ್ ನ, ಕಂದಾಯ ಬಂಡಾಯ, ತೆರಿಗೆ ಬಂಡಾಯ, ಗಜಲ್ ಗಾಯಕ, ರಂಗ ಕಲಾವಿದ ಹಂದಿಗನೂರ ಸಿದ್ರಾಮಪ್ಪ ಇಂತಹ ಅನೇಕ ಕಲಾವಿದರ ಇತಿಹಾಸವನ್ನು ವಿಜಯಪುರ ಜಿಲ್ಲೆಯನ್ನು ಹೊರತು ಪಡಿಸಿದರೆ ಶೈಕ್ಷಣಿಕ, ಔದ್ಯೋಗಿಕ, ರಾಷ್ಟೀಯ ಹೆದ್ದಾರಿ, ನೀರಾವರಿ, ಕೃಷಿ, ಸಾರಿಗೆ, ವ್ಯಾಪಾರ, ಸರಕು ಸಾಗಾಣಿಕೆಯಲ್ಲಿ ಮುಂದುವರೆದಿದೆ ಬಹುತೇಕವಾಗಿ ವ್ಯಾಪಾರ ಕೇಂದ್ರವಾಗಿ ಬೆಳೆದಿದೆ ಸಿಂದಗಿ ತಾಲುಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಲ್ಲಿ ಎಲ್ಲ ಅರ್ಹತೆಗಳು ಹೊಂದಿದೆ. ಇದರ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಎಲ್ಲ ನಾಯಕರು ಸೇರಿ ಶಾಸಕರ ನೇತೃತ್ವದಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಕಾರಣ ಈ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗುವಂತೆ ನಮ್ಮೆಲ್ಲರ ಹಕ್ಕೊತ್ತಾಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಬೌಗೋಳಿಕವಾಗಿ ಅವಲೋಕನ ಮಾಡುವದಾದರೆ ತಾಳಿಕೋಟಿ, ದೇವರಹಿಪ್ಪರಗಿ, ಆಲಮೇಲ ತಾಲೂಕುಗಳು ಸಿಂದಗಿ ತಾಲೂಕಿನಿಂದ ವಿಭಜನೆಗೊಂಡಿದ್ದು ಅಲ್ಲದೆ ಇಂಡಿ ಮತಕ್ಷೇತ್ರವು ಈ ತಾಲೂಕಿನ ಕೆಲ ಹಳ್ಳಿಗಳ ಅವಲಂಬಿತವಾಗಿದೆ. ೧೫೬ ಹಳ್ಳಿಗಳ ದೊಡ್ಡದಾದ ತಾಲೂಕು ವಿಭಜನೆಯಲ್ಲಿ ಒಡೆದು ಛಿದ್ರವಾಗಿದೆ ಕಾರಣ ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದಾದರೆ ಸಾಮಾಜಿಕವಾಗಿ ನ್ಯಾಯ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಗಣ್ಯವ್ಯಾಪಾರಸ್ಥ ಅಶೋಕ ವಾರದ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಪ್ರಕಾಶ ಹಿರೇಕುರಬರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಎನ್.ಪಾಟೀಲ, ಸಾಯಬಣ್ಣ ದೇವರಮನಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group